ನವ ದೆಹಲಿ : ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ರಾಷ್ಟ್ರ ರಾಜಧಾನಿಯ ಗಾಜ್ಹಿಪುರ ಗಡಿ ಭಾಗಕ್ಕೆ ಭೇಟಿ ನೀಡಿದ್ದಾರೆ.
ಗಾಜ್ಹಿಪುರ ಗಡಿಭಾಗಗಳಲ್ಲಿ ಪ್ರತಿಭಟನಾ ನಿರತ ರೈತರಿಗೆ ದೆಹಲಿ ಸರ್ಕಾರ ನೀಡಿದ ಸೌಲಭ್ಯಗಳನ್ನು ಸಿಸೋಡಿಯಾ ಪರಿಶೀಲಿಸಿದ್ದಾರೆ.
ಓದಿ : ಕಾಂಗ್ರೇಸ್ ಸಂಸದ ಶಶಿ ತರೂರ್ ಸೇರಿ ಆರು ಪತ್ರಕರ್ತರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು..!
ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ನ ವಕ್ತಾರ ರಾಕೇಶ್ ಟಿಕಾಯತ್, ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಲ್ಲಿ ರೈತರಿಗೆ ನೀರು ಮತ್ತು ಇತರೆ ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಮನವಿ ಮಾಡಿಕೊಂಡಿದ್ದರು.
“ಪ್ರತಿಭಟನಾಕಾರರಿಗೆ ದೆಹಲಿ ಸರ್ಕಾರದಿಂದ ನೀರಿನ ಮತ್ತು ಶೌಚಾಲಯಗಳ ವ್ಯವಸ್ಥೆಯನ್ನು ನಿನ್ನೆ ರಾತ್ರಿಯೇ ಒದಗಿಸಿಕೊಡಲಾಗಿದೆ. ಅದನ್ನು ಪರಿಶೀಲಿಸುವುದಕ್ಕಾಗಿ ನಾನು ಇಲ್ಲಿಗೆ ಬಂದಿದ್ದೇನೆ” ಎಂದು ಮಾಧ್ಯಮಗಳಿಗೆ ಸಿಸೋಡಿಯಾ ಪ್ರತಿಕ್ರಿಯಿಸಿದ್ದಾರೆ.
ಓದಿ : ಹಿಂಸಾಚಾರ ಒಪ್ಪಲು ಸಾಧ್ಯವಿಲ್ಲ,ರೈತರ ಏಳಿಗೆಗೆ ಬದ್ಧ; ಕೃಷಿ ನೀತಿ ಸಮರ್ಥಿಸಿಕೊಂಡ ರಾಷ್ಟ್ರಪತಿ
ಇನ್ನೊಂದೆಡೆ, ದೆಹಲಿ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹಾಗೂ ದೆಹಲಿ ಜಲ ಇಲಾಖೆಯ (ಡಿಜೆಬಿ) ಉಪಾಧ್ಯಕ್ಷ ರಾಘವ್ ಚಾಂದ್ ಸಿಂಘು ಗಡಿಯಲ್ಲಿ ರೈತರಿಗೆ ಒದಗಿಸಿದ ವ್ಯವಸ್ಥೆಗಳನ್ನು ಪರಿಶೀಲಿಸಲು ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಏತನ್ಮಧ್ಯೆ, ಘಾಜಿಯಾಬಾದ್ ಜಿಲ್ಲಾಡಳಿತವು ಗುರುವಾರ(ಜ.28) ಸಂಜೆ ಪ್ರತಿಭಟನಾಕಾರರಿಗೆ ಸ್ಥಳವನ್ನು ಖಾಲಿ ಮಾಡುವಂತೆ ಆದೇಶ ಹೊರಡಿಸಿತ್ತು. ಮತ್ತು ಆದೇಶಗಳನ್ನು ಪಾಲಿಸದಿದ್ದರೆ ಬಲ ಪ್ರಯೋಗಿಸಲಾಗುವುದು ಎಂದು ಹೇಳಿದೆ.
ಗಣರಾಜ್ಯೋತ್ಸವದಂದು ನಡೆದ ರೈತರ ಟ್ರ್ಯಾಕ್ಟರ್ ಪರೇಡ್, ಹಿಂಸಾಚಾರಕ್ಕೆ ತಿರುಗಿದ ಹಿನ್ನೆಲೆಯಲ್ಲಿ ಮೂರು ರೈತ ಸಂಘಗಳು (ಬಿಕೆಯು) ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ತಮ್ಮ ಬೆಂಬಲವನ್ನು ಹಿಂಪಡೆದ ಮೇಲೆ ಘಾಜಿಯಾಬಾದ್ ಜಿಲ್ಲಾಡಳಿತದಿಂದ ಈ ಆದೇಶವನ್ನು ಹೊರಡಿಸಲಾಗಿದೆ.
ಓದಿ : ಭದ್ರತೆಗೆ ಮತ್ತೊಂದು ಫೀಚರ್ ನೀಡುತ್ತಿದೆ ವಾಟ್ಸ್ಯಾಪ್