Advertisement
ಮೊದಲ ಸಲ ನಾಯಕನ ಜವಾಬ್ದಾರಿ ಹೊತ್ತ ಮಾಯಾಂಕ್ ಅಗರ್ವಾಲ್ ಅವರ ಏಕಾಂಗಿ ಹೋರಾಟದಿಂದಾಗಿ ಪಂಜಾಬ್ ಕಿಂಗ್ಸ್ 6 ವಿಕೆಟಿಗೆ 166 ರನ್ ಗಳಿಸಿತು. ಡೆಲ್ಲಿ 17.4 ಓವರ್‌ಗಳಲ್ಲಿ 3 ವಿಕೆಟಿಗೆ 167 ರನ್ ಬಾರಿಸಿ ಜಯ ಸಾಧಿಸಿತು. ಇದು 8 ಪಂದ್ಯಗಳಲ್ಲಿ ಪಂತ್ ಬಳಗಕ್ಕೆ ಒಲಿದ 6ನೇ ಗೆಲುವು. ಪಂಜಾಬ್‌ಗ ಇಷ್ಟೇ ಪಂದ್ಯಗಳಲ್ಲಿ ಎದುರಾದ 5ನೇ ಸೋಲು.
Related Articles
Advertisement
ಆರ್‌ಸಿಬಿಯನ್ನು ಮಣಿಸಿದ ಉತ್ಸಾಹದಲ್ಲಿದ್ದರೂ ನಾಯಕ ರಾಹುಲ್ ಗೈರು ತಂಡದ ಮೇಲೆ ಒತ್ತಡ ಹೇರಿದ್ದು ಸ್ಪಷ್ಟವಾಗಿ ಗೋಚರಕ್ಕೆ ಬಂತು. ಕ್ರಿಸ್ ಗೇಲ್ ಕೂಡ ಸಿಡಿಯಲು ವಿಫಲರಾದರು.
ಟಿ20 ಕ್ರಿಕೆಟಿನ ನಂ.1 ಬ್ಯಾಟ್ಸ್‌ಮನ್ ಡೇವಿಡ್ ಮಲಾನ್ ಡೆಲ್ಲಿ ವಿರುದ್ಧ ಐಪಿಎಲ್‌ಗೆ ಪದಾರ್ಪಣೆ ಮಾಡಿದರು. ಇವರಿಗಾಗಿ ನಿಕೋಲಸ್ ಪೂರಣ್ ಅವರನ್ನು ಕೈಬಿಡಲಾಯಿತು.
ಸಂಕ್ಷಿಪ್ತ ಸ್ಕೋರ್: ಪಂಜಾಬ್ ಕಿಂಗ್ಸ್-6 ವಿಕೆಟಿಗೆ 166 (ಅಗರ್ವಾಲ್ ಔಟಾಗದೆ 99, ಮಲಾನ್ 26, ರಬಾಡ 36ಕ್ಕೆ 3). ಡೆಲ್ಲಿ-17.4 ಓವರ್‌ಗಳಲ್ಲಿ 3 ವಿಕೆಟಿಗೆ 167( ಧವನ್ ಅಜೇಯ 69, ಶಾ, 39, ಹರ್‌ಪ್ರೀತ್ 19ಕ್ಕೆ 1).