Advertisement

ಬೆಂಗ್ಳೂರಲ್ಲಿ ಮಲ್ಯ ಆಸ್ತಿ ಜಪ್ತಿಗೆ ಆದೇಶ

06:00 AM Oct 12, 2018 | |

ನವದೆಹಲಿ: ಉದ್ಯಮಿ ವಿಜಯ್‌ ಮಲ್ಯ ಅವರಿಂದ ವಿದೇಶಿ ವಿನಿಮಯ ನಿಯಂತ್ರಣ ಕಾಯ್ದೆ (ಫೆರಾ) ಉಲ್ಲಂಘನೆ ಆಗಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿರುವ ಅವರ ಆಸ್ತಿ  ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ದೆಹಲಿಯ ಕೋರ್ಟೊಂದು ಸೂಚಿಸಿದೆ. ಬೆಂಗಳೂರಿನಲ್ಲಿ ಮಲ್ಯಗೆ ಸೇರಿದ 159 ಸ್ಥಿರಾಸ್ತಿ ಪತ್ತೆ ಮಾಡಲಾಗಿದೆ. ಅವುಗಳಲ್ಲಿ ಕೆಲವನ್ನು ಇ.ಡಿ.ಯ ಮುಂಬೈ ವಿಭಾಗ ಜಪ್ತಿ ಮಾಡಿದೆ. ಕೆಲವು ಹರಾಜಿಗೆ ಸಿದ್ಧವಾಗಿವೆ. ಹೀಗಾಗಿ ಗೊಂದಲ ಉಂಟಾಗಿತ್ತು. ಇದೀಗ ಕೋರ್ಟ್‌ ಎಲ್ಲಾ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಸೂಚಿಸಿದೆ.

Advertisement

ಕೈಬಿಡುತ್ತಾ ಐಶಾರಾಮಿ ಬಂಗಲೆ?: ಸ್ವಿಜರ್ಲೆಂಡ್‌ನ‌ ಯುಬಿಎಸ್‌ ಗ್ರೂಪ್‌ನಿಂದ ಸುಮಾರು 199 ಕೋಟಿ ರೂ. ಸಾಲ ಪಡೆದಿರುವ ವಿಜಯ್‌ ಮಲ್ಯರಿಂದ ಸಾಲ ಮರುಪಾವತಿ ಯಾಗದ ಹಿನ್ನೆಲೆಯಲ್ಲಿ ಲಂಡನ್‌ನ ಬೇಕರ್‌ ಸ್ಟ್ರೀಟ್‌ ಸ್ಟೇಷನ್‌ನಲ್ಲಿರುವ ಮಲ್ಯ ಅವರ ಬಂಗಲೆಯನ್ನು ವಶಕ್ಕೆ ತೆಗೆದುಕೊಳ್ಳಲು ಯುಬಿಎಸ್‌ ಗ್ರೂಪ್‌ ಮುಂದಾಗಿದೆ. 
 

Advertisement

Udayavani is now on Telegram. Click here to join our channel and stay updated with the latest news.

Next