ಹೊಸದಿಲ್ಲಿ: ಮುಂದಿನ ತಿಂಗಳು ರಾಷ್ಟ್ರ ರಾಜಧಾನಿಯಲ್ಲಿ ನಡೆಯಲಿರುವ ಜಿ20 ಶೃಂಗಸಭೆಗೆ ಮುನ್ನ ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ (ಎಸ್‌ಎಫ್‌ಜೆ) ಕಾರ್ಯಕರ್ತರು ಐದಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳನ್ನು ಖಲಿಸ್ತಾನ್ ಪರ ಬರಹದೊಂದಿಗೆ ವಿರೂಪಗೊಳಿಸಿದ್ದಾರೆ ಎಂದು ದೆಹಲಿ ಪೊಲೀಸರು ಭಾನುವಾರ ಹೇಳಿದ್ದಾರೆ.
ಖಲಿಸ್ತಾನ್ ಪರ ಘೋಷಣೆಗಳನ್ನು ಬರೆಯಲಾಗಿರುವ ದೆಹಲಿ ಮೆಟ್ರೋ ನಿಲ್ದಾಣಗಳ ಕಚ್ಚಾ ದೃಶ್ಯಗಳನ್ನು ಎಸ್‌ಎಫ್‌ಐ ಬಿಡುಗಡೆ ಮಾಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎಸ್ಎಫ್ ಜೆ ಕಾರ್ಯಕರ್ತರು ದೆಹಲಿಯ ಶಿವಾಜಿ ಪಾರ್ಕ್‌ನಿಂದ ಪಂಜಾಬಿ ಬಾಗ್ ವರೆಗಿನ ಬಹು ಮೆಟ್ರೋ ನಿಲ್ದಾಣಗಳಲ್ಲಿ ಖಲಿಸ್ತಾನ್ ಪರ ಘೋಷಣೆ ಬರೆದಿದ್ದಾರೆ.
ಇದನ್ನೂ ಓದಿ:Nayanthara-Vignesh: ಅವಳಿ ಮಕ್ಕಳೊಂದಿಗೆ ಮೊದಲ ಓಣಂ; ಸ್ಪೆಷೆಲ್ ಫೋಟೋ ಹಂಚಿಕೊಂಡ ದಂಪತಿ
“ದೆಹಲಿ ಬನೇಗಾ ಖಲಿಸ್ತಾನ್” ಮತ್ತು “ಖಾಲಿಸ್ತಾನ್ ಜಿಂದಾಬಾದ್” ನಂತಹ ಗೀಚುಬರಹವು ಮೆಟ್ರೋ ನಿಲ್ದಾಣಗಳ ಗೋಡೆಗಳ ಮೇಲೆ ಬರೆಯಲಾಗಿದೆ.
ಸೆಪ್ಟೆಂಬರ್ 9 ಮತ್ತು 10 ರಂದು ರಾಷ್ಟ್ರ ರಾಜಧಾನಿಯಲ್ಲಿ ಜಿ20 ಶೃಂಗಸಭೆ ನಡೆಯಲಿದೆ. ಜಿ20 ಶೃಂಗಸಭೆಗೂ ಮುನ್ನ ದೆಹಲಿ ಪೊಲೀಸರು ವಿವಿಧ ಕಡೆಗಳಿಂದ ಪ್ರಗತಿ ಮೈದಾನಕ್ಕೆ ಕಾರ್ಕೇಡ್ ರಿಹರ್ಸಲ್ ನಡೆಸುತ್ತಿರುವ ದಿನವೇ ಈ ಘಟನೆ ನಡೆದಿದೆ.
ಪೂರ್ವಾಭ್ಯಾಸಕ್ಕೆ ಅನುಕೂಲವಾಗುವಂತೆ ಬೆಳಿಗ್ಗೆ 9 ರಿಂದ ಮಧ್ಯಾಹ್ನ 12.30 ರವರೆಗೆ ಹಲವಾರು ಸ್ಥಳಗಳಲ್ಲಿ ಸಂಚಾರವನ್ನು ನಿಯಂತ್ರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.