Advertisement

802 ಎರೆಹುಳ ತೊಟ್ಟಿ ನಿರ್ಮಾಣಕ್ಕೆ ಬೇಡಿಕೆ  

08:15 PM Sep 22, 2021 | Team Udayavani |

ಬಂಟ್ವಾಳ: ಸರಕಾರವು ನರೇಗಾ ಮೂಲಕ ರೈತ ಬಂಧು ಅಭಿಯಾನದಡಿ ಆ. 15ರಿಂದ ಅ. 15ರ ವರೆಗೆ ಪ್ರತೀ ಗ್ರಾ.ಪಂ. ಮಟ್ಟದಲ್ಲಿ ಕನಿಷ್ಠ 25 ಎರೆಹುಳ ತೊಟ್ಟಿ ನಿರ್ಮಾಣಕ್ಕೆ ಆದೇಶಿಸಿದ್ದು, ತಾಲೂಕಿನಲ್ಲಿ 802 ಎರೆಹುಳ ತೊಟ್ಟಿ ನಿರ್ಮಾಣಕ್ಕೆ ಬೇಡಿಕೆ(ಅರ್ಜಿ ಸಲ್ಲಿಕೆ) ಬಂದಿದೆ.

Advertisement

ಬಿ.ಸಿ.ರೋಡ್‌ನ‌ಲ್ಲಿರುವ ತೋಟಗಾರಿಕೆ ಇಲಾಖೆಯ ಆವರಣದಲ್ಲಿ ನಿರ್ಮಿಸಲಾದ ಮಾದರಿ ಎರೆಹುಳ ತೊಟ್ಟಿಯನ್ನು ಉದ್ಘಾ ಟಿಸುವ ಮೂಲಕ ಶಾಸಕ ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು ತಾಲೂಕಿನಲ್ಲಿ ಅಭಿ ಯಾನಕ್ಕೆ ಚಾಲನೆ ನೀಡಿದ್ದರು. ತಾಲೂಕಿನ 58 ಗ್ರಾ.ಪಂ.ಗಳಲ್ಲಿ ಕನಿಷ್ಠ 25ರಂತೆ 1,450 ತೊಟ್ಟಿಗಳ ನಿರ್ಮಾಣದ ಗುರಿ ನೀಡ ಲಾಗಿದೆ.

70ಕಾಮಗಾರಿ ಆರಂಭ:

ತಾಲೂಕಿನಲ್ಲಿ ತೊಟ್ಟಿ ನಿರ್ಮಾಣಕ್ಕಾಗಿ ಈ ತನಕ 802 ಅರ್ಜಿಗಳು ಸಲ್ಲಿಕೆಯಾಗಿದ್ದು, ಅಂದರೆ ಶೇ. 55.31ರಷ್ಟು ಗುರಿ ಸಾಧಿಸಿದಂತಾಗಿದೆ. ಅದರಲ್ಲಿ ಸುಮಾರು 70 ತೊಟ್ಟಿಗಳ ಕಾಮಗಾರಿ ಈಗಾಗಲೇ ಆರಂಭಗೊಂಡಿದೆ. ಸದ್ಯಕ್ಕೆ ಭೌತಿಕವಾಗಿ 14 ಕಾಮಗಾರಿಗಳು ಪೂರ್ಣಗೊಂಡಿದ್ದು, ಹೆಚ್ಚಿನ ಕಾಮಗಾರಿಗಳು ಪ್ರಗತಿಯಲ್ಲಿದೆ. ಸಂಬಂಧಪಟ್ಟ ಪೋರ್ಟಲ್‌ನಲ್ಲಿ ಅಪ್‌ಲೋಡ್‌ ಆಗದೇ ಇರುವುದರಿಂದ ಪೂರ್ಣ ಗೊಂಡಿರುವ ಕಾಮಗಾರಿಗಳ ನಿರ್ದಿಷ್ಟ ಸಂಖ್ಯೆ ಲಭ್ಯವಾಗಿಲ್ಲ.

