Advertisement

ಕೇಜ್ರಿ ನಿವಾಸದ ಸಿಸಿಟಿವಿ ಚಿತ್ರಿಕೆ ತಿರುಚಲಾಗಿದೆ: ಪೊಲೀಸ್‌

02:57 PM Feb 26, 2018 | Team Udayavani |

ಹೊಸದಿಲ್ಲಿ : ದಿಲ್ಲಿ ಸರಕಾರದ ಮುಖ್ಯ ಕಾರ್ಯದರ್ಶಿ ಅಂಶು ಪ್ರಕಾಶ್‌ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕಳೆದ ಶುಕ್ರವಾರ ತಾವು ಕೇಜ್ರಿವಾಲ್‌ ನಿವಾಸದಿಂದ ವಶಪಡಿಸಿಕೊಂಡಿರುವ ಸಿಸಿಟಿವಿ ಚಿತ್ರಿಕೆಗಳನ್ನು ತಿರುಚಲಾಗಿದೆ ಎಂದು ದಿಲ್ಲಿ ಪೊಲೀಸರು ಹೇಳಿದ್ದಾರೆ. 

Advertisement

ಸಿಸಿಟಿವಿ ಚಿತ್ರಿಕೆಗಳನ್ನು ಪರೀಕ್ಷಿಸಲು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದೆಂದು ಪೊಲೀಸರು ಹೇಳಿದ್ದಾರೆ.

ಅಂಶು ಪ್ರಕಾಶ್‌ ಮತ್ತು ಆಪ್‌ ಶಾಸಕರ ಭೇಟಿಯು ಅರವಿಂದ ಕೇಜ್ರಿವಾಲ್‌ ಅವರ ಕ್ಯಾಂಪ್‌ ಆಫೀಸಲ್ಲಿ ನಡೆದಿಲ್ಲ; ಬದಲು ಅವರ ನಿವಾಸದ ಡ್ರಾಯಿಂಗ್‌ ರೂಮಲ್ಲೇ ನಡೆದಿತ್ತು. ಹಲ್ಲೆ ಪ್ರಕರಣದ ಸಿಸಿಟಿವಿ ಚಿತ್ರಿಕೆಗಳನ್ನು ಪರಿಶೀಲಿಸಿದಾಗ ಅದರಲ್ಲಿ ದಾಖಲಾಗಿರುವ ಸಮಯವು ಬೇರೆಯೇ ಆಗಿದ್ದು  ಇದು ಸಿಸಿಟಿವಿ ಚಿತ್ರಿಕೆಗಳನ್ನು ತಿರುಚಲಾಗಿರುವುನ್ನು ಪುಷ್ಟೀಕರಿಸುತ್ತದೆ ಎಂದು ದಿಲ್ಲಿಯ ಅಡಿಶನಲ್‌ ಡೆಪ್ಯುಟಿ ಪೊಲೀಸ್‌ ಕಮಿಶನರ್‌ ಹರೇಂದ್ರ ಸಿಂಗ್‌ ಹೇಳಿದ್ದಾರೆ.  

Advertisement

Udayavani is now on Telegram. Click here to join our channel and stay updated with the latest news.

Next