Advertisement

ಪತ್ನಿ ಕೊಲೆ ಕೇಸು: ಮಾಜಿ ಟಿವಿ ಆ್ಯಂಕರ್‌ ಸುಹೇಬ್‌ ಇಲ್ಯಾಸಿ ಖುಲಾಸೆ

11:41 AM Oct 05, 2018 | udayavani editorial |

ಹೊಸದಿಲ್ಲಿ : ಮಾಜಿ ಟಿವಿ ಆ್ಯಂಕರ್‌ ಮತ್ತು ನಿರ್ಮಾಪಕ ಸುಹೇಬ್‌ ಇಲ್ಯಾಸಿ ಅವರನ್ನು ದಿಲ್ಲಿ ಹೈಕೋರ್ಟ್‌ ಇಂದು ಶುಕ್ರವಾರ ಪತ್ನಿಯ ಕೊಲೆ ಕೇಸಿನಿಂದ ಖುಲಾಸೆಗೊಳಿಸಿದೆ.

Advertisement

ವರ್ಷಗಳ ಹಿಂದೆ ಹದಿನೆಂಟರ ಹರೆಯದ ತನ್ನ ಪತ್ನಿ ಅಂಜು ಅವರನ್ನು ತಾನು ಕೊಂದಿರುವುದಾಗಿ ಮಾಡಲಾಗಿದ್ದ ದೋಷಾರೋಪ ಮತ್ತು ನೀಡಲಾಗಿದ್ದ ಜೀವಾವಧಿ ಶಿಕ್ಷೆಯನ್ನು ಪ್ರಶ್ನಿಸಿ ಇಲ್ಯಾಸಿ ಸಲ್ಲಿಸಿದ್ದ ಮೇಲ್ಮನವಿಯನ್ನು ಜಸ್ಟಿಸ್‌ ಎಸ್‌ ಮುರಲೀಧರ್‌ ಮತ್ತು  ವಿನೋದ್‌ ಗೋಯಲ್‌ ಅವರು ಪರಿಗಣಿಸಿದರು. 

ವಿಚಾರಣಾ ನ್ಯಾಯಾಲಯವು 2017ರ ಡಿ.20ರಂದು ಇಲ್ಯಾಸಿ, ಪತ್ನಿಯ ಕೊಲೆ ಪ್ರಕರಣದಲ್ಲಿ ದೋಷಿ ಎಂದು ತೀರ್ಪಿತ್ತು ಜೀವಾವಧಿ ಶಿಕ್ಷೆ ನೀಡಿತ್ತು. ಇಂಡಿಯಾಸ್‌ ಮೋಸ್ಟ್‌ ವಾಂಟೆಡ್‌ ಟಿವಿ ಕ್ರೈಮ್‌ ಶೋ ಮೂಲಕ ಇಲ್ಯಾಸಿ ಭಾರೀ ಪ್ರಸಿದ್ದಿ ಪಡೆದುಕೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next