ಚನ್ನಪಟ್ಟಣ: ತಾಲೂಕಿನ ತಿಟ್ಟಮಾರನಹಳ್ಳಿ ಗ್ರಾಪಂ ಕಚೇರಿ ಆವರಣದಲ್ಲಿ ನರೇಗಾ ಸಾಮಾಜಿಕ ಲೆಕ್ಕ ಪರಿಶೋಧನಾ ಗ್ರಾಮಸಭೆ ನಡೆಯಿತು.
ತಾಲೂಕು ನರೇಗಾ ಸಾಮಾಜಿಕ ಪರಿಶೋಧನಾ ಸಂಯೋಜಕಿ ಡಿ.ಎಸ್.ಉಮಾಶ್ರೀ, ನರೇಗಾ ಅನುದಾನದಡಿ ವೈಯಕ್ತಿಕ ಹಾಗೂ ಸಾರ್ವಜನಿಕ ಕಾಮಗಾರಿಗಳ ಪ್ರಗತಿ ಹಾಗೂ ಮುಂದೆ ನಡೆಯಬೇಕಾದ ಕಾಮಗಾರಿಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ತಿಟ್ಟಮಾರನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ವೈಯಕ್ತಿಕ ಹಾಗೂ ಸಾಮಾಜಿಕ ನರೇಗಾ ಕಾಮಗಾರಿಗಳು ನಡೆದಿದ್ದು, ಈ ಸಂಬಂಧ ಮಾಹಿತಿ ನೀಡಿದರು.ವರದಿ ಆಧರಿಸಿ ಸಾರ್ವಜನಿಕರು ಹಾಗೂ ಸಂಬಂಧಿಸಿದ ಅಧಿಕಾರಿಗಳ ನಡುವೆ ಚರ್ಚೆ ನಡೆಯಿತು.
ದಕ್ಷತೆಯಿಂದ ಕಾರ್ಯನಿರ್ವಹಣೆ ಮಾಡಿ: ಪಿಡಿಒ ಜೆ.ಕಾವ್ಯ ಮಾತನಾಡಿ, ಇಲಾಖೆಗಳ ಅಧಿ ಕಾರಿಗಳು ಸಣ್ಣಪುಟ್ಟ ಲೋಪಗಳನ್ನು ಸರಿ ಮಾಡಿ ಕೊಂಡು, ರೈತರ ಮನೆ ಬಾಗಿಲಿಗೆ ಸರ್ಕಾರಿ ಸೌಲಭ್ಯ ತಲುಪಿಸುವ ನಿಟ್ಟಿನಲ್ಲಿ ಮತ್ತಷ್ಟು ದಕ್ಷತೆಯಿಂದ ಕಾರ್ಯ ನಿರ್ವಹಣೆ ಮಾಡಬೇಕು. ಅಧಿಕಾರಿಗಳು ತಮ್ಮ ಇಲಾಖೆಯಡಿ ಗ್ರಾಮೀಣ ಜನರು ಹಾಗೂ ರೈತರಿಗೆ ದೊರೆಯುವ ಸೌಲಭ್ಯ, ಅನುಕೂಲಗಳ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ಕೊಡುವುದರ ಜೊತೆಗೆ, ರೈತರನ್ನು ಕಚೇರಿಗಳಿಗೆ ಅಲೆಸದಂತೆ ಕೆಲಸ ಮಾಡಿಕೊಡಬೇಕು ಎಂದು ತಾಕೀತು ಮಾಡಿದರು.
Related Articles
ಗ್ರಾಪಂ ಕಾರ್ಯದರ್ಶಿ ಬಸವಲಿಂಗಯ್ಯ ಮಾತ ನಾಡಿ, ನರೇಗಾ ಜಾಬ್ ಕಾರ್ಡ್ ಹೊಂದಿ ರುವ ಫಲಾನುಭವಿಗಳು, ಈಗಾಗಲೇ ಎರಡೂವರೆ ಲಕ್ಷ ರೂ. ವೆಚ್ಚದ ವೈಯಕ್ತಿಕ ಕಾಮಗಾರಿ ಪೂರೈಸಿದ್ದಲ್ಲಿ ಅಂತಹವರು ಮತ್ತೆ ನರೇಗಾ ವೈಯಕ್ತಿಕ ಕಾಮಗಾರಿ ನಡೆಸಲು ಅರ್ಹರಾಗಿರುವುದಿಲ್ಲ ಎಂದು ಮಾಹಿತಿ ನೀಡಿದರು.