ಮಣ್ಣಿನ     ಫಲವತ್ತತೆಯನ್ನು  ಕಾಪಾ ಡುವಲ್ಲಿ ಪ್ರಮುಖ ಪಾತ್ರ ವಹಿಸು ತ್ತಿರುವ ಎರೆಹುಳು ಗೊಬ್ಬರವನ್ನು ಉತ್ತೇಜಿ ಸುವ ನಿಟ್ಟಿನಲ್ಲಿ    ಸರಕಾರ ಈ ತೀರ್ಮಾನ ಕೈಗೊಂಡು, ರಾಜ್ಯಾದ್ಯಂತ ಚಾಲನೆ ನೀಡಲಾಗಿತ್ತು. ವೈಯಕ್ತಿಕ ಫಲಾ ನುಭವಿಗಳು, ಸ್ವಸಹಾಯ ಗುಂಪುಗಳು, ರೈತ ಉತ್ಪಾದಕ ಸಂಸ್ಥೆಗಳು, ಸರಕಾರಿ ಶಾಲೆ, ಕಾಲೇಜು, ಹಾಸ್ಟೆಲ್‌ಗ‌ಳಲ್ಲಿ ಎರೆಹುಳ ಗೊಬ್ಬರ ತೊಟ್ಟಿ ನಿರ್ಮಾಣಕ್ಕೆ ಅವಕಾಶ ನೀಡಲಾಗಿದೆ. ರೈತಬಂಧು ಅಭಿಯಾನದ ಯಶಸ್ವಿ  ಅನುಷ್ಠಾನಕ್ಕಾಗಿ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ಮೇಲ್ವಿಚಾರಣ ಸಮಿತಿಯನ್ನೂ ರಚನೆ ಮಾಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಜಿ.ಪಂ. ಸಿಇಒ ಅಧ್ಯಕ್ಷರು, ತಾಲೂಕು ಮಟ್ಟದ ಸಮಿತಿಗೆ ತಾ.ಪಂ. ಇಒ ಅಧ್ಯಕ್ಷರಾಗಿರುತ್ತಾರೆ.

Advertisement

ಪ್ರತೀ ಗ್ರಾ.ಪಂ.ಗಳಿಂದ ಎರೆಹುಳ ಘಟಕ ನಿರ್ಮಾಣಕ್ಕೆ ಬೇಡಿಕೆ ಬರುತ್ತಿದೆ. ರೈತರು ತೊಟ್ಟಿ ನಿರ್ಮಾಣ ಮಾಡುವಂತೆ ಪಂಚಾಯತ್‌ನಿಂದಲೂ ಪ್ರೋತ್ಸಾಹ ನೀಡುವ ಕಾರ್ಯ ನಡೆಯುತ್ತಿದೆ. ಹೀಗಾಗಿ ರೈತರು ತೊಟ್ಟಿ ನಿರ್ಮಾಣಕ್ಕೆ ಮುಂದೆ ಬರುತ್ತಿದ್ದಾರೆ. ರಾಜಣ್ಣ, ಕಾರ್ಯ ನಿರ್ವಹಣಾಧಿಕಾರಿ, ಬಂಟ್ವಾಳ ತಾ.ಪಂ.

ತಾಲೂಕಿನಲ್ಲಿ ರೈತ ಬಂಧು ಅಭಿಯಾನ ಪ್ರಗತಿಯಲ್ಲಿದ್ದು, ಎಲ್ಲ ಗ್ರಾ.ಪಂ.ಗಳಿಂದ ಗುರಿಯಷ್ಟು ಬೇಡಿಕೆ ಬಂದಿಲ್ಲ. ಜನರಿಗೆ ಘಟಕ ನಿರ್ಮಾಣದ ಅನಿವಾರ್ಯದ ಕುರಿತು ಇನ್ನೂ ಹೆಚ್ಚಿನ ಜಾಗೃತಿ ಅಗತ್ಯವಿದೆ. ಆಗ ಘಟಕದ ಬೇಡಿಕೆಯು ವೇಗ ಪಡೆದುಕೊಳ್ಳುವ ಸಾಧ್ಯತೆ ಇದೆ. ದಿನೇಶ್‌, ಸಹಾಯಕ ನಿರ್ದೇಶಕರು, ಬಂಟ್ವಾಳ ತಾ.ಪಂ.

Advertisement

Udayavani is now on Telegram. Click here to join our channel and stay updated with the latest news.

Next