ಹೊಸದಿಲ್ಲಿ : ಗರ್ಲ್ ಫ್ರೆಂಡ್ ಜತೆಗಿನ ಮಾತಿನ ಜಗಳದಲ್ಲಿ ಕೋಪೋದ್ರಿಕ್ತನಾದ 25ರ ಹರೆಯದ ಶಿವಂ ಎಂಬ ತರುಣ ಆಟೋ ರಿಕ್ಷಾವೊಂದರಲ್ಲಿ ಪೆಟ್ರೋಲ್ ಸುರಿದು, ಬೆಂಕಿ ಹಚ್ಚಿಕೊಂಡು ಗಂಭೀರ ಸುಟ್ಟಗಾಯಗಳಿಗೆ ಗುರಿಯಾದದ್ದಲ್ಲದೆ ತನ್ನಿಬ್ಬರು ಸಹ ಪ್ರಯಾಣಿಕರೂ ಗಾಯಗೊಳ್ಳುವಂತೆ ಮಾಡಿರುವ ಘಟನೆ ಉತ್ತರ ದಿಲ್ಲಿಯ ಜ್ಯೋತಿ ನಗರ ಪ್ರದೇಶದಲ್ಲಿ ನಡೆದಿದೆ.
ಗಾಜಿಯಾಬಾದ್‌ನ ಲೋನಿ ನಿವಾಸಿಯಾಗಿರುವ ಶಿವಂ ನ ಈ ಅತಿರೇಕದ ಕೃತ್ಯದಲ್ಲಿ ಸುಟ್ಟ ಗಾಯಗಳಿಗೆ ಗುರಿಯಾದ ಇನ್ನಿಬ್ಬರು ಆಟೋ ಪ್ರಯಾಣಿಕರೆಂದರೆ ಆತನ ಸೋದರ ಸಂಬಂಧಿ ಅರ್ಜುನ್ (24) ಮತ್ತು ಭಗವಾನ್ ಸಿಂಗ್ (60).
ಸುದ್ದಿ ತಿಳಿದೊಡನೆಯೇ ಸ್ಥಳಕ್ಕೆ ಧಾವಿಸಿ ಬಂದ ಜ್ಯೋತಿ ನಗರ ಠಾಣೆಯ ಪೊಲೀಸರು ಶಿವಂ ಸಹಿತ ಮೂವರೂ ಗಾಯಾಳುಗಳನ್ನು ತೇಜ್ ಬಹಾದ್ದೂರ್ ಆಸ್ಪತ್ರೆಗೆ ಸೇರಿಸಿದರು.
ಕೋಲ್ಕತ ಮೂಲದ ಮಹಿಳೆಯೊಂದಿಗೆ ಮಾತಿನ ಚಕಮಕಿ ಜೋರಾಗುತ್ತಿದ್ದಂತೆಯೇ ಶಿವಂ ತನ್ನ ಮೇಲೆ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡ; ಆಟೋ ಚಾಲಕ ಕೂಡಲೇ ವಾಹನದಿಂದ ಪರಾರಿಯಾದ ಎಂದು ಪೊಲೀಸರುತಿಳಿಸಿದ್ದಾರೆ.
Related Articles
ಶಿವಂ ನ ಈ ಅತಿರೇಕದ ಕೃತ್ಯಕ್ಕೆ ಕಾರಣವೇನೆಂದು ಈಗಿನ್ನೂ ಖಚಿತವಾಗಿ ಗೊತ್ತಾಗಿಲ್ಲ. ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.