Advertisement

ಸಕಾಲಕ್ಕೆ ಬೀಜ-ಗೊಬ್ಬರ ತಲುಪಿಸಿ

03:23 PM May 03, 2020 | Suhan S |

ಮೂಡಲಗಿ: ಮುಂಗಾರು ಹಂಗಾಮು ಬೇಗ ಬರುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆಯಿಂದ ಮುನ್ಸೂಚನೆ ಬಂದಿರುವ ಹಿನ್ನೆಲೆಯಲ್ಲಿ ಕೃಷಿ ಪರಿಕರ ಮಾರಾಟಗಾರರು ಬೀಜ, ರಸಗೊಬ್ಬರ ಹಾಗೂ ಕೀಟನಾಶಕಗಳನ್ನು ಸರ್ಮಪಕವಾಗಿ ದಾಸ್ತಾನು ಮಾಡಿಕೊಂಡು,ರೈತರಿಗೆ ಸಕಾಲಕ್ಕೆ ನಿಗದಿತ ದರಕ್ಕೆ ಮುಟ್ಟುವಂತೆ ಏರ್ಪಾಟು ಮಾಡಿಕೊಳ್ಳಲು ಕೃಷಿ ಇಲಾಖೆ ಉಪಕೃಷಿ ನಿರ್ದೇಶಕ ಎಲ್‌.ಐ.ರೂಡಗಿ ಕೃಷಿ ಪರಿಕರ ಮಾರಾಟಗಾರರಿಗೆ ಸೂಚಿಸಿದರು.

Advertisement

ಶನಿವಾರ ಘಟಪ್ರಭಾ, ರಾಜಾಪೂರ, ನಾಗನೂರ ಹಾಗೂ ಮೂಡಲಗಿ ಪಟ್ಟಣಗಳ ಕೃಷಿ ಪರಿಕರ ಮಾರಾಟ ಮಳಿಗೆಗಳಿಗೆ ಭೇಟಿ ನೀಡಿ ಮಾತನಾಡಿ, ಸದರಿ ಹಂಗಾಮಿನಲ್ಲಿ ರೈತರಿಂದ ಕಳಪೆ ಬೀಜ, ರಸಗೊಬ್ಬರದ ಕೊರತೆಗಳ ಬಗ್ಗೆ ದೂರು ಬಂದಲ್ಲಿತಮ್ಮನ್ನೆ ಹೊಣೆಗಾರರನ್ನಾಗಿ ಮಾಡಲಾಗುವುದೆಂದು ಕೃಷಿ ಪರಿಕರ ಮಾರಾಟಗಾರರಿಗೆ ಎಚ್ಚರಿಕೆ ನೀಡಿದರು. ರಾಜಾಪೂರ ಹಾಗೂ ನಾಗನೂರರೈತ ಉತ್ಪಾದಕ ಸಂಸ್ಥೆಗಳಿಗೆ ಭೇಟಿ ನೀಡಿ ಕಾರ್ಯ ಪರಿಶೀಲಿಸಿದರು.

ಸಹಾಯಕ ಕೃಷಿ ನಿರ್ದೇಶಕ ಎಮ್‌.ಎಮ್‌. ನದಾಫ್‌, ಅಧಿಕಾರಿಗಳಾದ ಶಂಕರ ಹಳದಮನಿ, ಪರಸಪ್ಪ ಹುಲಗಬಾಳಿ, ವಿ.ಬಿ. ಬೀರಾಜ, ವಿ.ಜಿ.ಮೇತ್ರಿ, ವಿ.ಟಿ.ಸನದಿ ಹಾಗೂ ಆತ್ಮಾ ಸಿಬ್ಬಂದಿ ಪೂರ್ಣಿಮಾ ಒಡ್ರಾಳೆ, ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next