Advertisement

ಎನ್ ಕೌಂಟರ್ ತಂಡ ಸೇರಿದ ದೆಹಲಿಯ ಮೊದಲ ಮಹಿಳಾ ಖಾಕಿ ಅಧಿಕಾರಿ

04:53 PM Mar 28, 2021 | Team Udayavani |

ದೆಹಲಿ: ದೆಹಲಿಯ ದರೋಡೆಕೋರರನ್ನು  ಹೆಡೆಮುರಿಕಟ್ಟುವಲ್ಲಿ ಅಪರಾಧ ವಿಭಾಗದ ಎನ್ ಕೌಂಟರ್ ತಂಡದ ಜೊತೆಗೆ ಮಹಿಳಾ ಸಬ್ ಇಸ್ಟೆಕ್ಟರ್ ಒಬ್ಬರು ಕೈ ಜೋಡಿಸಿದ್ದು,  ಎನ್ ಕೌಂಟರ್ ತಂಡದ ಜೊತೆ ಭಾಗವಹಿಸಿದ ದೆಹಲಿಯ ಮೊದಲ ಮಹಿಳಾ ಪೊಲೀಸ್ ಅಧಿಕಾರಿ  ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Advertisement

ಮಧ್ಯ ದೆಹಲಿಯ ಪ್ರಗತಿ ಮೈದಾನದಲ್ಲಿ ದರೋಡೆಕೋರರನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ ಮಹಿಳಾ  ಸಬ್ ಇಸ್ಟೆಕ್ಟರ್ ಪ್ರಿಯಾಂಕಾ ಭಾಗವಹಿಸಿದ್ದು, ತಮ್ಮ ಪ್ರಾಣವನ್ನು ಪಣವಾಗಿಟ್ಟು ದರೋಡೆಕೋರರನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪೊಲೀಸ್ ಅಧಿಕಾರಿಗಳು,  ಮಧ್ಯ ದೆಹಲಿಯ ಪ್ರಗತಿ ಮೈದಾನದಲ್ಲಿ ದರೋಡೆಕೋರರನ್ನು ಹಿಡಿಯುವ ಕಾರ್ಯಾಚರಣೆಯಲ್ಲಿ  ಮಹಿಳಾ  ಸಬ್ ಇಸ್ಟೆಕ್ಟರ್ ಪ್ರಿಯಾಂಕಾ ಭಾಗವಹಿಸಿದ್ದು, ಈ ಕಾರ್ಯಾಚರಣೆಯಲ್ಲಿ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.  ಕಾರ್ಯಾಚರಣೆ ನಡೆಯುವಾಗ  ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ಆದರೆ ರಕ್ಷಣಾ ಕವಚ ಧರಿಸಿದ್ದ ಕಾರಣ ಅವರಿಗೆ ಯಾವುದೇ ವಿಧವಾದ ತೊಂದರೆ ಆಗಿಲ್ಲ ಎಂದಿದ್ದಾರೆ.

ಇದನ್ನೂ ಓದಿ:ಮಂದಿರ ಕಟ್ಟುವ ವರ್ಷದಲ್ಲೇ ಹೆಣ್ಣಿನ ಮೇಲೆ ದೌರ್ಜನ್ಯ; ರಾಮರಾಜ್ಯವೋ, ರಾವಣರಾಜ್ಯವೋ?: ಉಗ್ರಪ್ಪ

ದರೋಡೆಕೋರ, ರೋಹಿತ್ ಚೌಧರಿ, ಕಳೆದ ಎರಡು ವರ್ಷಗಳ ಹಿಂದೆ ಸಾಕಟ್ ನ ಕೋರ್ಟ್ ನ ಹೊರಭಾಗದಲ್ಲಿ ಕೊಲೆಯೊಂದನ್ನು ಮಾಡಲು ಸಂಚು ರೂಪಿಸಿದ್ದ, ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಎಂದಿರುವ ಪೊಲೀಸರು, ಈತ ಕಳೆದ ಎರಡು ವರ್ಷಗಳಿಂದ ಪೊಲೀಸರ ಕೈಗೆ ಸಿಗದೆ ತಪ್ಪಿಸಿಕೊಂಡು ಓಡಾಡುತ್ತಿದ್ದ.  ಈತ ಮತ್ತು ಈತನ ಸಹಚರರಿಗಾಗಿ ಕಳೆದ ತಿಂಗಳಿನಿಂದ ಪೊಲೀಸರು ತೀರ್ವ ಹುಡುಕಾಟ ನಡೆಸುತ್ತಿದ್ದರು ಎನ್ನಲಾಗಿದೆ.

Advertisement

ಗುಂಡಿನ ದಾಳಿಯ ಕುರಿತಾಗಿ ಮಾಹಿತಿ ನೀಡಿರುವ ಪೊಲೀಸರು ನಮ್ಮ ತಂಡಕ್ಕೆ ದರೋಡೆಕೋರರ ಕುರಿಯಾಗಿ ಸುಳಿವು ದೊರೆತಿದ್ದು, ಕಾರೊಂದರಲ್ಲಿ ಅವರು ಆಗಮಿಸುತ್ತಿರುವುದು ತಿಳಿದು ಬಂದಿದೆ. ಹೀಗಾಗಿ ಆ ಕಾರನ್ನು ರಿಂಗ್ ರೋಡ್ ನಲ್ಲಿ ತಡೆಯಲು ಯತ್ನಿಸಲಾಗಿದೆ. ಆದರೆ ದರೋಡೆಕೋರರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. ಈ ಸಮಯದಲ್ಲಿ ಗುಂಡು ಅಧಿಕಾರಿಗಳು ಧರಿಸಿದ್ದ ಸುರಕ್ಷಾ ಕವಚಕ್ಕೆ ತಾಗಿದ ಕಾರಣ ಯಾವ ಅಧಿಕಾರಿಗೂ ತೊಂದರೆಯಾಗಿಲ್ಲ ಎಂದಿದ್ದಾರೆ.

ಒಟ್ಟು ಆರು ಸುತ್ತುಗಳಲ್ಲಿ ಗುಂಡಿನ ದಾಳಿ ನಡೆದಿದ್ದು, ಆರೋಪಿಗಳ ಕಾಲಿಗೆ ಗಾಯಗಳಾಗಿವೆ  ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next