Advertisement

ದಿಲ್ಲಿಯಲ್ಲಿ ಮಹಿಳೆಯರ ತಲೆಕೂದಲು ಕತ್ತರಿಸಿ ಒಯ್ಯುವ ನಿಗೂಢ ಖದೀಮರು

10:54 AM Aug 01, 2017 | Team Udayavani |

ಹೊಸದಿಲ್ಲಿ : ದಿಲ್ಲಿಯಲ್ಲಿ ಮನೆಯಲ್ಲಿನ ಮಹಿಳೆಯರನ್ನು ಗುರಿ ಇರಿಸಿಕೊಂಡು ಅವರಿಗೆ ಗೊತ್ತಾಗದ ರೀತಿಯಲ್ಲಿ ಅವರ ತಲೆಕೂದಲನ್ನು ಕತ್ತರಿಸುವ ನಿಗೂಢ ಖದೀಮರು ಕಾರ್ಯಾಚರಿಸುತ್ತಿರುವುದು ಬೆಳಕಿಗೆ ಬಂದಿದೆ.

Advertisement

ಯಾರೋ ಅಪರಿಚಿತ ವ್ಯಕ್ತಿಗಳು ಮಹಿಳೆಯರು ತಮ್ಮ ಮನೆಯೊಳಗೆ ಒಬ್ಬರೇ ಇರುವ ವೇಳೆ ಮನೆಯನ್ನು ಪ್ರವೇಶಿಸಿ ಅವರನ್ನು ಯಾವುದೋ ದ್ರವ್ಯದಿಂದ ಪ್ರಜ್ಞಾಹೀನಗೊಳಿಸಿ ಅವರ ತಲೆಗೂದಲನ್ನು ಕತ್ತರಿಸಿ ಮನೆಯಲ್ಲಿನ ಅಮೂಲ್ಯ ಸೊತ್ತುಗಳನ್ನು ಕದ್ದೊಯ್ದ ಪ್ರಕರಣವನ್ನು ನೈಋತ್ಯ ದಿಲ್ಲಿಯ ಚಾವ್ಲಾ ಪ್ರದೇಶದ ಪೊಲೀಸರು ದಾಖಲಿಸಿಕೊಂಡಿದ್ದಾರೆ. 

“ಚಾವ್ಲಾ ಪ್ರದೇಶದಲ್ಲಿ ಮೂವರು ಅಪರಿಚಿತರು ರಸ್ತೆಗಳಲ್ಲಿ ಅಲೆದಾಡುವುದು ಕಂಡು ಬರುವ ಸಿಸಿಟಿವಿ ಚಿತ್ರಿಕೆಗಳನ್ನು ಪಡೆದುಕೊಂಡು ನಾವು ಅವುಗಳನ್ನು ಕೂಲಂಷವಾಗಿ ಪರಿಶೀಲಿಸುತ್ತಿದ್ದೇವೆ” ಎಂದು ಪೊಲೀಸರು ತಿಳಿಸಿದ್ದಾರೆ. 

“ಮನೆಯನ್ನು ಒಳಗಿನಿಂದ ಲಾಕ್‌ ಮಾಡಿಕೊಂಡು ನಾವು ಮನೆಯೊಳಗೆ ಇದ್ದಾಗ ನಮಗೆ ಗೊತ್ತೇ ಆಗದ ರೀತಿಯಲ್ಲಿ ಯಾರೋ ನಮ್ಮ ತಲೆಗೂದಲನ್ನು ಕತ್ತರಿಸಿದ್ದಾರೆ. ಆದರೆ ಈ ಕೃತ್ಯ ಮಾಡಿದ ಯಾರೂ ಯಾರೂ  ನಮಗೆ  ಮನೆಯೊಳಗೆ ಬಂದಂತೆ ಕಾಣಲಿಲ್ಲ’ ಎಂದು ತಲೆಗೂದಲು ಕಳೆದುಕೊಂಡ ಮಹಿಳೆಯರು ಹೇಳಿರುವುದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ವಿಡಿಯೋ ಚಿತ್ರಿಕೆಗಳಲ್ಲಿ ದಾಖಲಾಗಿರುವ ಮೂವರು ಅಪರಿಚಿತರ ಫೋಟೋಗಳನ್ನು ಸಂಸ್ಕರಿಸಿ ಪಡೆಯಲು ನಾವು ಯತ್ನಿಸುತ್ತಿದ್ದೇವೆ; ಈ ನಿಗೂಢ ಪ್ರಕರಣವನ್ನು ನಾವು ಸದ್ಯದಲ್ಲೇ ಭೇದಿಸುತ್ತೇವೆ’ ಎಂದು ನೈಋತ್ಯವಿಭಾಗದ ಪೊಲೀಸ್‌ ಡೆಪ್ಯುಟಿ ಕಮಿಷನರ್‌ ಸುರೇಂದ್ರ ಕುಮಾರ್‌ ತಿಳಿಸಿದ್ದಾರೆ. “ಹಾಗಿದ್ದರೂ ಈ ನಿಗೂಢ ಪ್ರಕರಣಗಳಲ್ಲಿ ಯಾವುದೇ ಮಾಟ ಮಂತ್ರ ಆಗಿರುವ ಸಾಧ್ಯತೆಗಳಿಲ್ಲ’ ಎಂದವರು ಹೇಳಿದರು. 

Advertisement

ತಲೆಕೂದಲಿನ ಕೆಲವೊಂದು ಮಾದರಿಗಳನ್ನು  ನಾವು ಫೊರೆನ್ಸಿಕ್‌ ಪರೀಕ್ಷೆಗೆ ಕಳುಹಿಸಿದ್ದೇವೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next