Advertisement

ಕಲ್ಲಿದ್ದಲು ಹಗರಣ: ಮಧು ಕೋಡ ಜೈಲಿಗೆ ದಿಲ್ಲಿ ಹೈಕೋರ್ಟ್‌ ತಡೆ

03:40 PM Jan 02, 2018 | udayavani editorial |

ಹೊಸದಿಲ್ಲಿ : ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ  ಜಾರ್ಖಂಡ್‌ ಮಾಜಿ ಮುಖ್ಯಮಂತ್ರಿ ಮಧು ಕೋಡ ದೋಷಿ ಎಂದು ಪರಿಗಣಿಸಲ್ಪಟ್ಟು ಸಿಬಿಐ ವಿಶೇಷ ನ್ಯಾಯಾಲಯದಿಂದ ವಿಧಿಸಲ್ಪಟ್ಟ ಮೂರು ವರ್ಷಗಳ ಜೈಲು ಶಿಕ್ಷೆಗೆ ದಿಲ್ಲಿ ಹೈಕೋರ್ಟ್‌ ಇಂದು ಮಂಗಳವಾರ ತಡೆಯಾಜ್ಞೆ ನೀಡಿದೆ.

Advertisement

ಕೆಳ ನ್ಯಾಯಾಲಯ ವಿಧಿಸಿದ 25 ಲಕ್ಷ ರೂ. ದಂಡಕ್ಕೆ ಕೂಡ ದಿಲ್ಲಿ ಹೈಕೋರ್ಟ್‌ ಮುಂದಿನ ವಿಚಾರಣೆಯ ತನಕವೂ ತಡೆಯಾಜ್ಞೆ ನೀಡಿದೆ. 

ಸಿಬಿಐ ವಿಶೇಷ ನ್ಯಾಯಾಲಯ ಮಧು ಕೋಡ ಗೆ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು 25 ಲಕ್ಷ ರೂ. ದಂಡವನ್ನು ವಿಧಿಸಿತ್ತು.

ಮಧು ಕೋಡ ಮತ್ತು ಇತರ ಮೂವರಿಗೆ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸುವುದಕ್ಕೆ ನ್ಯಾಯಾಲಯವು ಎರಡು ತಿಂಗಳ ಶಾಸನಾತ್ಮಕ ಮಧ್ಯಾವಧಿ ಜಾಮೀನನ್ನು ಮಂಜೂರು ಮಾಡಿತ್ತು.

Advertisement

Udayavani is now on Telegram. Click here to join our channel and stay updated with the latest news.

Next