Advertisement

Delhi: ಮಿತಿ ಮೀರಿದ ಮಾಲಿನ್ಯ: ಟ್ರಕ್‌ಗಳ ಪ್ರವೇಶಕ್ಕೆ ನಿರ್ಬಂಧ

11:37 PM Nov 17, 2024 | Team Udayavani |

ಹೊಸದಿಲ್ಲಿ: ದಿಲ್ಲಿಯಲ್ಲಿ ಮಾಲಿನ್ಯ ಮಟ್ಟ ಹೆಚ್ಚಾಗಿದ್ದು, ಸೋಮವಾರದಿಂದ 4ನೇ ಹಂತದ ಕಠಿನ ಕ್ರಮ ಕೈಗೊಳ್ಳಲು ಕೇಂದ್ರ ವಾಯು ಗುಣಮಟ್ಟ ಸಮಿತಿಯು ಮುಂದಾಗಿದೆ.

Advertisement

ಇದು ಸೋಮವಾರ ಬೆಳಿಗ್ಗೆ 8 ಗಂಟೆಯಿಂದ ಈ ಕ್ರಮ ಜಾರಿಯಾಗಲಿದ್ದು, ರಾಷ್ಟ್ರ ರಾಜಧಾನಿಯಲ್ಲಿ ಅಗತ್ಯ ವಸ್ತುಗಳ ಸಾಗಣೆ ಹೊರತುಪಡಿಸಿ ಮಿಕ್ಕೆಲ್ಲ ಟ್ರಕ್‌ಗಳ ಪ್ರವೇಶ ನಿಷೇಧಿಸಲಾಗಿದೆ.

ಸಿಎನ್‌ಜಿ, ಎಲೆಕ್ಟ್ರಿಕ್‌ ವಾಹನಗಳಿಗೆ ಮಾತ್ರ ಪ್ರವೇಶ ಕಲ್ಪಿಸಲಾಗಿದೆ.

ಕಟ್ಟಡ ನಿರ್ಮಾಣವನ್ನೂ ನಿರ್ಬಂಧಿಸಲಾಗಿದ್ದು, 6 ರಿಂದ 9ನೇ ತರಗತಿ ಹಾಗೂ 11ನೇ ತರಗತಿಗಳಿಗೆ ಆನ್‌ಲೈನ್‌ ಪಾಠ ಮಾಡಲು ಸೂಚಿಸಲಾಗಿದೆ.

ದೇಶದ 2ನೇ ಮಲಿನ ನಗರ: ರವಿವಾರ 441 ಎಕ್ಯುಐ ದಾಖಲಿಸುವುದರೊಂದಿಗೆ ಹೊಸದಿಲ್ಲಿ ದೇಶದಲ್ಲೇ 2ನೇ ಮಲಿನ ನಗರವಾಗಿ ಹೊರಹೊಮ್ಮಿದೆ. ಮೊದಲ ಸ್ಥಾನದಲ್ಲಿ ಹರಿಯಾಣದ ಬಹದ್ದೂರ್‌ಗಢ ಇದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next