Advertisement

ಮೋದಿ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ; ಡಾ. ಕೆ. ಲಕ್ಷ್ಮಣ್‌

01:39 PM Jun 17, 2022 | Team Udayavani |

ಯಲಹಂಕ: ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಯಶಸ್ವಿಯಾಗಿ 8 ವರ್ಷ ಪೂರೈ ಸಿದ್ದು, ಈ ಅವಧಿಯಲ್ಲಿ ಜಾರಿಗೊಳಿಸಿದ ಜನಪರ ಯೋಜನೆಗಳನ್ನು ಜನರಿಗೆ ತಲುಪಿಸಬೇಕಿದೆ ಎಂದು ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರಾಧ್ಯಕ್ಷ ಡಾ| ಕೆ. ಲಕ್ಷ್ಮಣ್‌ ತಿಳಿಸಿದರು.

Advertisement

ಯಲಹಂಕದ ಹೋಟೆಲ್‌ ರಮಡಾದಲ್ಲಿ ಗುರುವಾ ರ ಆರಂಭಗೊಂಡ ಬಿಜೆಪಿ ಒಬಿಸಿ ಮೋರ್ಚಾದ ಮೂರು ದಿನಗಳ ರಾಷ್ಟ್ರೀಯ ಪ್ರಶಿಕ್ಷಣ ವರ್ಗ ಸಭೆಯಲ್ಲಿ ಮಾತನಾಡಿದ ಅವರು, ಅಧಿಕಾರವು ಸೇವೆಗೆ ಸಾಧನವಾಗಬೇಕು. ಬಿಜೆಪಿ, ಪ್ರಜಾಸತ್ತಾತ್ಮಕ ದೇಶ ಮತ್ತು ಸಂವಿಧಾನಕ್ಕೆ ಹೆಚ್ಚು ಗೌರವ ಕೊಡುತ್ತದೆ. ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ. ಅಧಿಕಾರವನ್ನು ಸೇವೆಗೆ ಬಳಸಿಕೊಳ್ಳಬೇಕೆಂಬ ಸಿದ್ಧಾಂತವನ್ನು ಹೊಂದಿದೆ ಎಂದು ತಿಳಿಸಿದರು.

18 ಕೋಟಿಗೂ ಹೆಚ್ಚು ಸದಸ್ಯರಿರುವ ವಿಶ್ವದ ಅತ್ಯಂತ ದೊಡ್ಡ ರಾಜಕೀಯ ಪಕ್ಷವೆನಿಸಿದ ಬಿಜೆಪಿ, ಪ್ರಶಿಕ್ಷಣವು ಕಾರ್ಯಕರ್ತರು ಚುನಾವಣೆ ಗೆಲ್ಲುವುದಕ್ಕಿಂತ ಹೆಚ್ಚು ಪ್ರಮುಖ ಎಂದರು. ಒಬಿಸಿ ಮೋರ್ಚಾ ರಾಷ್ಟ್ರೀಯ ಉಪಾಧ್ಯಕ್ಷ ಬಿ.ಎಲ್‌.ವರ್ಮ ಮಾತನಾಡಿ, ರಾಜೀವ್‌ ಗಾಂಧಿಯವರು ಭ್ರಷ್ಟಾಚಾರ ಇರುವುದನ್ನು ಮತ್ತು ಅನುದಾನದ ಒಂದು ರೂಪಾಯಿ ಪೈಕಿ ಕೇವಲ 15 ಪೈಸೆ ಅಭಿವೃದ್ಧಿಗೆ ಬಳಕೆ ಆಗುವುದನ್ನು ಸ್ವತಃ ಒಪ್ಪಿಕೊಂಡಿದ್ದರು. ಆದರೆ, ಮೋದಿ ಅವ ರು 100ಕ್ಕೆ 100ರಷ್ಟು ಮೊತ್ತ ಫಲಾನುಭವಿಯನ್ನು ತಲುಪುವಂತೆ ನೋಡಿಕೊಂಡಿದ್ದಾರೆ. ಒಬಿಸಿ ವರ್ಗಕ್ಕೆ ಕೇಂದ್ರದ ಯೋಜನೆಗಳ ಗರಿಷ್ಠ ಪ್ರಯೋಜನ ಲಭಿಸಿದೆ ಎಂದರು.

ಕಾರ್ಯಕ್ರಮದಲ್ಲಿ ಬಿಜೆಪಿ ಒಬಿಸಿ ಮೋರ್ಚಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಂಗಮ್‌ ಲಾಲ್‌ ಗುಪ್ತ, ಯಶಪಾಲ್‌ ಸುವರ್ಣ, ನಿಖೀಲ್‌ ಆನಂದ್‌, ಉತ್ತರ ಪ್ರದೇಶ ರಾಜ್ಯದ ಸಚಿವ  ನರೇಂದ್ರ ಕಶ್ಯಪ್‌, ರಾಜ್ಯದ ಸಚಿವ ಎನ್‌.ಮುನಿರತ್ನ, ಬಿಡಿಎ ಅಧ್ಯಕ್ಷ, ಶಾಸಕ ಎಸ್‌.ಆರ್‌. ವಿಶ್ವನಾಥ್‌, ಒಬಿಸಿ ಮೋರ್ಚಾ ರಾಜ್ಯ ಅಧ್ಯಕ್ಷ ನೆ.ಲ.ನರೇಂದ್ರಬಾಬು, ವಿವಿಧ ರಾಜ್ಯಗಳ ಆಹ್ವಾನಿತ ಪದಾಧಿಕಾರಿಗಳು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next