Advertisement

ದೆಹಲಿ ಪೊಲೀಸರ ಭರ್ಜರಿ ಬೇಟೆ : ಆರು ಜನ ಉಗ್ರರ ಬಂಧನ

08:16 PM Sep 14, 2021 | Team Udayavani |

ನವದೆಹಲಿ :  ದೆಹಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ವಿದ್ವಂಸಕ ಕೃತ್ಯಕ್ಕೆ ಹೊಂಚು ಹಾಕಿದ್ದ ಆರು ಜನ ಉಗ್ರರನ್ನು ಮಂಗಳವಾರ ವಶಕ್ಕೆ ಪಡೆದಿದ್ದಾರೆ.

Advertisement

ಬಂಧಿತರಲ್ಲಿ ಪಾಕ್‍ ನಲ್ಲಿ ತರಬೇತಿ ಪಡೆದವರು ಇಬ್ಬರು ಇದ್ದಾರೆ. ಹಲವು ರಾಜ್ಯಗಳಲ್ಲಿ ಕಾರ್ಯಾಚರಣೆ ನಡೆಸಿ ಸ್ಫೋಟಕಗಳು ಹಾಗೂ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಡಿಸಿಪಿ ಪ್ರಮೋದ್ ಮಾಹಿತಿ ನೀಡಿದರು. ಶಂಕಿತರು ದೇಶದಾದ್ಯಂತ ಸ್ಫೋಟಗಳನ್ನು ನಡೆಸಲು ಹಾಗೂ ಕೆಲವು ವ್ಯಕ್ತಿಗಳನ್ನು ಗುರಿ ಮಾಡಿ ಹತ್ಯೆ ನಡೆಸಲು ಯೋಜನೆ ರೂಪಿಸಿದ್ದರು ಎಂದು ಹೇಳಿದರು.

‘ಕೋಟಾದಿಂದ ಒಬ್ಬ, ದೆಹಲಿಯಿಂದ ಇಬ್ಬರು ಹಾಗೂ ಉತ್ತರ ಪ್ರದೇಶದಿಂದ ಮೂವರನ್ನು ಬಂಧಿಸಲಾಗಿದೆ. ಆರು ಜನರ ಪೈಕಿ ಇಬ್ಬರು ಮಸ್ಕತ್‌ ಮೂಲಕ ಪಾಕಿಸ್ತಾನ ಪ್ರವೇಶಿಸಿದ್ದರು. ಅಲ್ಲಿ ಅವರಿಗೆ ಸ್ಫೋಟಕಗಳು, ಎಕೆ–47 ಸೇರಿದಂತೆ ಶಸ್ತ್ರಾಸ್ತ್ರಗಳ ಬಳಕೆಯ ಕುರಿತು 15 ದಿನಗಳ ತರಬೇತಿ ನೀಡಲಾಗಿತ್ತು’ ಎಂದು ದೆಹಲಿ ಪೊಲೀಸ್‌ ವಿಶೇಷ ಘಟಕ ತಿಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next