Advertisement

ಕುಸಿದ ಆಟಗಾರನ ಕಣ್ಣೆತ್ತಿ ನೋಡದ ದಿಲ್ಲಿ ಕ್ರಿಕೆಟಿಗರು!

09:31 AM Jan 04, 2018 | Team Udayavani |

ಇಂದೋರ್‌: ರಣಜಿ ಫೈನಲ್‌ನಲ್ಲಿ ಸೋಲುಂಡ ಗೌತಮ್‌ ಗಂಭೀರ್‌ ನೇತೃತ್ವದ ದಿಲ್ಲಿ ತಂಡಕ್ಕೆ ಸೋಲಿನ ಅವಮಾನದ ಜೊತೆಗೆ
ಮಾನವೀಯತೆ ಮರೆತ ಕಳಂಕವೂ ಈಗ ಅಂಟಿಕೊಂಡಿದೆ. ದಿಲ್ಲಿ ತಂಡದ ವಿರುದ್ಧ ಇಂದೋರ್‌ನಲ್ಲಿ ನಡೆದ ರಣಜಿ ಫೈನಲ್‌ ಪಂದ್ಯವನ್ನು ವಿದರ್ಭ ಪ್ರಚಂಡ 9 ವಿಕೆಟ್‌ಗಳಿಂದ ಜಯಿಸಿತ್ತು. ಐತಿಹಾಸಿಕ ಮೊದಲ ಟ್ರೋಫಿಗೆ ವಿದರ್ಭ ಆಟಗಾರರು ಮುತ್ತಿಕ್ಕಿದ್ದರು. ಸೋಲಿಗೆ ತುತ್ತಾದ ರಿಷಭ್‌ ಪಂತ್‌ ಪಡೆ ಫೈನಲ್‌ ತನಕ ಸಾಗಿ ಬಂದ ಸಾಧನೆಯನ್ನು ಯಾರೂ ಹೊಗಳಲಿಲ್ಲ. ಸೋಲಿಗೆ ಅಯ್ಯೋ ಪಾಪ.. ಅನ್ನಲಿಲ್ಲ. ಇದಕ್ಕೆ ಕಾರಣ ವಿದರ್ಭ ಬ್ಯಾಟ್ಸ್‌ ಮನ್‌ ಜತೆಗೆ ದಿಲ್ಲಿ ಆಟಗಾರರು ನಡೆದುಕೊಂಡ ರೀತಿ.

Advertisement

ಹೌದು, ಜಂಟಲ್‌ಮಾನ್‌ ಕ್ರಿಕೆಟ್‌ನಲ್ಲಿ ಸಾಮಾನ್ಯವಾಗಿ ಬೌನ್ಸರ್‌ ಏಟಿಗೆ ಬ್ಯಾಟ್ಸ್‌ಮನ್‌ವೊಬ್ಬ ತುತ್ತಾದಾಗ ಅಥವಾ ಆಟಗಾರ ಗಾಯಗೊಂಡಾಗ ಆಟಗಾರ ತಂಡ ಬೇದ ಮರೆತು ಯೋಗಕ್ಷೇಮ ವಿಚಾರಿಸುವುದು ಸಾಮಾನ್ಯ. ಅದು ಮನುಷ್ಯತ್ವ ಕೂಡ. ಆದರೆ
ಬೌನ್ಸರ್‌ ಏಟು ತಿಂದು ಆಟಗಾರ ಕುಸಿದು ಬಿದ್ದದ್ದೂ ಗೊತ್ತಾಗಿಯೂ ಆತನ ಬಳಿ ಯಾವೊಬ್ಬ ಆಟಗಾರ ತೆರಳದಿದ್ದರೆ? ಹೌದು,
ಇಂತಹದೊಂದು ದುವರ್ತನೆಯನ್ನು ದಿಲ್ಲಿ ತಂಡದ ಆಟಗಾರರು ರಣಜಿ ಫೈನಲ್‌ ವೇಳೆ ಪ್ರದರ್ಶಿಸಿದ್ದಾರೆ. ಚೆಂಡು ತಾಗಿ ವಿದರ್ಭ
ಬ್ಯಾಟ್ಸ್‌ಮನ್‌ ಅಲ್ಲೇ ಬಿದ್ದು ಹೊರಳಾಡುತ್ತಿದ್ದರೂ ಯಾವೊಬ್ಬ ಆಟಗಾರ ಕೂಡ ಸಮೀಪಕ್ಕೂ ಸುಳಿಯಲಿಲ್ಲ. ಕೊನೆಗೆ ವಿದರ್ಭದ ಮತ್ತೂಂದು ತುದಿಯಲ್ಲಿದ್ದ ಬ್ಯಾಟ್ಸ್‌ಮನ್‌ ಡ್ರೆಸ್ಸಿಂಗ್‌ ಕೊಠಡಿಯತ್ತ ಸಿಗ್ನಲ್‌ ಮಾಡಿದ್ದಾರೆ. ಅಲ್ಲಿಂದ ಸಹ ಸಿಬ್ಬಂದಿಯೊಬ್ಬರು
ಬಂದು ನೆರವಾಗಿದ್ದಾರೆ. ಮಾನವೀಯತೆ ಮರೆತ ಗಂಭೀರ್‌ ಪಡೆಯ ವರ್ತನೆಗೆ ಸಾಮಾಜಿಕ ಜಾಲತಾಣದಲ್ಲಿ ಈಗ ವ್ಯಾಪಕ
ವಿರೋಧ ವ್ಯಕ್ತವಾಗಿದೆ.

