ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂ. ಅಕ್ರಮ ಹಣಕಾಸು ವರ್ಗಾವಣೆ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫೆರ್ನಾಂಡಿಸ್‌ಗೆ ವಿದೇಶಿ ಪ್ರಯಾಣ ಕೈಗೊಳ್ಳಲು ದೆಹಲಿ ಕೋರ್ಟೊಂದು ಮಂಗಳವಾರ ಸಮ್ಮತಿಸಿದೆ.
ಪ್ರಕರಣದ ತನಿಖೆ ನಡೆಯುತ್ತಿರುವ ಹಿನ್ನೆಲೆ ಜಾಕ್ವೆಲಿನ್ ವಿದೇಶಕ್ಕೆ ಪ್ರಯಾಣಿಸುವಂತಿಲ್ಲವೆಂದು ನಿರ್ಬಂಧ ಹೇರಲಾಗಿತ್ತು. ಆದರೆ ಐಐಎಫ್ಎ ಅವಾರ್ಡ್ ಸಮಾಂಭದಲ್ಲಿ ಭಾಗಿಯಾಗಬೇಕಿರುವ ಹಾಗೂ ಶೂಟಿಂಗ್ ಇರುವ ಹಿನ್ನೆಲೆ ನಟಿ ವಿದೇಶಿ ಪ್ರಯಾಣಕ್ಕೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಹಿನ್ನೆಲೆ ವಿಶೇಷ ನ್ಯಾಯಾಧೀಶರಾದ ಶೈಲೇಂದ್ರ ಮಲ್ಲಿಕ್ ಮೇ 25ರಿಂದ 27ರವರೆಗೆ ಅಬುಧಾಬಿಗೆ ಹಾಗೂ ಚಿತ್ರೀಕರಣ ನಿಮಿತ್ತ ಇಟಲಿಯ ಮಿಲಾನ್ ನಗರಕ್ಕೆ ಮೇ 28 ರಿಂದ ಜೂನ್ 12ರವರೆಗೆ ಪ್ರಯಾಣಿಸಲು ಅನುಮತಿಸಿದ್ದಾರೆ.