Advertisement

ಗಾಯಕ ಸಿಧು ಮೂಸೆವಾಲಾ ಹತ್ಯೆ ಮಾಡಿದ ಇಬ್ಬರು ಶಾರ್ಪ್ ಶೂಟರ್ ಗಳ ಬಂಧನ

04:39 PM Jun 20, 2022 | Team Udayavani |

ಹೊಸದಿಲ್ಲಿ: ಇತ್ತೀಚೆಗೆ ನಡೆದ ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಇಬ್ಬರು ಶಾರ್ಪ್ ಶೂಟರ್ ಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಪ್ರಿಯವ್ರತ್ ಫೌಜಿ ಮತ್ತು ಕಾಶಿಶ್ ಎಂದು ಗುರುತಿಸಲಾಗಿದೆ.

Advertisement

ಈ ಇಬ್ಬರು ಆರೋಪಿಗಳನ್ನು ಗುಜರಾತ್ ನ ಮುಂದ್ರಾದಲ್ಲಿ ಪೊಲೀಸರು ಬಂಧಿಸಿದ್ದಾರೆ. ಇವರಿಂದ ಸ್ಪೋಟಕಗಳು ಮತ್ತು ಶಸ್ತಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಪ್ರಿಯವ್ರತ್ ಫೌಜಿ ಹರಿಯಾಣ ಮೂಲದ ಗ್ಯಾಂಗ್ ಸ್ಟರ್. ರಾಮಕರನ್ ಗ್ಯಾಂಗ್ ನ ಸದಸ್ಯನಾಗಿದ್ದ ಈತ ಶಾರ್ಪ್ ಶೂಟರ್ ಆಗಿ ಕೆಲಸ ಮಾಡುತ್ತಿದ್ದ. ಮೂಸೆವಾಲಾ ಕೊಲೆ ಪ್ರಕರಣದಲ್ಲಿ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್‌ ನೊಂದಿಗೆ ನೇರ ಸಂಪರ್ಕದಲ್ಲಿದ್ದ ಪ್ರಿಯವ್ರತ್ ಶೂಟರ್‌ ಗಳ ತಂಡವನ್ನು ಮುನ್ನಡೆಸಿದ್ದ. ಅಲ್ಲದೆ ಪ್ರಿಯವ್ರತ್ ಫೌಜಿ ಈ ಹಿಂದೆ ಎರಡು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ.

ಈ ಹಿಂದೆ ಫತೇಘರ್‌ ನ ಪೆಟ್ರೋಲ್ ಪಂಪ್‌ ನಲ್ಲಿ ಫೌಜಿಯೊಂದಿಗಿದ್ದ ಕಾಶಿಶ್ 2021ರಲ್ಲಿ ನಡೆದ ಕೊಲೆ ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದಾನೆ. ಮೂಸೆ ವಾಲಾ ಮೇಲೆ ಗುಂಡು ಹಾರಿಸಿದ ಶೂಟರ್‌ಗಳಲ್ಲಿ ಈತನೂ ಒಬ್ಬ.

ಇದನ್ನೂ ಓದಿ:ಮಹಾರಾಷ್ಟ್ರದ ಸಾಂಗ್ಲಿಯ ಒಂದೇ ಮನೆಯಲ್ಲಿ ಒಂಬತ್ತು ಶವ ಪತ್ತೆ, ಸಾಮೂಹಿಕ ಆತ್ಮಹತ್ಯೆ ಶಂಕೆ

Advertisement

ಮತ್ತೋರ್ವ ಶಾರ್ಪ್ ಶೂಟರ್ ಸಂತೋಷ್ ಜಾಧವ್ ನನ್ನು ಪುಣೆ ಪೊಲೀಸರು ಜೂನ್ 18 ರಂದು ಬಂಧಿಸಿದ್ದರು. ಆತನಿಂದ ಒಟ್ಟು 13 ಅಕ್ರಮ ಪಿಸ್ತೂಲ್ ಮತ್ತು ಎಂಟು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಮೇ 29 ರಂದು ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಗಾಯಕ-ರಾಜಕಾರಣಿ ಸಿಧು ಮೂಸೆವಾಲಾ ಅವರನ್ನು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದರು. ಸಿಧು ಮೂಸೆವಾಲಾ ಅವರ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದುಕೊಂಡ ಒಂದು ದಿನದ ನಂತರ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next