ನವ ದೆಹಲಿ: ದೇಶವನ್ನೇ ಬೆಚ್ಚಿ ಬೀಳಿಸಿದ್ದ ಶ್ರದ್ದಾ ವಾಲ್ಕರ್ ಪ್ರಕರಣದಲ್ಲಿ ಆರೋಪಿ ಆಫ್ತಾಬ್ ಅಮೀನ್ ಪೂನಾವಾಲಾ ವಿರುದ್ಧ ಪೊಲೀಸರು ಮಂಗಳವಾರ 6,629 ಪುಟಗಳ ಚಾರ್ಜ್ ಶೀಟ್ ಅನ್ನು ಸಾಕೇತ್ ನ್ಯಾಯಾಲಯದಲ್ಲಿ ಸಲ್ಲಿಸಿದ್ದು, ಆತನ ನ್ಯಾಯಾಂಗ ಬಂಧನವನ್ನುಎರಡು ವಾರಗಳವರೆಗೆ( ಫೆಬ್ರವರಿ 7) ವಿಸ್ತರಿಸಲಾಗಿದೆ.
ಚಾರ್ಜ್ ಶೀಟ್‌ನಲ್ಲಿ ಎಷ್ಟು ಪುಟಗಳಿವೆ ಎಂದು ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಅವಿರಾಲ್ ಶುಕ್ಲಾ ಕೇಳಿದಾಗ, ಅದು 6,629 ಪುಟಗಳನ್ನು ಹೊಂದಿದೆ ಎಂದು ತನಿಖಾಧಿಕಾರಿ ಹೇಳಿದರು. ಇದು ದೊಡ್ಡದಾಗಿದೆ ನ್ಯಾಯಾಧೀಶರು ಹೇಳಿ, ಅಂತಿಮವಾಗಿ ಇಂದು ನ್ಯಾಯಾಲಯದ ಮುಂದೆ ಚಾರ್ಜ್ ಶೀಟ್ ಅನ್ನು ಇರಿಸಲಾಗಿದೆ ಎಂದು ಹೇಳಿದರು.
ನ್ಯಾಯಾಲಯ ಪೂನಾವಾಲಾನ ನ್ಯಾಯಾಂಗ ಬಂಧನವನ್ನು ಫೆಬ್ರವರಿ 7 ರವರೆಗೆ 14 ದಿನಗಳ ಕಾಲ ವಿಸ್ತರಿಸಿದೆ. ಮಂಗಳವಾರ ನ್ಯಾಯಾಂಗ ಬಂಧನದ ಅವಧಿ ಮುಗಿದ ಹಿನ್ನೆಲೆಯಲ್ಲಿ ಪೂನಾವಾಲಾ ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಕೀಲ ಎಂಎಸ್ ಖಾನ್ ಅವರನ್ನು ಬದಲಾಯಿಸಲು ಬಯಸುವುದಾಗಿ ನ್ಯಾಯಾಲಯಕ್ಕೆ ತಿಳಿಸಿದ್ದಾನೆ.