Advertisement
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಗಳಿಸಿದ್ದು 6 ವಿಕೆಟಿಗೆ 154 ರನ್ನುಗಳ ಸಾಮಾನ್ಯ ಮೊತ್ತ. ಜವಾಬಿತ್ತ ರಾಜಸ್ಥಾನ್ ಇನ್ನಷ್ಟು ಕಳಪೆ ಪ್ರದರ್ಶನ ನೀಡಿ 6 ವಿಕೆಟಿಗೆ ಕೇವಲ 121 ರನ್ ಮಾಡಿ 5ನೇ ಸೋಲನುಭವಿಸಿತು.
Related Articles
ಬಿಗ್ ಹಿಟ್ಟರ್‌ಗಳಾದ ಶಿಖರ್ ಧವನ್ (8) ಮತ್ತು ಪೃಥ್ವಿ ಶಾ (8) 21 ರನ್ ಆಗುವಷ್ಟರಲ್ಲಿ ನಿರ್ಗಮಿಸಿದ್ದರಿಂದ ಪವರ್ ಪ್ಲೇಯಲ್ಲಿ ಡೆಲ್ಲಿಗೆ ದೊಡ್ಡ ಮೊತ್ತ ಪೇರಿಸಲಾಗಲಲ್ಲ. ಕಾರ್ತಿಕ್ ತ್ಯಾಗಿ ತಮ್ಮ ಮೊದಲ ಎಸೆತದಲ್ಲೇ ಧವನ್‌ಗೆ ಪೆವಿಲಿಯನ್ ಹಾದಿ ತೋರಿಸಿದರು. ಶಾ ವಿಕೆಟ್ ಸಕಾರಿಯ ಪಾಲಾಯಿತು.
Advertisement
ಮಾಜಿ-ಹಾಲಿ ನಾಯಕರಾದ ಶ್ರೇಯಸ್ ಅಯ್ಯರ್-ರಿಷಭ್ ಪಂತ್ ಜತೆಗೂಡಿದ ಬಳಿಕ ಡೆಲ್ಲಿ ರನ್‌ರೇಟ್ ಏರತೊಡಗಿತು. 7.3 ಓವರ್ ನಿಭಾಯಿಸಿದ ಈ ಜೋಡಿ 3ನೇ ವಿಕೆಟಿಗೆ 62 ರನ್ ಪೇರಿಸಿತು. 32 ಎಸೆತಗಳಿಂದ 43 ರನ್ ಬಾರಿಸಿದ ಆಯ್ಯರ್ ಡೆಲ್ಲಿ ಸರದಿಯ ಟಾಪ್ ಸ್ಕೋರರ್ (1 ಬೌಂಡರಿ, 3 ಸಿಕ್ಸರ್). ತೇವಟಿಯಾ ಎಸೆತವನ್ನು ಮುನ್ನುಗ್ಗಿ ಬಾರಿಸುವ ಅವಸರದಲ್ಲಿ ಅಯ್ಯರ್ ಸ್ಟಂಪ್ಡ್ ಆದರು. ಪಂತ್ ಗಳಿಕೆ ಎಸೆತಕ್ಕೊಂದರಂತೆ 24 ರನ್ (2 ಫೋರ್).
ಶಿಮ್ರನ್ ಹೆಟ್‌ಮೈರ್ ಬ್ಯಾಟಿಂಗ್ ಎಂದಿನ ಹೊಡಿಬಡಿ ಶೈಲಿಯಲ್ಲಿತ್ತು. 16 ಎಸೆತಗಳಿಂದ 28 ರನ್ ಬಾರಿಸಿದರು. ಸಿಡಿಸಿದ್ದು 5 ಬೌಂಡರಿ. ಇವರನ್ನು ಮುಸ್ತಫಿಜುರ್ 17ನೇ ಓವರ್‌ನಲ್ಲಿ ಕೆಡವಿ ರಾಜಸ್ಥಾನಕ್ಕೆ ಮೇಲುಗೈ ಒದಗಿಸಿದರು. ಇದಕ್ಕೂ ಮುನ್ನ ಮುಸ್ತಫಿಜುರ್ ಡೆಲ್ಲಿ ಕಪ್ತಾನನನ್ನೂ ಕ್ಲೀನ್‌ಬೌಲ್ಡ್ ಮಾಡಿದ್ದರು. ಪಂತ್-ಹೈಟ್‌ಮೈರ್ ಇನ್ನಷ್ಟು ಹೊತ್ತು ಕ್ರೀಸಿನಲ್ಲಿದ್ದರೆ ಡೆಲ್ಲಿ 175ರ ಗಡಿ ದಾಟುವ ಎಲ್ಲ ಸಾಧ್ಯತೆ ಇತ್ತು.
