Advertisement

Haryana: ದೆಹಲಿಯ ಉನ್ನತ ಪೋಲೀಸ್ ಅಧಿಕಾರಿಯ ಪುತ್ರನ ಹತ್ಯೆ, ಶವಕ್ಕಾಗಿ ಶೋಧ

10:12 AM Jan 27, 2024 | Team Udayavani |

ಹರಿಯಾಣ: ಮದುವೆಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ದೆಹಲಿಯ ಉನ್ನತ ಪೋಲೀಸ್ ಅಧಿಕಾರಿಯ ಪುತ್ರನೊರ್ವ ನಾಲ್ಕು ದಿನಗಳಿಂದ ನಾಪತ್ತೆಯಾಗಿದ್ದು ಇದೀಗ ಆತನ ಹತ್ಯೆಯಾಗಿರುವ ಮಾಹಿತಿ ಹೊರ ಬಿದ್ದಿದೆ.

Advertisement

ಹತ್ಯೆಯ ಹಿಂದೆ ಹಣಕಾಸಿನ ವ್ಯವಹಾರ ಇರುವುದು ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಅಲ್ಲದೆ ಘಟನೆಗೆ ಸಂಬಂಧಿಸಿ ಓರ್ವನನ್ನು ಬಂಧಿಸಿದ್ದಾರೆ.

ವಕೀಲರೂ ಆಗಿರುವ ಲಕ್ಷ್ಯ ಚೌಹಾಣ್ ಅವರನ್ನು ಆತನ ಸ್ನೇಹಿತರಾದ ವಿಕಾಸ್ ಭಾರದ್ವಾಜ್ ಮತ್ತು ಅಭಿಷೇಕ್ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಲಕ್ಷ್ಯ ಅವರ ತಂದೆ ಯಶಪಾಲ್ ದೆಹಲಿ ಸಹಾಯಕ ಪೊಲೀಸ್ ಆಯುಕ್ತರಾಗಿದ್ದಾರೆ. ಹಣಕಾಸಿನ ವಿಚಾರವೇ ಕೊಲೆಗೆ ಕರಣ ಎನ್ನಲಾಗಿದೆ.

ಏನಿದು ಘಟನೆ: ಕೋರ್ಟಿನಲ್ಲಿ ಕ್ಲರ್ಕ್ ಆಗಿದ್ದ ವಿಕಾಸ್ ಭಾರದ್ವಾಜ್ ಎಂಬಾತನಿಂದ ಲಕ್ಷ್ಯ ಸ್ವಲ್ಪ ಹಣವನ್ನು ಸಾಲವಾಗಿ ಪಡೆದಿದ್ದ. ಆದರೆ ಹೇಳಿದ ಸಮಯಕ್ಕೆ ಹಣ ವಾಪಾಸ್ ನೀಡಿಲ್ಲ ಎನ್ನಲಾಗಿದೆ. ವಿಕಾಸ್ ಹಲವು ಬಾರಿ ಕೇಳಿಕೊಂಡರೂ ಲಕ್ಷ್ಯ ತಲೆ ಕೆಡಿಸಿಕೊಳ್ಳಲಿಲ್ಲ. ಜನವರಿ 22 ರಂದು ತನ್ನ ಸೋದರ ಸಂಬಂಧಿಯ ಮದುವೆಯಲ್ಲಿ ಪಾಲ್ಗೊಳ್ಳಲು ಲಕ್ಷ್ಯ ಹರಿಯಾಣಕ್ಕೆ ತೆರಳಿದಾಗ ವಿಕಾಸ್‌ಗೆ ಇದರಿಂದ ಅಸಮಾಧಾನವಿತ್ತು ಮತ್ತು ಲಕ್ಷ್ಯ ಪ್ರಯಾಣದಲ್ಲಿ ಅಭಿಷೇಕ್‌ನ ಜೊತೆಗೂಡಿದ್ದ ಎನ್ನಲಾಗಿದೆ.

ಮದುವೆ ಮುಗಿಸಿ ವಾಪಸಾಗುತ್ತಿದ್ದಾಗ ಇಬ್ಬರೂ ಪ್ಲಾನ್ ಮಾಡಿ ವಾಶ್ ರೂಂಗೆ ಹೋಗುವ ವಿಚಾರವಾಗಿ ಲಕ್ಷ್ಯ ಅವರ ಕಾರನ್ನು ಪಾಣಿಪತ್ ಮುನಕ್ ಕಾಲುವೆ ಬಳಿ ನಿಲ್ಲಿಸಿದರು.

Advertisement

ಈ ವೇಳೆ ಇಬ್ಬರ ನಡುವೆ ಹಣದ ವಿಚಾರದ ಬಗ್ಗೆ ಚರ್ಚೆ ನಡೆದಿದೆ ಬಳಿಕ ಲಕ್ಷ್ಯ ಅವರನ್ನು ವಿಕಾಸ್ ಹಾಗೂ ಅಭಿಷೇಕ್ ಸೇರಿಕೊಂಡು ಹಲ್ಲೆನಡೆಸಿ ಕೊಂದು ಅಲ್ಲೇ ಇದ್ದ ಕಾಲುವೆಗೆ ಎಸೆದಿದ್ದಾರೆ ಎನ್ನಲಾಗಿದೆ.

ಇತ್ತ ಮಗ ಮದುವೆಗೆ ಹೋದವ ವಾಪಾಸ್ ಬರಲಿಲ್ಲ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ತನಿಖೆ ಕೈಗೆತ್ತಿಕೊಂಡ ಪೊಲೀಸರು ಮದುವೆಗೆ ಜೊತೆಯಾಗಿ ಹೋದ ಇಬ್ಬರನ್ನು ವಿಚಾರಣೆ ನಡೆಸಲು ತಯಾರಿ ನಡೆಸಿದ್ದಾರೆ ಆದರೆ ವಿಚಾರ ತಿಲಿಯುತ್ತಲೇ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಘಟನೆಗೆ ಸಂಬಂಧಿಸಿ ಅಭಿಷೇಕ್ ನನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಹತ್ಯೆ ನಡೆಸಿರುವುದಾಗಿ ಒಪ್ಪಿಕೊಂಡಿದ್ದಾನೆ.

ಸದ್ಯ ಲಕ್ಷ್ಯನ ಮೃತದೇಹ ಪತ್ತೆಗೆ ಪೊಲೀಸರು ಕಾಲುವೆ ಬಳಿ ಶೋಧ ಕಾರ್ಯಚರಣೆ ನಡೆಸುತ್ತಿದ್ದು, ನಾಪತ್ತೆಯಾದ ಇನ್ನೋರ್ವನಿಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.

ಇದನ್ನೂ ಓದಿ: Manoj Jarange: ಮರಾಠಾ ಮೀಸಲಾತಿ ಹೋರಾಟಕ್ಕೆ ಜಯ… ಧರಣಿ ಹಿಂಪಡೆದ ಮನೋಜ್ ಜಾರಂಜ್

Advertisement

Udayavani is now on Telegram. Click here to join our channel and stay updated with the latest news.

Next