Advertisement

Kejriwal ನಿವಾಸದ ಹೊರಗೆ ಪಟಾಕಿ ಸಿಡಿಸಿ ಸಂಭ್ರಮ: ಎಫ್ ಐಆರ್ ದಾಖಲಿಸಿದ ಪೊಲೀಸರು

05:18 PM Sep 14, 2024 | Team Udayavani |

ಹೊಸದಿಲ್ಲಿ: ಸುಪ್ರೀಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿ ತಿಹಾರ್ ಜೈಲಿನಿಂದ ಹೊರಬಂದ ಬಳಿಕ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್(Arvind Kejriwal) ಅವರ ನಿವಾಸದ ಹೊರಗೆ ಪಟಾಕಿ ಸಿಡಿಸಿದ್ದಕ್ಕಾಗಿ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

Advertisement

ಜೈಲಿನಿಂದ ಬಿಡುಗಡೆಯಾದ ನಂತರ ಅವರನ್ನು ಸ್ವಾಗತಿಸಲು ಉತ್ತರ ದೆಹಲಿಯ ಸಿವಿಲ್ ಲೈನ್ಸ್‌ನಲ್ಲಿರುವ ನಿವಾಸದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮ ಹೊರ ಹಾಕಿದ್ದರು.

ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 223 (ಸಾರ್ವಜನಿಕ ಸೇವಕರ ಹೊರಡಿಸಿದ ಆದೇಶಗಳಿಗೆ ಅವಿಧೇಯತೆ) ಅಡಿಯಲ್ಲಿ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಮುಖ್ಯಮಂತ್ರಿ ಅಧಿಕೃತ ನಿವಾಸದ ಹೊರಗೆ ಪಟಾಕಿ ಸಿಡಿಸಿದ ಪ್ರಕರಣವನ್ನು ದಾಖಲಿಸಲಾಗಿದೆ.

ಮುಂಬರುವ ಚಳಿಗಾಲದಲ್ಲಿ ವಾಯು ಮಾಲಿನ್ಯವನ್ನು ನಿಯಂತ್ರಿಸುವ ಸಲುವಾಗಿ ರಾಷ್ಟ್ರ ರಾಜಧಾನಿಯಲ್ಲಿ ಪಟಾಕಿ ಉತ್ಪಾದನೆ, ಮಾರಾಟ ಮತ್ತು ಬಳಕೆಯನ್ನು ದೆಹಲಿ ಸರಕಾರ ನಿಷೇಧಿಸಿದೆ.

ಬಿಜೆಪಿ ಆಕ್ರೋಶ

Advertisement

ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್‌ದೇವ ಅವರು ಪ್ರತಿಕ್ರಿಯಿಸಿ “ದೀಪಾವಳಿ ಅಥವಾ ಹಿಂದೂ ಧರ್ಮದ ಯಾವುದೇ ಹಬ್ಬ ಬಂದಾಗ ಎಎಪಿ ನಾಯಕರು ಘೋಷಣೆ ಮಾಡುತ್ತಾರೆ, ದೆಹಲಿ ಸಚಿವ ಮತ್ತು ಆಪ್ ನಾಯಕ ಗೋಪಾಲ್ ರಾಯ್ ಈ ವಿಷಯವನ್ನು ಅರಿತುಕೊಳ್ಳಬೇಕು. ಮೊನ್ನೆ ಯಷ್ಟೇ ಅವರು ನಿಷೇಧದ ಬಗ್ಗೆ ಹೇಳಿಕೆ ನೀಡಿದ್ದಾರೆ. ಸಿಎಂ ಮನೆ ಮುಂದೆ ಪಟಾಕಿ ಸುಡಲಾಯಿತು, ಆದರೆ ಸನಾತನ ಧರ್ಮಕ್ಕೆ ಮಾತ್ರ ನ್ಯಾಯಾಲಯವು ಹಸಿರು ಪಟಾಕಿಗಳನ್ನು ಸುಡಲು ಅನುಮತಿ ನೀಡಿದೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next