ವಾರ್ಡ್ ಮಹಿಳೆಯರು ಮತ್ತು ಮುಖಂಡರು ಗ್ರಾಪಂಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. 3ನೇ ವಾರ್ಡ್‌ನ ಮಂಕಾಳಮ್ಮ ಮತ್ತು ನಾಗವೇಣಿ ಮಾತನಾಡಿ, ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಗಂಭೀರಗೊಂಡಿದ್ದು, ಇಂತಹ ಸಂದಿಗ್ಧ ಸ್ಥಿತಿಯಲ್ಲಿ ಖಾಸಗಿ ನಳ ಹೊಂದಲು ಗ್ರಾಪಂ. ಪರವಾನಗಿ ನೀಡಿದೆ. ಗ್ರಾಮದ ಪ್ರತಿಯೊಂದು
ಮನೆಯವರು ಗ್ರಾಪಂ.ಗೆ 3300ರೂ. ನೀಡಿ ಒಂದೊಂದು ನಳಗಳನ್ನು ಹಾಕಿಸಿಕೊಂಡಿದ್ದಾರೆ. ಇನ್ನೂ ಕೆಲವರು
ಹಣ ನೀಡದೆ ನಳ ಹಾಕಿಕೊಂಡಿದ್ದಾರೆ. ಆದರೆ ಎರಡು ತಿಂಗಳಿಂದ ಮನೆಯ ನಳ ಮತ್ತು ಸಾರ್ವಜನಿಕರ
ನಳಗಳಲ್ಲಿಯು ನೀರು ಇಲ್ಲದಂತಾಗಿದೆ. ಇದರಿಂದ ಗ್ರಾಮದಲ್ಲಿ ನೀರಿನ ಸಮಸ್ಯೆ ಉಲ್ಬಣಗೊಳ್ಳುತ್ತಿದೆ.
ಕಾರಣ ಗ್ರಾಮಸ್ಥರು ಹಲವು ಬಾರಿ ಗ್ರಾಮಾಡಳಿತಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಕ್ರಮ ಕೈಗೊಂಡಿಲ್ಲ
ಎಂದರು.
Advertisement
ನಂತರ ಶಂಭುಲಿಂಗಪ್ಪ ಮತ್ತು ಮೇಟಿ ಮರೇಣ್ಣ ಮಾತನಾಡಿ, ಮಹಿಳೆಯರು ಬೆಳಿಗ್ಗೆಯಿಂದ ಗ್ರಾಪಂ.ಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರೂ, ಇದುವರೆಗೂ ಸಮಸ್ಯೆಯ ಬಗ್ಗೆ ಕೇಳುವುದಕ್ಕೆ ಅಧ್ಯಕ್ಷ ಮತ್ತು ಯಾವ ಒಬ್ಬಸದಸ್ಯರಾಗಲಿ ಬೇಟಿ ನೀಡದಿರುವುದು ವಿಷಾದನೀಯ ಎಂದರು. ಸ್ಥಳಕ್ಕಾಗಮಿಸಿದ ಪಿಡಿಒ ಎ.ಮಂಜುನಾಥ, ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಕೆಇಬಿ ಅಧಿಕಾರಿಗಳೊಂದಿಗೆ ಚರ್ಚಿಸಿ 24 ಗಂಟೆ ವಿದ್ಯುತ್ ನೀಡಬೇಕು ಎಂದು
ಮನವಿ ಸಲ್ಲಿಸಿದ್ದೇವೆ. ನೂತನವಾಗಿ 3 ಬೋರ್‌ಗಳನ್ನು ಕೊರೆಸಲಾಗಿದೆ. ಒಂದು ವಾರದೊಳಗೆ ಸಮಸ್ಯೆ
ಪರಿಹರಿಸುತ್ತೇವೆ ಎಂದು ಭರವಸೆ ನೀಡಿದರು. ತಾತ್ಕಾಲಿಕವಾಗಿ 2 ಟ್ಯಾಂಕರ್ ವ್ಯವಸ್ಥೆ ಮಾಡಲಾಗಿದೆ
ಎಂದರು.
ಈಶ್ವರಪ್ಪ, ಸುಡೋ ಮಲ್ಲಪ್ಪ, ಕರೇಪ್ಪ, ಕೆಂಚಪ್ಪ, ಕರಿಬಸವ, ಜಡೇಪ್ಪ, ಮೇಟಿ ರಂಗಯ್ಯ, ರುದ್ರೇಶ್, ಮೇಟಿ
ಪುಜಾರಿ, ಸಿದ್ದಲಿಂಗಯ್ಯ, ಅಕºರ್, ಕರೆಣ್ಣ ಹಾಗೂ ಇನ್ನಿತರ ಗ್ರಾಮಸ್ಥರು ಪಾಲ್ಗೊಂಡಿದ್ದರು.