ಹೊಸದಿಲ್ಲಿ: ದಿಲ್ಲಿ ಹೊರವಲಯದ ಸುಲ್ತಾನ್‌ಪುರಿಯಲ್ಲಿ ನಡೆದ ಸ್ಕೂಟಿ-ಕಾರು ಅಪಘಾತದಲ್ಲಿ ಕಾರಿನಡಿ ಸಿಲುಕಿದ್ದ ಯುವ ತಿಯನ್ನು 12 ಕಿ.ಮೀ. ಎಳೆದೊಯ್ದ ಪ್ರಕರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ದೀಪಕ್ ಖನ್ನಾ (26), ಅಮಿತ್ ಖನ್ನಾ (25), ಕೃಷ್ಣಾ (27), ಮಿಥುನ್(26) ಮತ್ತು ಮನೋಜ್ ಮಿತ್ತಲ್ ಬಂಧಿತರು. ಬಂಧಿತರನ್ನು ದಿಲ್ಲಿ ನ್ಯಾಯಾಲಯ 3 ದಿನ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಶವ ಪರೀಕ್ಷೆಗಾಗಿ ವೈದ್ಯಕೀಯ ಮಂಡಳಿ ಒಂದನ್ನು ರಚಿಸಲಾಗಿದೆ. ಅಪಘಾತ ಸಂಬಂಧ ಕಾರನ್ನು ವಶ ಪಡಿ ಸಿಕೊಳ್ಳಲಾಗಿದ್ದು, ಕಾರಿನ ವಿಧಿವಿಜ್ಞಾನ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರವಿವಾರ ಮುಂಜಾನೆ 3 ಗಂಟೆ ಸುಮಾರಿಗೆ ಸುಲ್ತಾನ್‌ಪುರಿಯಲ್ಲಿ ಅಪಘಾತ ನಡೆದು, ಸ್ಕೂಟಿ ಚಲಾ ಯಿಸುತ್ತಿದ್ದ 20ರ ಯುವತಿ ಅಂಜಲಿ ಸಾವಿ ಗೀಡಾಗಿದ್ದರು. ಸ್ಕೂಟಿಯೊಂದಿಗೆ ಕೆಳಗೆ ಬಿದ್ದ ಅಂಜಲಿಯ ಕಾಲುಗಳು ಕಾರಿನ ತಳಭಾಗಕ್ಕೆ ಸಿಲುಕಿ ಕೊಂಡ ಕಾರಣ, 12 ಕಿ.ಮೀ. ದೂರದ ವರೆಗೂ ಅಂಜಲಿ ಎಳೆಯಲ್ಪಟ್ಟಿದ್ದರು. ಕಂಜಾವಾಲ ಪ್ರದೇಶದಲ್ಲಿ ಬಟ್ಟೆಗಳಿಲ್ಲದೇ ನಗ್ನವಾಗಿ ಮೃತದೇಹ ಪತ್ತೆಯಾಗಿತ್ತು. ಕಾರಿನಲ್ಲಿ ಆರೋಪಿಗಳು ದೊಡ್ಡ ಧ್ವನಿಯಲ್ಲಿ ಸಂಗೀತ ಹಾಕಿಕೊಂಡಿದ್ದರು. ಹೀಗಾಗಿ ಕಾರಿನಡಿ ಸಿಲುಕಿದ್ದ ಅಂಜಲಿ ಜೋರಾಗಿ ಕಿರು ಚಿತ್ತಿದ್ದರೂ ಆರೋಪಿಗಳಿಗೆ ಕೇಳಿಸಿರಲಿಲ್ಲ ಎನ್ನಲಾಗಿದೆ.
ಕಾರು ನಿಲ್ಲಿಸಲು ಪ್ರಯತ್ನಿಸಿದೆ: “ರವಿವಾರ ಮುಂಜಾನೆ ನಾನು ನನ್ನ ಅಂಗಡಿ ಹೊರಗೆ ನಿಂತಿದ್ದೆ. ಕಾರು ಯೂಟರ್ನ್ ತೆಗೆದು ಕೊಳ್ಳುವ ಸಂದರ್ಭದಲ್ಲಿ ಅದರಡಿ ಯುವತಿ ಸಿಲುಕಿರುವುದನ್ನು ನೋಡಿದೆ. ಕಾರು 2-3 ಬಾರಿ ಇದೇ ಹಾದಿಯಲ್ಲಿ ಹೋಯಿತು. ನಾನು ಕಾರನ್ನು ತಡೆಯಲು ಪ್ರಯತ್ನಿಸಿದೆ. ಆದರೆ ಅವರು ಕಾರು ನಿಲ್ಲಿಸಲಿಲ್ಲ,’ ಎಂದು ಪ್ರತ್ಯಕ್ಷದರ್ಶಿ ದೀಪಕ್ ದಹಿಯಾ ತಿಳಿಸಿದ್ದಾರೆ. ಕಾರು ಯೂರ್ಟನ್ ತೆಗೆದುಕೊಳ್ಳುತ್ತಿರುವುದು, ಅದರಡಿ ದೇಹ ಸಿಲುಕಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಾರ್ವಜನಿಕರ ಆಕ್ರೋಶ: ಆರೋಪಿಗಳ ವಿರುದ್ಧ ಸೂಕ್ತ ಕ್ರಮಕ್ಕೆ ಆಗ್ರಹಿಸಿ ಅಂಜಲಿ ಕುಟುಂಬಸ್ಥರು, ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಘಟನೆ ಖಂಡಿಸಿ ಆಪ್ ಕಾರ್ಯಕರ್ತರು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೆನಾ ಅವರ ನಿವಾಸದ ಎದುರು ಪ್ರತಿಭಟನೆ ನಡೆಸಿದರು. “ಆರೋಪಿಗಳಲ್ಲಿ ಒಬ್ಟಾತ ಬಿಜೆಪಿ ಸದಸ್ಯ. ಅಪಘಾತ ಮಾತ್ರ ಆಗಿದ್ದರೆ ಮೃತದೇಹ ಏಕೆ ನಗ್ನವಾಗಿತ್ತು,’ ಎಂದು ಆಪ್ ಶಾಸಕ ಸೌರಭ್ ಭಾರದ್ವಾಜ್ ಪ್ರಶ್ನಿಸಿದ್ದಾರೆ.
ಘಟನೆ ಕುರಿತು ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ.ಸಕ್ಸೆನಾ ಅವರೊಂದಿಗೆ ಮಾತನಾಡಿದ್ದು, ಎಷ್ಟೇ ಪ್ರಭಾ ವಿಗಳಿದ್ದರೂ ಆರೋಪಿಗಳ ವಿರುದ್ಧ ಕ್ರಮಕ್ಕೆ ಮನವಿ ಮಾಡಿದ್ದೇನೆ.
-ಅರವಿಂದ್ ಕೇಜ್ರಿವಾಲ್, ದೆಹಲಿ ಮುಖ್ಯಮಂತ್ರಿ