ಧೋನಿ ನೋಡಿ ಕಲಿಯಿರಿ?: ಸಾಮಾಜಿಕ ಜಾಲತಾಣ ಇನ್‌ಸ್ಟಾಗ್ರಾಮ್‌ನಲ್ಲಿ “ಬ್ಲೀಡ್‌ ಧೋನಿಸಂ’ ಎಂಬ ಖಾತೆಯಿಂದ ವಿಡಿಯೋ
ಅಪ್‌ಲೋಡ್‌ ಮಾಡಲಾಗಿದೆ. ಇದರಲ್ಲಿ ಗಂಭೀರ್‌ ಪಡೆಯ ವರ್ತನೆ ದಾಖಲಾಗಿದೆ. ಇದನ್ನು ಪ್ರಕಟಿಸಿದ ಬೆನ್ನಲ್ಲೆ ದಿಲ್ಲಿ ಆಟಗಾರರನ್ನು
ಚೆನ್ನಾಗಿ ಅಭಿಮಾನಿಗಳು ಬೈದಿದ್ದಾರೆ. ಬೈಗುಳ ಸುರಿಮಳೆ ಹೀಗಿದೆ. “ದಿಲ್ಲಿ ಕ್ರಿಕೆಟಿಗರೆ ನಿಮಗೆ ರಣಜಿ ಟ್ರೋಫಿ ಗೆಲ್ಲುವ ಯಾವ
ಅರ್ಹತೆಯೂ ಇಲ್ಲ..ಇಂತಹ ವರ್ತನೆಗೆ ಕ್ಷಮೆಯಿಲ್ಲ’ ಎಂದು ಅಭಿಮಾನಿಯೊಬ್ಬರು ಪೋಸ್ಟ್‌ ಮಾಡಿದ್ದಾರೆ. ಮತ್ತೂಬ್ಬರು ಟ್ವೀಟ್‌ ಮಾಡಿ “ರಿಷಭ್‌ ನೀವು ಹಿರಿಯ ಆಟಗಾರ ಧೋನಿಯಿಂದ ಕಲಿಯುವ ವಿಷಯ ಸಾಕಷ್ಟಿದೆ. ಇದು ನಿಮ್ಮ ನ್ಪೋರ್ಟ್ಸ್ಮೆನ್‌ ಸ್ಪಿರಿಟ್‌ ಅಲ್ಲ ಎಂದಿದ್ದಾರೆ.

