ಹೊಸದಿಲ್ಲಿ : ಮಾಜಿ ಶಿಕ್ಷಣ ಸಚಿವ ಮನೀಶ್ ಸಿಸೋಡಿಯಾ ಅವರ ಸ್ಥಿತಿಯನ್ನು ನೆನೆದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಕಣ್ಣೀರಿಟ್ಟ ಘಟನೆ ಬುಧವಾರ ನಡೆದಿದೆ.
ಶಿಕ್ಷಣ ಸಂಸ್ಥೆಯೊಂದರ ಉದ್ಘಾಟನಾ ಸಮಾರಂಭದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಸಿಸೋಡಿಯಾ ಅವರು ಮಾಡಿದ ಕಾರ್ಯಗಳನ್ನು ನೆನೆದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಭಾವುಕರಾದರು.
”ಬಿಜೆಪಿಯವರು ಸುಳ್ಳು ಕೇಸು ಹಾಕಿ ಜೈಲಿಗೆ ಹಾಕಿದ್ದಾರೆ. ಮನೀಶ್ ಜೀ ಉತ್ತಮ ಶಾಲೆಗಳನ್ನು ಕಟ್ಟದಿದ್ದರೆ ಅವರನ್ನು ಜೈಲಿಗೆ ಹಾಕುತ್ತಿರಲಿಲ್ಲ.ಅವರು ಶಿಕ್ಷಣ ಕ್ರಾಂತಿಯನ್ನು ಕೊನೆಗೊಳಿಸಲು ಬಯಸುತ್ತಾರೆ ಆದರೆ ನಾವು ಶಿಕ್ಷಣ ಕ್ರಾಂತಿಯನ್ನು ಕೊನೆಗೊಳಿಸಲು ಬಿಡುವುದಿಲ್ಲ.” ಎಂದರು.
Related Articles
”ನಾನು ಐಐಟಿ ಖರಗ್ಪುರದಲ್ಲಿ ಓದಿದ್ದೇನೆ, ನನ್ನ ಬೋಧನಾ ಶುಲ್ಕ 32 ರೂ. ಆಗಿತ್ತು. ನನ್ನನ್ನು ಇಂಜಿನಿಯರ್ ಮಾಡಲು ದೇಶವೇ ಹಣ ಖರ್ಚು ಮಾಡಿದೆ.ಇಂದು ಇದು ನನ್ನ ಕರ್ತವ್ಯವಾಗಿದ್ದು, ಪ್ರತಿ ಮಗುವಿಗೆ ಉತ್ತಮ ಶಿಕ್ಷಣ ನೀಡಲು ನಿರ್ಧರಿಸಿದ್ದೇನೆ.ನಾನು ಹಿಸಾರ್ನ ಅತ್ಯುತ್ತಮ ಶಾಲೆಯಲ್ಲಿ ಓದಿದೆ.ಬವಾನಾದ ಈ ಸರ್ಕಾರಿ ಶಾಲೆ ಆ ಶಾಲೆಗಿಂತ ಉತ್ತಮವಾಗಿದೆ” ಎಂದು ಹೇಳಿದರು.
”ಈಗ ದೆಹಲಿಯ ಗ್ರಾಮೀಣ ಪ್ರದೇಶದ ಮಕ್ಕಳು ಕೂಡ “ಸ್ಕೂಲ್ ಆಫ್ ಸ್ಪೆಶಲೈಸ್ಡ್ ಎಕ್ಸಲೆನ್ಸ್” ನಲ್ಲಿ ಅಧ್ಯಯನ ಮಾಡಲು ಅವಕಾಶವನ್ನು ಪಡೆಯುತ್ತಾರೆ. ಇಂಟರ್ನ್ಯಾಷನಲ್ ಬೋರ್ಡ್ ಆಫ್ ಎಜುಕೇಶನ್ IB ಸಿಲಬಸ್ ಲಭ್ಯವಿರುತ್ತದೆ. ಬವಾನಾ ಪ್ರದೇಶದ ಗ್ರಾಮವಾದ ದರಿಯಾಪುರದಲ್ಲಿ ಇಂದು ಈ ಅದ್ಭುತ ಶಾಲೆಯನ್ನು ಪ್ರಾರಂಭಿಸಲಾಗಿದೆ.ಭವ್ಯವಾದ ಕಟ್ಟಡ ಮತ್ತು ವಿಶ್ವ ದರ್ಜೆಯ ಶಿಕ್ಷಣ. ದೆಹಲಿಯ ಯಾವುದೇ ಪ್ರದೇಶದ ಮಕ್ಕಳಿಗೆ ಯಾವುದೇ ಸೌಲಭ್ಯಗಳ ಕೊರತೆಯನ್ನು ನಾವು ಮಾಡಿಕೊಡುವುದಿಲ್ಲ” ಎಂದರು.