Advertisement

ಕಾಪು: ಕೋಳಿ ಮೊಟ್ಟೆಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

01:14 PM Jul 03, 2021 | Team Udayavani |

ಕಾಪು: ಗ್ರಾಮೀಣ ಪ್ರದೇಶಗಳಲ್ಲಿ ಕೋಳಿ ಮೊಟ್ಟೆಗೆ ಬೇಡಿಕೆ ಹೆಚ್ಚಿದ್ದು, ಸರಬರಾಜಿನಲ್ಲಿ ಕೂಡಾ ಭಾರೀ  ಏರಿಕೆ ಕಂಡು ಬಂದಿದೆ.

Advertisement

ಮಾರುಕಟ್ಟೆಯಲ್ಲಿ ತಾಜಾ ಮೀನಿನ ಅಭಾವ, ಅದರ ಜೊತೆಗೆ ಮೀನಿನ ಬೆಲೆಯೂ ಗಗನಕ್ಕೆ ಏರಿರುವುದರಿಂದ  ಮೊಟ್ಟೆಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಕಂಡು ಬಂದಿದೆ.

ಏಪ್ರಿಲ್ ತಿಂಗಳಿನಿಂದ ಮೊಟ್ಟೆಯ ದರದಲ್ಲಿ ಏರಿಕೆ ಕಾಣುತ್ತಿದ್ದು, ಚಿಲ್ಲರೆ ಅಂಗಡಿಯಲ್ಲಿ 5 ರೂ. ಇದ್ದ ಮೊಟ್ಟೆಯ ದರ ಈಗ 6.50 ರಿಂದ 7 ರೂ. ತಲುಪಿದೆ ಎಂದು ಮೊಟ್ಟೆ ವ್ಯಾಪಾರಿಗಳು ತಿಳಿಸಿದ್ದಾರೆ.

ಲಾಕ್ ಡೌನ್ ಎಫೆಕ್ಟ್ ಜೊತೆಗೆ ಸಮುದ್ರದಲ್ಲಿ ಮೀನುಗಾರಿಕೆಗೆ ರಜೆ ಘೋಷಿಸಿರುವ ಹಿನ್ನೆಲೆಯಲ್ಲಿ ಮೊಟ್ಟೆಗೆ ಬೇಡಿಕೆ ಹೆಚ್ಚಾಗಿರುವುದು ಒಂದೆಡಯಾದರೆ, ಮತ್ತೊಂದೆಡೆ ಪೌಷ್ಟಿಕಾಂಶಯುಕ್ತವಾದ ಆಹಾರದ ಪಟ್ಟಿಯಲ್ಲಿರುವ ಮೊಟ್ಟೆ ಸೇವನೆಯಿಂದ ಕೊರೊನಾ ಸಂಧರ್ಭದಲ್ಲಿ ಮನುಷ್ಯನ ದೇಹದಲ್ಲಿ ಇಮ್ಯುನಿಟಿ ಪವರ್ ಹೆಚ್ಚಾಗುತ್ತದೆ ಎಂಬ ಕಾರಣದಿಂದಲೂ ಮಾಂಸಾಹಾರಿಗಳು ಹೆಚ್ಚಾಗಿ ಮೊಟ್ಟೆಯನ್ನೇ ಈಗ ನೆಚ್ಚಿ ಕೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next