ನವದೆಹಲಿ: ನೀವು ಈವರೆಗೆ ರುಚಿ ನೋಡಿರುವ ಸಿಹಿಗಳ ಬೆಲೆ ಎಷ್ಟಿರಬಹುದು? ಗರಿಷ್ಠ ಕೆ.ಜಿ.ಗೆ 3-4 ಸಾವಿರ. ಆದರೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಸಿಹಿ ತಿನಿಸಿನ ಅಂಗಡಿಯೊಂದರಲ್ಲಿ ಮಾರಾಟ ಮಾಡುವ ಆ ಸಿಹಿಗೆ ಕೆ.ಜಿ.ಗೆ ಬರೋಬ್ಬರಿ 16 ಸಾವಿರ ರೂಪಾಯಿ!
Advertisement
ಹೌದು ದೆಹಲಿಯ ಮೌಜ್‌ಪುರದ ಶಗುಣ್ ಸ್ವೀಟ್ಸ್ ಅಂಗಡಿಯಲ್ಲಿ ಈ ಭಾರೀ ಬೆಲೆಯ “ಗೋಲ್ಡ್ ಮಿಠಾಯಿ’ ಮಾರಾಟ ಮಾಡಲಾಗುತ್ತಿದೆ. ಅದರ ವಿಡಿಯೋ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮಿಠಾಯಿ ಒಂದರ ಮೇಲೆ ಚಿನ್ನದ ಬಣ್ಣದ ಪೇಪರ್ ಹಚ್ಚಿ, ಅದನ್ನು ಸಣ್ಣ ಸಣ್ಣ ಪೀಸುಗಳಾಗಿ ಕತ್ತರಿಸಿ, ಅದರ ಮೇಲೆ ಕೇಸರಿ ಹಾಕಿ ಕೊಡುವ ವಿಡಿಯೋ ಅದಾಗಿದೆ.
Related Articles
Advertisement