Advertisement
ಕೋವಿಡ್-19 ಹಿನ್ನೆಲೆಯಲ್ಲಿ ಸರಕಾರವು ಮಾತೃಪೂರ್ಣದಡಿ ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ತಯಾರಿಸಿ ನೀಡುವುದನ್ನು ಸ್ಥಗಿತಗೊಳಿಸಿದೆ. ಪರ್ಯಾಯವಾಗಿ ಕಿಟ್ ನೀಡುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಜಾರಿಗೊಳಿಸಿದೆ. ಎಪ್ರಿಲ್, ಮೇ ತಿಂಗಳಿನಲ್ಲಿ ಒಬ್ಬರಿಗೆ 1,260 ರೂ. ವೆಚ್ಚದ ಸಾಮಗ್ರಿಗಳನ್ನು ಒಳಗೊಂಡ ಕಿಟ್ ನೀಡಲಾಗಿದೆ. ಈ ಯೋಜನೆ ಜೂನ್‌ಗೂ ವಿಸ್ತರಣೆಯಾಗಿದ್ದು, ಒಬ್ಬರಿಗೆ 630 ರೂ. ಮೊತ್ತದ ಕಿಟ್ ವಿತರಣೆಯಾಗಲಿದೆ.
ಉಡುಪಿ ಜಿಲ್ಲೆಯಲ್ಲಿ 5,989 ಗರ್ಭಿಣಿಯರು, 5,559 ಬಾಣಂತಿಯರು ಹಾಗೂ ದ.ಕ. ಜಿಲ್ಲೆಯಲ್ಲಿ 24,000 ಫಲಾನುಭವಿಗಳು ಮಾತೃಪೂರ್ಣ ಯೋಜ ನೆಯ ಕಿಟ್ ಪಡೆದುಕೊಂಡಿದ್ದಾರೆ. ಬಿಸಿಯೂಟ ಯೋಜನೆ ಪ್ರಾರಂಭವಾದ ಬಳಿಕ ಇದೇ ಮೊದಲ ಬಾರಿ ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಇಲಾಖೆಯು ಮಾತೃಪೂರ್ಣ ಯೋಜನೆಯಡಿಯಲ್ಲಿ ಶೇ. 100ರಷ್ಟು ಪ್ರಗತಿ ಸಾಧಿಸಿದೆ. ಬಿಸಿಯೂಟಕ್ಕೆ ಯೋಜನೆ
2020ರ ಮಾರ್ಚ್ ವರೆಗೆ ಉಡುಪಿ ಜಿಲ್ಲೆಯಲ್ಲಿ 1,191 ಅಂಗನವಾಡಿ ಕೇಂದ್ರಗಳಲ್ಲಿ 4,912 ಗರ್ಭಿಣಿಯರು, 5,267 ಬಾಣಂತಿಯರು ನೋಂದಾಯಿಸಿ ಕೊಂಡಿದ್ದು, ಅವರಲ್ಲಿ 1,199 ಗರ್ಭಿಣಿಯರು ಮತ್ತು 976 ಬಾಣಂತಿಯರು ಬಿಸಿಯೂಟಕ್ಕೆ ಹಾಜರಾಗುತ್ತಿದ್ದರು. ಈ ಮೂಲಕ ಯೋಜನೆಯು ಶೇ. 20ರಷ್ಟು ಪ್ರಗತಿಯನ್ನಷ್ಟೇ ಸಾಧಿಸಿತ್ತು. ದಕ್ಷಿಣ ಕನ್ನಡದಲ್ಲಿ ಸುಮಾರು 2,400 ಫಲಾನುಭವಿಗಳು ಮಾತ್ರ ಬಿಸಿಯೂಟ ಸೇವಿಸುತ್ತಿದ್ದರು.
Related Articles
ಕಳೆದ ಮೂರು ವರ್ಷಗಳಿಂದ ಯೋಜನೆಯಡಿ ಪ್ರತೀ ತಿಂಗಳು ಶೇಕಡಾವಾರು ಪ್ರಗತಿಯ ಪರಿ ಶೀಲನೆ ನಡೆಯುತ್ತಿದೆ. ಇದುವರೆಗೆ ಶೇ . 100ರಷ್ಟು ಪ್ರಗತಿ ಸಾಧಿಸಲಾಗಿರಲಿಲ್ಲ. ಅವಿ ಭಜಿತ ದ.ಕ. ಜಿಲ್ಲೆಯಲ್ಲಿ ಯೋಜನೆ ಬಳಸಿ ಕೊಳ್ಳುವ ಫಲಾನುಭವಿಗಳ ಸಂಖ್ಯೆ ಕಡಿಮೆ ಇದೆ. ಇದ ರಿಂದಾಗಿ ಯೋಜನೆಯನ್ನು ಪರಿಣಾಮ ಕಾರಿ ಯಾಗಿ ಜಾರಿ ಮಾಡುವುದು ಇಲಾಖೆಗೆ ಕಷ್ಟವಾಗುತ್ತಿದೆ. ಆದ್ದರಿಂದ ಬಿಸಿಯೂಟದ ಬದಲು ಪೌಷ್ಟಿಕ ಆಹಾರವನ್ನು ತಿಂಗಳಿಗೊಮ್ಮೆ ಮನೆಗೆ ವಿತರಿಸಲು ಅವಕಾಶ ಮಾಡಿಕೊಡುವಂತೆ ಈ ಹಿಂದೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖಾಧಿ ಕಾರಿಗಳು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು. ಫಲಾನುಭವಿಗಳೂ ಇದೇ ಬೇಡಿಕೆ ಹೊಂದಿದ್ದಾರೆ.
Advertisement
ಲಾಕ್‌ಡೌನ್ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಮಾತೃ ಪೂರ್ಣ ಯೋಜನೆ ಯಡಿ ಕಿಟ್ ವಿತ ರಿಸು ತ್ತಿದೆ. ಇದ ರಿಂದಾಗಿ ಇಲಾಖೆ ಶೇ. 100 ರಷ್ಟು ಪ್ರಗತಿ ಸಾಧಿಸಿದೆ. ಯೋಜನೆ ಯಡಿಯಲ್ಲಿ ಬಿಸಿ ಯೂಟ ವಿತರಣೆ ಯಾಗುತ್ತಿರುವ ಸಂದರ್ಭ ದಲ್ಲಿ ಇಲಾಖೆಯು ಉಡುಪಿ ಶೇ. 34 ಮತ್ತು ದ.ಕ. ದಲ್ಲಿ ಶೇ. 20ರಷ್ಟು ಮಾತ್ರ ಪ್ರಗತಿ ಸಾ ಧಿಸಿತ್ತು.– ಶೇಸಪ್ಪ , ಮಹಿಳಾ ಮತ್ತು ಮಕ್ಕಳ ಇಲಾಖೆ ಉಪನಿರ್ದೇಶಕ, ಉಡುಪಿ
– ಉಸ್ಮಾನ್, ಮಹಿಳಾ ಮಕ್ಕಳ ಇಲಾಖೆ ಉಪನಿರ್ದೇಶಕ, ದ.ಕ.