ನರೇಗಾ ಕಾಮಗಾರಿಗೆ ಅವಕಾಶ: ಕೃಷಿ ಇಲಾಖೆ ತಾಂತ್ರಿಕ ಅಧಿಕಾರಿ ಸುಷ್ಮಾ ಮಾತನಾಡಿ, ಋತುಮಾನಕ್ಕೆ ಅನುಗುಣವಾಗಿ ಭತ್ತದ ಬೆಳೆಗೆ ಔಷಧ, ಎರಡು ರೆಕ್ಕೆಯ ನೇಗಿಲು ದೊರೆಯುವಿಕೆ ಹಾಗೂ ನರೇಗಾ ಯೋಜನೆಯಡಿ ಹಲವು ಕಾಮಗಾರಿಗಳನ್ನು ಮಾಡಿಕೊಳ್ಳಲು ಅವಕಾಶವಿದೆ. ರೈತರು ಸೂಕ್ತ ದಾಖಲೆಗಳೊಂದಿಗೆ ಕೃಷಿ ಇಲಾಖೆಯ ಕಚೇರಿಯನ್ನು ಸಂಪರ್ಕಿಸಬಹು ದಾಗಿದೆ ಎಂದು ಮನವಿ ಮಾಡಿದರು.
ಅರ್ಹರು ಸೌಲಭ್ಯ ಬಳಸಿಕೊಳ್ಳಿ: ನರೇಗಾ ಎಂಜಿನಿಯರ್ ಮಹದೇವು ಮಾತನಾಡಿ, ಇಪ್ಪತ್ತು ಅಡಿ ಅಗಲ, ಹತ್ತಡಿ ಉದ್ದದ ಕೊಟ್ಟಿಗೆ ನಿರ್ಮಾಣಕ್ಕೆ ಎಲ್ಲರಿಗೂ ಐವತ್ತೇಳು ಸಾವಿರ ರೂ. ನಿಗದಿ ಮಾಡಲಾಗಿದೆ. ಅದೇ ರೀತಿ ಹದಿನೈದು- ಹನ್ನೆರಡು ಅಡಿ ಉದ್ದದ ಮೇಕೆ ಶೆಡ್ಡು ನಿರ್ಮಾಣಕ್ಕೆ ಎಪ್ಪತ್ತೆçದು ಸಾವಿರ ರೂ.ನಿಗದಿಯಾಗಿದ್ದು, ಅರ್ಹರು ಸದುಪಯೋಗ ಮಾಡಿಕೊಳ್ಳಬೇಕು ಎಂದು ಹೇಳಿದರು. ಸಭೆ ಮಾರ್ಗದರ್ಶಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯಪಾಲಕ ಅಭಿಯಂತರ ಮಧುಸೂದನ್ ಮಾತನಾಡಿದರು.
ಗ್ರಾಪಂ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷೆ ಎನ್. ಆರ್.ರೇಖಾ, ಸದಸ್ಯರಾದ ಹನುಮಂತು, ಗೌರಮ್ಮ, ಗಂಗಮ್ಮ, ಸೌಭಾಗ್ಯಮ್ಮ, ಮುನಿ ವೆಂಕಟಪ್ಪ, ಅಶೋಕ್, ಕೃಷ್ಣಪ್ಪ, ಚಂದ್ರಕಲಾ, ಪವಿತ್ರ, ಮಾಜಿ ಸದಸ್ಯ ಮೂರ್ತಿ ಮತ್ತು ಅಂಗನವಾಡಿ- ಆಶಾ ಕಾರ್ಯಕರ್ತೆಯರು, ಸ್ತ್ರೀ ಶಕ್ತಿ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.