ರಾಜಸ್ಥಾನ್ ಪರ ಮುಸ್ತಫಿಜುರ್ 22ಕ್ಕೆ 2, ಸಕಾರಿಯ 33ಕ್ಕೆ 2 ವಿಕೆಟ್ ಉರುಳಿಸಿದರು.
ಸ್ಕೋರ್ ಪಟ್ಟಿಡೆಲ್ಲಿ ಕ್ಯಾಪಿಟಲ್ಸ್
ಪೃಥ್ವಿ ಶಾ ಸಿ ಲಿವಿಂಗ್‌ಸ್ಟೋನ್ ಬಿ ಸಕಾರಿಯ 10
ಶಿಖರ್ ಧವನ್ ಬಿ ಕಾರ್ತಿಕ್ ತ್ಯಾಗಿ 8
ಅಯ್ಯರ್ ಸ್ಟಂಪ್ಡ್ ಸ್ಯಾಮ್ಸನ್ ಬಿ ತೇವಟಿಯಾ 43
ರಿಷಭ್ ಪಂತ್ ಬಿ ಮುಸ್ತಫಿಜುರ್ 24
ಹೆಟ್‌ಮೈರ್ ಸಿ ಸಕಾರಿಯ ಬಿ ಮುಸ್ತಫಿಜುರ್ 28
ಲಲಿತ್ ಯಾದವ್ ಔಟಾಗದೆ 14
ಅಕ್ಷರ್ ಪಟೇಲ್ ಸಿ ಮಿಲ್ಲರ್ ಬಿ ಸಕಾರಿಯ 12 ಆರ್. ಅಶ್ವಿನ್ ಔಟಾಗದೆ 6
ಇತರ 9
ಒಟ್ಟು(6 ವಿಕೆಟಿಗೆ) 154
ವಿಕೆಟ್ ಪತನ: 1-18, 2-21, 3-83, 4-43, 5-121, 6-142. ಬೌಲಿಂಗ್;
ಮುಸ್ತಫಿಜುರ್ ರೆಹಮಾನ್ 4-0-22-2
ಮಹಿಪಾಲ್ ಲೊನ್ರೋರ್ 1-0-5-0
ಚೇತನ್ ಸಕಾರಿಯ 4-0-33-2
ಕಾರ್ತಿಕ್ ತ್ಯಾಗಿ 4-0-40-1
ತಬ್ರೇಜ್ ಶಂಸಿ 4-0-34-0
ರಾಹುಲ್ ತೇವಟಿಯಾ 3-0-17-1 ರಾಜಸ್ಥಾನ್ ರಾಯಲ್ಸ್
ಲಿವಿಂಗ್‌ಸ್ಟೋನ್ ಸಿ ಪಂತ್ ಬಿ ಆವೇಶ್ 1
ಯಶಸ್ವಿ ಜೈಸ್ವಾಲ್ ಸಿ ಪಂತ್ ಬಿ ನೋರ್ಜೆ 5
ಸಂಜು ಸ್ಯಾಮ್ಸನ್ ಔಟಾಗದೆ 70
ಡೇವಿಡ್ ಮಿಲ್ಲರ್ ಸ್ಟಂಪ್ಡ್ ಪಂತ್ ಬಿ ಅಶ್ವಿನ್ 7
ಲೊನ್ರೋರ್ ಸಿ ಅವೇಶ್ ಬಿ ರಬಾಡ 19
ರಿಯಾನ್ ಪರಾಗ್ ಬಿ ಅಕ್ಷರ್ 2
ತೇವಟಿಯಾ ಸಿ ಹೆಟ್‌ಮೈರ್ ಬಿ ನೋರ್ಜೆ 9
ತಬ್ರೇಜ್ ಶಂಸಿ ಔಟಾಗದೆ 2
ಇತರ 6
ಒಟ್ಟು(6 ವಿಕೆಟಿಗೆ) 121
ವಿಕೆಟ್ ಪತನ: 1-6, 2-6, 3-17, 4-48, 5-55, 6-99. ಬೌಲಿಂಗ್;
ಆವೇಶ್ ಖಾನ್ 4-0-29-1
ಅನ್ರಿಚ್ ನೋರ್ಜೆ 4-0-18-2
ಆರ್. ಅಶ್ವಿನ್ 4-0-20-1
ಕಾಗಿಸೊ ರಬಾಡ 4-0-26-1
ಅಕ್ಷರ್ ಪಟೇಲ್ 4-0-27-1 ಪಂದ್ಯಶ್ರೇಷ್ಠ: ಶ್ರೇಯಸ್ ಅಯ್ಯರ್