Advertisement

ಕೇಂದ್ರದ ಸಾಧನೆ ಜನರಿಗೆ ತಲುಪಿಸಿ

05:43 PM Mar 30, 2019 | Team Udayavani |

ಆಲ್ದೂರು: ಭಾರತವು ಮೋದಿಯವರ ಆಡಳಿತದಲ್ಲಿ ಶಕ್ತಿಶಾಲಿ ದೇಶವಾಗಿ ಮುನ್ನುಗ್ಗುತ್ತಿದೆ. ಅವರ ಆಡಳಿತದ ಕಠಿಣ ನಿರ್ಧಾರಗಳು ಕೆಲವರಿಗೆ ನುಂಗಲಾರದ ತುತ್ತಾಗಿದ್ದು, ಅಂತವರು ಮೋದಿಯವನ್ನು ದೂಷಣೆ ಮಾಡುತ್ತಿದ್ದಾರೆ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು.

Advertisement

ಹಾಂದಿ ಸಮೀಪದ ಬೇರುಗಂಡಿ ಬೃಹನ್ಮಠದಲ್ಲಿ ಶ್ರೀ ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ರೇಣುಕಾ ಮಹಾಂತ ಶಿವಾಚಾರ್ಯ ಸ್ವಾಮಿಗಳ ಆಶೀರ್ವಾದ ಪಡೆದು ಅವರು ಮಾತನಾಡಿದರು.

ಮೋದಿಜಿ ಅವರ ಆಡಳಿತ ನಮ್ಮ ದೇಶಕ್ಕೆ ಅನಿವಾರ್ಯ. ಆದ್ದರಿಂದ ಅವರನ್ನು ಮತ್ತೂಮ್ಮೆ ಪ್ರಚಂಡ ಬಹುಮತದಿಂದ ಗೆಲ್ಲಿಸಬೇಕು. ಅವರ ಅಭಿವೃದ್ಧಿ ಕೆಲಸಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಆಗಬೇಕಿದೆ. ಪ್ರತಿಯೊಬ್ಬ ಕಾರ್ಯಕರ್ತರು ಈ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಅತಿಹೆಚ್ಚು ಸಿಆರ್‌ಎಫ್‌ ರಸ್ತೆಗಳು ನಮ್ಮ ಲೋಕಸಭಾ ಕ್ಷೇತ್ರಕ್ಕೆ ಬಂದಿವೆ. ಹಲವು ಸಂಸ್ಥೆಗಳು, ಕೇಂದ್ರೀಯ ವಿದ್ಯಾಲಯಗಳು, ದೌರ್ಜನ್ಯಕ್ಕೆ ಒಳಗಾದ ಮಹಿಳೆಯರಿಗೆ ಸಮಸ್ಯೆಗಳನ್ನು ಆಲಿಸುವ ಸಖೀ ಸೆಂಟರ್‌ಗಳನ್ನು ತರುವ ಕೆಲಸ ಮಾಡಿದ್ದೇವೆ. ಕರ್ನಾಟಕದ ಸಮಸ್ಯೆಗಳ ಬಗ್ಗೆ ಲೋಕಸಭೆಯಲ್ಲಿ ಅತಿ ಹೆಚ್ಚು ಪ್ರಶ್ನೆಗಳನ್ನು ಕೇಳಿರುವ ಕ್ಷೇತ್ರ ನಮ್ಮ ಲೋಕಸಭಾ ಕ್ಷೇತ್ರ ಎಂದರು.

ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ ಮಾತನಾಡಿ, ಈ ಬಾರಿ ನಾವು ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕು. ಕಾರ್ಯಕರ್ತರು ತಮ್ಮಲ್ಲಿ ಗೊಂದಲಗಳಿದ್ದಲ್ಲಿ ಅವುಗಳನ್ನೆಲ್ಲ ಬದಿಗೊತ್ತಿ ನಮ್ಮ ಅಭ್ಯರ್ಥಿ ಪರ ಕೆಲಸ ಮಾಡಬೇಕು. ಶೋಭಾ ಕರಂದ್ಲಾಜೆ ಅವರು ನಮ್ಮ ಅಭ್ಯರ್ಥಿ ಆಗಿದ್ದಾರೆ.ಅವರಿಗೆ ನಾವು ಸಂಪೂರ್ಣ ಸಹಕಾರ ನೀಡಬೇಕು. ಈ ಹಿಂದೆ ರಾಜ್ಯದ ಮಂತ್ರಿಯಾಗಿದ್ದಾಗ ಉತ್ತಮ ಕಾರ್ಯ ನಿರ್ವಹಿಸಿ ಜನ ಮನ್ನಣೆ ಪಡೆದಿದ್ದಾರೆ. ಈ ಬಾರಿ ಅವರು ಗೆದ್ದು ಕೇಂದ್ರದ ಮಂತ್ರಿಯಾಗಿ ಜನರ ಸಮಸ್ಯೆಗಳಿಗೆ ದನಿಯಾಗಲಿ ಎಂದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಪ್ಪ, ಮಂಡಲದ ಅಧ್ಯಕ್ಷ ಸಂಪತ್‌, ತಾ.ಪಂ. ಸದಸ್ಯರಾದ ಭವ್ಯ, ದೀಪಾ, ರೇಖಾ, ತಾಲೂಕು ಪ್ರಧಾನ ಕಾರ್ಯದರ್ಶಿ ನಾರಾಯಣ ಆಚಾರ್ಯ, ದಿನೇಶ್‌ ಮುಗಳವಳ್ಳಿ ,ಎಪಿಎಂಸಿ ಸದಸ್ಯ ಕವೀಶ್‌, ವೀರಶೈವ ಸಮಾಜದ ಹೋಬಳಿ ಅಧ್ಯಕ್ಷ
ಇ.ಸಿ.ಉಮೇಶ್‌, ಹೋಬಳಿ ಅಧ್ಯಕ್ಷ ಯತಿರಾಜ್‌, ಗಿರೀಶ್‌, ನವೀನ್‌, ಶಿವಕುಮಾರ್‌, ನಾಗೇಶ್‌, ಸಂಧ್ಯನ್‌, ಸುದರ್ಶನ್‌, ಮತ್ತಿತರರಿದ್ದರು.

ದೇಶದ ಹಿತದೃಷ್ಟಿಯಿಂದ ಕೆಲಸ ಮಾಡುತ್ತಿರುವವರನ್ನು ಗೆಲ್ಲಿಸಬೇಕು. ಭಾರತವನ್ನು ವಿಶ್ವಗುರು ಸ್ಥಾನದತ್ತ ಕೊಂಡೊಯ್ಯುತ್ತಿರುವ ನಾಯಕರನ್ನು ನಾವು ಬೆಂಬಲಿಸಬೇಕು. ಇಡೀ ಜಗತ್ತು ಭಾರತದ ಸಾಧನೆಯನ್ನು ಬೆರಗುಗಣ್ಣಿನಿಂದ ನೋಡಬೇಕು. ದೇಶದ ಆಡಳಿತ ಸಮರ್ಥ ನಾಯಕರ ಕೈಯಲ್ಲಿ ಇರುವಂತೆ ಮತದಾರರು ಆಶೀರ್ವಾದ ಮಾಡಬೇಕು. ಸಂಸದರು ಈ ಹಿಂದಿನ ಚುನಾವಣೆ ಸಂದರ್ಭದಲ್ಲಿಯೂ ಶ್ರೀ ಕ್ಷೇತ್ರಕ್ಕೆ ಬಂದು ಸಿದ್ದೇಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಗುರುಗಳ ಆಶೀರ್ವಾದ ಪಡೆದಿದ್ದರು. ಈ ಬಾರಿಯೂ ಇಲ್ಲಿಗೆ ಬಂದು ಪೂಜೆ ಸಲ್ಲಿಸಿದ್ದಾರೆ.
ರೇಣುಕ ಮಹಾಂತ ಶಿವಾಚಾರ್ಯ ಸ್ವಾಮಿಗಳು, ಬೇರುಗಂಡಿ ಬೃಹನ್ಮಠ

Advertisement

Udayavani is now on Telegram. Click here to join our channel and stay updated with the latest news.

Next