Advertisement

Shocking; ಶಾಲೆಗೆ ಪಿಸ್ತೂಲ್ ಹಿಡಿದುಕೊಂಡು ಬಂದ 10 ವರ್ಷದ ವಿದ್ಯಾರ್ಥಿ!

07:12 PM Aug 25, 2024 | Team Udayavani |

ಹೊಸದಿಲ್ಲಿ: ನಜಾಫ್‌ಗಢದಲ್ಲಿ 10 ವರ್ಷದ ವಿದ್ಯಾರ್ಥಿಯ ಶಾಲಾ ಬ್ಯಾಗ್‌ನಿಂದ ಮ್ಯಾಗಜೀನ್ ಇಲ್ಲದ ಪಿಸ್ತೂಲ್ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.

Advertisement

ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಶನಿವಾರ ದೀಪಕ್ ವಿಹಾರ್ ಪ್ರದೇಶದ ಖಾಸಗಿ ಶಾಲೆಯ ವಿದ್ಯಾರ್ಥಿ ಪಿಸ್ತೂಲ್ ಅನ್ನು ಆಟಿಕೆ ಎಂದು ಭಾವಿಸಿ ಶಾಲೆಗೆ ತಂದಿದ್ದು ನಂತರ ನಜಾಫ್‌ಗಢ ಪೊಲೀಸ್ ಠಾಣೆಗೆ ಕರೆ ಮಾಡಲಾಗಿದೆ. ಪೊಲೀಸ್ ತಂಡವು 6 ನೇ ತರಗತಿಯ ವಿದ್ಯಾರ್ಥಿಯ ಬ್ಯಾಗ್‌ನಲ್ಲಿ ಆತನ ತಂದೆ ಪರವಾನಗಿ ಪಡೆದ ಪಿಸ್ತೂಲ್ ಅನ್ನು ಪತ್ತೆ ಹಚ್ಚಿದೆ ಎಂದು ತಿಳಿಸಿದ್ದಾರೆ.

ಶಾಲಾ ಆಡಳಿತ ಮಂಡಳಿಯಿಂದ ಕರೆಸಲ್ಪಟ್ಟ ಬಾಲಕನ ತಾಯಿ, ಆಕೆಯ ಪತಿ ಪರವಾನಗಿ ಪಡೆದ ಪಿಸ್ತೂಲ್ ಹೊಂದಿದ್ದಾನೆ ಎಂದು ಹೇಳಿದರು.

“ಕೆಲವು ತಿಂಗಳ ಹಿಂದೆ ತನ್ನ ಪತಿ ತೀರಿಕೊಂಡಿದ್ದಾರೆ, ಪಿಸ್ತೂಲ್ ಅನ್ನು ಪೊಲೀಸ್ ಠಾಣೆಯಲ್ಲಿ ಠೇವಣಿ ಇಡಲು ಹೊರಗೆ ಇಟ್ಟಿದ್ದೆ ಎಂದು ವಿದ್ಯಾರ್ಥಿಯ ತಾಯಿ ಹೇಳಿದ್ದಾರೆ.ಆಟಿಕೆ ಎಂದು ಭಾವಿಸಿ ತಂದಿರುವುದಾಗಿ ಬಾಲಕ ಪೊಲೀಸ್ ತಂಡಕ್ಕೆ ತಿಳಿಸಿದ್ದಾನೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಸ್ತೂಲಿನ ಪರವಾನಗಿ ಮಾನ್ಯವಾಗಿದೆ ಮತ್ತು ಈ ವಿಷಯದಲ್ಲಿ ಯಾವುದೇ ಕಾಗ್ನಿಸೇಬಲ್ ಅಪರಾಧವನ್ನು ಮಾಡಲಾಗಿಲ್ಲ. ಘಟನೆ ನಡೆದ ದಿನ ಪಿಸ್ತೂಲನ್ನು ಬಾಲಕನ ತಾಯಿ ಪೊಲೀಸ್ ಉಗ್ರಾಣದಲ್ಲಿ ಠೇವಣಿ ಇಟ್ಟಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next