ದೆಹಲಿ ತಂಡ ವಿಮಾನ ಅಪಘಾತದಿಂದ ಪಾರು 
ವಿದರ್ಭ ವಿರುದ್ಧ ರಣಜಿ ಟ್ರೋಫಿ ಫೈನಲ್‌ ಮುಗಿಸಿ ಇಂದೋರ್‌ ನಿಂದ ನವದೆಹಲಿಗೆ ಹೊರಟಿದ್ದ ದಿಲ್ಲಿ ಕ್ರಿಕೆಟ್‌ ತಂಡದ ಆಟಗಾರರು ಸ್ವಲ್ಪದರಲ್ಲೇ ವಿಮಾನ ಅಪಘಾತವೊಂದರಿಂದ ಪಾರಾದ ಘಟನೆ ಇಂದೋರ್‌ನಲ್ಲಿ ನಡೆದಿದೆ. ಪೈಲೆಟ್‌ ಸಮಯ ಪ್ರಜ್ಞೆಯಿಂದ
ದೊಡ್ಡದೊಂದು ದುರಂತ ತಪ್ಪಿದೆ. ಕೂಡಲೇ ಆಟಗಾರರು, ಸಿಬ್ಬಂದಿಗಳು ಹಾಗೂ ಪ್ರಯಾಣಿಕರಿಗೆ ಇಂಡಿಗೊ ವಿಮಾನಯಾನ ಸಂಸ್ಥೆ ಹೋಟೆಲ್‌ ವ್ಯವಸ್ಥೆ ಮಾಡಿಕೊಟ್ಟಿತು. ಮರುದಿನ ಕ್ರಿಕೆಟಿಗರು ಮತ್ತೂಂದು ವಿಮಾನದ ಮೂಲಕ ದೆಹಲಿಗೆ ಬಂದು ತಲುಪಿದರು.
ವಿಮಾನದಲ್ಲಿ ದಿಲ್ಲಿ ನಾಯಕ ರಿಷಭ್‌ ಪಂತ್‌, ಉನ್ಮುಕ್‌¤ ಚಾಂದ್‌, ಧೃವ್‌ ಶೋರೆ, ನಿತೀಶ್‌ ರಾಣಾ, ವಿಕಾಸ್‌ ಹಾಗೂ ಆಕಾಶ್‌ ಇದ್ದರು. ದೆಹಲಿ ಮಾಜಿ ನಾಯಕ ಗೌತಮ್‌ ಗಂಭೀರ್‌ ಅದಾಗಲೇ ಮತ್ತೂಂದು ವಿಮಾನದಲ್ಲಿ ದಿಲ್ಲಿಗೆ ತೆರಳಿದ್ದರು.

ಏನಿದು ಘಟನೆ?: ದಿಲ್ಲಿ ರಣಜಿ ತಂಡದ ಪ್ರಮುಖ ಆಟಗಾರ ಉನ್ಮುಕ್‌¤ ಚಾಂದ್‌ ಸೇರಿದಂತೆ ಇತರೆ ಆಟಗಾರರು, ತಂಡದ ಸಿಬ್ಬಂದಿ ಮಂಗಳವಾರ ರಾತ್ರಿ ಇಂಡಿಗೊ 867 ವಿಮಾನವೇರಿದ್ದರು. ಇನ್ನೇನು ವಿಮಾನ ಹಾರಾಟ ನಡೆಸಬೇಕಿತ್ತು. ಇದ್ದಕ್ಕಿದ್ದಂತೆ ಪೈಲೆಟ್‌ ವಿಮಾನವನ್ನು ನಿಲ್ಲಿಸಿದರು. ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿದ ವಿಚಾರ ತಿಳಿಯಿತು. ಬಳಿಕ ನಾವೆಲ್ಲ ಮತ್ತೆ ಇಂದೋರ್‌ ವಿಮಾನ ನಿಲ್ದಾಣಕ್ಕೆ ಬಂದೆವು. ಪರ್ಯಾಯವಾಗಿ ಇಂಡಿಗೊ ಹೋಟೆಲ್‌ ವ್ಯವಸ್ಥೆ ಮಾಡಿತು ಎಂದು ಉನ್ಮುಕ್‌¤ ಚಾಂದ್‌ ಟ್ವೀಟರ್‌ನಲ್ಲಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next