Advertisement

ಜಾಮಿಯಾ ಹಿಂಸಾಚಾರ ಪ್ರಕರಣ: 70 ಶಂಕಿತರ ಫೊಟೋ ಬಿಡುಗಡೆ

08:28 AM Jan 30, 2020 | Hari Prasad |

ನವದೆಹಲಿ: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಡಿಸೆಂಬರ್ 15ರಂದು ಇಲ್ಲಿನ ಜಾಮಿಯಾ ನಗರದಲ್ಲಿ ಭುಗಿಲೆದ್ದಿದ್ದ ಸಂಭವಿಸಿದ್ದ ಹಿಂಸಾಚಾರ ಪ್ರಕರಣಗಳಿಗೆ ಸಂಭಂಧಿಸಿದಂತೆ 70 ಜನ ಶಂಕಿತರ ಫೊಟೋಗಳನ್ನು ದೆಹಲಿ ಪೊಲೀಸರು ಇಂದು ಬಿಡುಗಡೆಗೊಳಿಸಿದ್ದಾರೆ.

Advertisement

ಭಾವಚಿತ್ರದಲ್ಲಿರುವ ವ್ಯಕ್ತಿಗಳೆಲ್ಲರೂ ಜಾಮಿಯಾ ನಗರದಲ್ಲಿ ಅಂದು ಸಂಭವಿಸಿದ್ದ ಹಿಂಸಾಚಾರದಲ್ಲಿ ಸಕ್ರಿಯವಾಗಿ ಭಾಗವಹಿಸಿರುವ ವ್ಯಕ್ತಿಗಳೇ ಆಗಿದ್ದಾರೆ ಎಂಬ ಮಾಹಿತಿಯನ್ನೂ ಸಹ ಪೊಲೀಸರು ಇದೇ ಸಂದರ್ಭದಲ್ಲಿ ನೀಡಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸೆಂಬರ್ 17ರಂದು 10 ಜನರನ್ನು ಬಂಧಿಸಲಾಗಿತ್ತು. ಮತ್ತು ಇವರಲ್ಲಿ ಯಾರೊಬ್ಬರೂ ಜಾಮಿಯಾ ಮಿಲಿಯಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೇ ಆಗಿರಲಿಲ್ಲ. ಮತ್ತು ಇನ್ನು 15 ಜನರ ವಿರುದ್ಧ ಗಲಭೆಯಲ್ಲಿ ಭಾಗವಹಿಸಿದ್ದ ಆರೋಪದ ಮೇಲೆ ಎಫ್.ಐ.ಆರ್. ಸಹ ದಾಖಲಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next