Advertisement

ಉತ್ತರ ಗೋವಾದ ಶ್ರೀರುದ್ರೇಶ್ವರ ದೇವಸ್ಥಾನಕ್ಕೆ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಭೇಟಿ

03:56 PM Sep 21, 2021 | Team Udayavani |

ಪಣಜಿ: ಗೋವಾಕ್ಕೆ ಆಗಮಿಸಿರುವ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ರವರು ಉತ್ತರ ಗೋವಾದ ಸಾಖಳಿಯ ಹರವಳೆಯ ಶ್ರೀರುದ್ರೇಶ್ವರ ದೇವಸ್ಥಾನಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ಕೇಜ್ರಿವಾಲ್ ರವರು ದೇವಸ್ಥಾನಕ್ಕೆ ಆಗಮಿಸುವ ಸಂದರ್ಭದಲ್ಲಿ ಪುಷ್ಪವೃಷ್ಠಿ ನಡೆಸಿ ಅವರನ್ನು ಸ್ವಾಗತಿಸಲಾಯಿತು. ಈ ಸಂದರ್ಭದಲ್ಲಿ ಆಮ್ ಆದ್ಮಿ ಪಕ್ಷದ ಗೋವಾ ಪ್ರಭಾರಿ ದುರ್ಗೇಶ್ ಫಾಟಕ್, ಅಂಕುಶ್ ನಾರಂಗ, ರಾಹುಲ್ ಮಾಂಮ್ರೆ, ಮತ್ತಿತರರು ಉಪಸ್ಥಿತರಿದ್ದರು.

ಗೋವಾಕ್ಕೆ ಆಗಮಿಸಿರುವ ಅರವಿಂದ ಕೇಜರಿವಾಲ್ ರವರು 2022 ರ ಫೆಬ್ರವರಿಯಲ್ಲಿ ನಡೆಯಲಿರುವ ಗೋವಾ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಪಕ್ಷದ ರಣನೀತಿ ರೂಪಿಸಲಿದ್ದಾರೆ. ಪಕ್ಷದ ರಾಜ್ಯ ಪ್ರಮುಖರು ಮತ್ತು ಕಾರ್ಯಕರ್ತರೊಂದಿಗೆ ಸಭೆ ನಡೆಸಲಿದ್ದಾರೆ ಎಂದು ಆಮ್ ಆದ್ಮಿ ಪಕ್ಷದ ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ : ನಾಲ್ಕು ದಿನದ ಹಿಂದೆ ಭದ್ರಾ ನದಿಗೆ ಹಾರಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತ ದೇಹ ಪತ್ತೆ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next