ಹೊಸದಿಲ್ಲಿ : ವಂದೇ ಭಾರತ್ ಎಕ್ಸ್‌ಪ್ರೆಸ್ ಎಂದು ನಾಮಕರಣ ಮಾಡಲ್ಪಟ್ಟಿರುವ ಟ್ರೈನ್ 18 ನ ದಿಲ್ಲಿ – ವಾರಾಣಸಿ ಎಸಿ ಚೇರ್ ಕಾರ್ ಟಿಕೆಟ್ ದರ 1,850 ರೂ. ಹಾಗೂ ಎಕ್ಸಿಕ್ಯುಟಿವ್ ಕ್ಲಾಸ್ ಟಿಕೆಟ್ ಶುಲ್ಕ 3,520 ಎಂದು ಇದೀಗ ಅಧಿಕಾರಿಗಳು ತಿಳಿಸಿದ್ದಾರೆ. ಈ ಶುಲ್ಕದಲ್ಲಿ ಕ್ಯಾಟರಿಂಗ್ ಸೇವಾ ಶುಲ್ಕ ಸೇರಿದೆ.
ವಾರಾಣಸಿಯಿಂದ ದಿಲ್ಲಿಗೆ ಮರಳುವ ಪ್ರಯಾಣಕ್ಕೆ ಎಸಿ ಚೇರ್ ಕಾರ್ ದರವು 1,795 ರೂ. ಮತ್ತು ಎಕ್ಸಿಕ್ಯುಟಿವ್ ಕಾರ್ ದರವು 3,470 ರೂ. ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದಿಲ್ಲಿ – ವಾರಾಣಸಿ ಮಾರ್ಗದಲ್ಲಿ ಕ್ರಮಿಸುವ ಶತಾಬ್ದಿ ರೈಲಿನ ಶುಲ್ಕಕ್ಕಿಂತ ಟ್ರೈನ್ 18 ಎಕ್ಸಿಕ್ಯುಟಿವ್ ಕ್ಲಾಸ್ ಶುಲ್ಕವು 1.4 ಪಟ್ಟು ಮತ್ತು ಚೇರ್ ಕಾರ್ ದರವು 1.5 ಪಟ್ಟು ಅಧಿಕವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸೆಮಿ ಹೈ ಸ್ಪೀಡ್ ಟ್ರೈನ್ 18 ಗೆ ಪ್ರಧಾನಿ ನರೇಂದ್ರ ಮೋದಿ ಅವರು ಫೆ.15ರಂದು ಹಸಿರು ನಿಶಾನೆ ತೋರಲಿದ್ದಾರೆ.
ಈ ರೈಲಿನಲ್ಲಿ ಎರಡು ವರ್ಗವಿದೆ : 1. ಎಕ್ಸಿಕ್ಯುಟಿವ್ ಕ್ಲಾಸ್, 2 ಚೇರ್ ಕಾರ್ ಕ್ಲಾಸ್. ಇವುಗಳಿಗೆ ಊಟದ ದರದಲ್ಲಿ ವ್ಯತ್ಯಾಸವಿದೆ. ಎಕ್ಸಿಕ್ಯುಟಿವ್ ಕ್ಲಾಸ್ ನಲ್ಲಿ ಬೆಳಗ್ಗಿನ ಟೀ, ಬ್ರೇಕ್ ಫಾಸ್ಟ್ ಮತ್ತು ಲಂಚ್ ದರ 399 ರೂ. ಇದೆ; ಚೇರ್ ಕಾರ್ ನಲ್ಲಿ 344 ರೂ. ದರವಿದೆ.