Advertisement

ದೆಹಲಿಯಲ್ಲಿ 40 ಕೋಟಿ ರೂ. ಮೌಲ್ಯದ ಮಾದಕ ವಸ್ತು ವಶಕ್ಕೆ

12:21 PM Mar 29, 2022 | Team Udayavani |

ನವದೆಹಲಿ: ಅಂತರರಾಷ್ಟ್ರೀಯ ಮಾದಕವಸ್ತುಗಳ ಜಾಲವನ್ನು ದೆಹಲಿ ಪೋಲೀಸ್ ವಿಶೇಷ ತಂಡವು ಭೇದಿಸಿದ್ದು, ರೂ 40 ಕೋಟಿ ರೂ. ಮೌಲ್ಯದ 10 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ

Advertisement

ಜಾಲದ 2 ಪ್ರಮುಖ ಸದಸ್ಯರನ್ನು ಬಂಧಿಸಲಾಗಿದ್ದು,ವಶಪಡಿಸಿಕೊಂಡ ಹೆರಾಯಿನ್ ಅನ್ನು ಮ್ಯಾನ್ಮಾರ್‌ನಿಂದ ಮಣಿಪುರದ ಮೂಲಕ ಭಾರತಕ್ಕೆ ಕಳ್ಳಸಾಗಣೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಆರೋಪಿಗಳನ್ನು ನಜೀರ್ ಮತ್ತು ದಿನೇಶ್ ಸಿಂಗ್ ಎಂದು ಗುರುತಿಸಲಾಗಿದ್ದು. ಎನ್‌ಡಿಪಿಎಸ್ ಕಾಯ್ದೆಯ ಸೂಕ್ತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣವನ್ನು ಪಿಎಸ್ ವಿಶೇಷ ಸೆಲ್‌ನಲ್ಲಿ ದಾಖಲಿಸಲಾಗಿದೆ ಎಂದು ದೆಹಲಿ ಪೊಲೀಸ್ ವಿಶೇಷ ಸೆಲ್ ನ ಡಿಸಿಪಿ ಜಸ್ಮೀತ್ ಸಿಂಗ್ ತಿಳಿಸಿದ್ದಾರೆ.

ಮಾದಕವಸ್ತುಗಳನ್ನು ಮರೆಮಾಡಲು ಮತ್ತು ಸಾಗಿಸಲು ರಹಸ್ಯ ಕುಳಿಯನ್ನು ಹೊಂದಿರುವ ಕಾರನ್ನು ವಶಪಡಿಸಿಕೊಳ್ಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next