Advertisement

ಮಾರ್ಚ್‌ 22ರ ತನಕ ಇಡಿಯಿಂದ ಕಾರ್ತಿ ಬಂಧನ ಇಲ್ಲ

12:28 PM Mar 15, 2018 | udayavani editorial |

ಹೊಸದಿಲ್ಲಿ : ಐಎನ್‌ಎಕ್ಸ್‌ ಮೀಡಿಯ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಕಾರ್ತಿ ಚಿದಂಬರಂ ಅವರನ್ನು ಮಾರ್ಚ್‌ 22ರ ವರೆಗೆ ಬಂಧಿಸದಂತೆ ದಿಲ್ಲಿ ಹೈಕೋರ್ಟ್‌ ರಕ್ಷಣೆ ನೀಡಿದೆ. 

Advertisement

ನ್ಯಾಯಾಧೀಶರಾದ ಎಸ್‌ ಮುರಲೀಧರ್‌ ಮತ್ತು ಐ ಎಸ್‌ ಮೆಹ್ತಾ ಅವರನ್ನು ಒಳಗೊಂಡ ದಿಲ್ಲಿ ಹೈಕೋರ್ಟ್‌ ಪೀಠ, ಐಎನ್‌ಎಕ್ಸ್‌ ಮೀಡಿಯ ಹಗರಣದ ವಿಚಾರಣೆಯನ್ನು ಮಾರ್ಚ್‌ 20ರಿಂದ 22ಕ್ಕೆ ಮುಂದೂಡಿತು.

ಮಾರ್ಚ್‌ 20ರ ವಿಚಾರಣೆಗೆ ಕಾರ್ತಿ ಅವರ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಅಲಭ್ಯರಿರುವ ಕಾರಣವನ್ನು ಪರಿಗಣಿಸಿದ ಕೋರ್ಟ್‌ ಮಾರ್ಚ್‌ 22ಕ್ಕೆ ವಿಚಾರಣೆಯನ್ನು ನಿಗದಿಸಿತು. 

Advertisement

Udayavani is now on Telegram. Click here to join our channel and stay updated with the latest news.

Next