Advertisement

ಹೊಸದಿಲ್ಲಿ-ಹೈದರಾಬಾದ್‌ ವಿಮಾನದಲ್ಲಿ ಅನುಚಿತ ವರ್ತನೆ: ಗೇಟ್‌ಪಾಸ್‌

12:05 AM Jan 24, 2023 | Team Udayavani |

ಹೊಸದಿಲ್ಲಿ/ಮುಂಬಯಿ: ವಿಮಾನದಲ್ಲಿ ಪ್ರಯಾಣಿಕರ ದುರ್ವರ್ತನೆಗೆ ನಿಯಂತ್ರಣವೇ ಇಲ್ಲದಂತಾಗಿದೆ. ಹೊಸದಿಲ್ಲಿಯಿಂದ ಹೈದರಾಬಾದ್‌ಗೆ ಹೊರಟಿದ್ದ ಸ್ಪೈಸ್‌ ಜೆಟ್‌ ವಿಮಾನದಲ್ಲಿ ಗಗನಸಖೀಯ ಜತೆಗೆ ಇಬ್ಬರು ವ್ಯಕ್ತಿಗಳು ನಿಯಮ ಮೀರಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ಹೀಗಾಗಿ ಅವರಿಬ್ಬರನ್ನು ತಕ್ಷಣವೇ ವಿಮಾನದಿಂದ ಇಳಿಸಲಾಗಿದೆ.

Advertisement

ಅವರಿಬ್ಬರು ಗಗನಸಖೀಯ ಜತೆಗೆ ವಾಗ್ವಾದದಲ್ಲಿ ತೊಡಗಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಕೂಡಲೇ ಅವರಿಬ್ಬರನ್ನು ಹೊಸದಿಲ್ಲಿ ಏರ್‌ಪೋರ್ಟ್‌ನ ಭದ್ರತಾ ಸಿಬಂದಿ ವಶಕ್ಕೆ ಒಪ್ಪಿಸಲಾಗಿದೆ. ಇಬ್ಬರ ಪೈಕಿ ಒಬ್ಟಾತ ಸಿಬಂದಿ ಜತೆಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಸ್ಪೈಸ್‌ ಜೆಟ್‌ನ ವಕ್ತಾರರು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next