Advertisement

ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾಗೆ ಜ್ವರ; ಆಸ್ಪತ್ರೆಗೆ ದಾಖಲು

10:49 PM May 08, 2022 | Team Udayavani |

ಮುಂಬಯಿ: ಡೆಲ್ಲಿ ಕ್ಯಾಪಿಟಲ್ಸ್‌ ತಂಡದ ಆರಂಭಿಕ ಆಟಗಾರ ಪೃಥ್ವಿ ಶಾ ಅವರು ಭಾರೀ ಜ್ವರದ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರಿಗೆ ಕೋವಿಡ್‌ ಪರೀಕ್ಷೆ ನಡೆಸಲಾಗಿದ್ದು ನೆಗೆಟಿವ್‌ ಬಂದಿದೆ.

Advertisement

ಶಾ ಅವರು ಡೆಲ್ಲಿ ತಂಡದ ಈ ಹಿಂದಿನ ಪಂದ್ಯದಲ್ಲೂ ಆಡಿಲ್ಲ . ಶಾ ಅವರು ಆಸ್ಪತ್ರೆಯಲ್ಲಿ ಚೇತರಿಸಿ ಕೊಳ್ಳುತ್ತಿದ್ದಾರೆ.

ಐಸೊಲೇಶನ್‌ನಲ್ಲಿ ಆಟಗಾರರು
ಈ ಮೊದಲು ತಂಡದ ನೆಟ್‌ ಬೌಲರ್‌ ಒಬ್ಬರಿಗೆ ಪಾಸಿಟಿವ್‌ ಬಂದ ಕಾರಣ ಡೆಲ್ಲಿ ತಂಡದ ಆಟಗಾರರನ್ನು ಐಸೊಲೇಶನ್‌ನಲ್ಲಿ ಇಡಲಾಗಿತ್ತು. ಬೆಳಗ್ಗೆ ನಡೆಸಲಾದ ಪರೀಕ್ಷೆಯಲ್ಲಿ ಓರ್ವ ನೆಟ್‌ ಬೌಲರ್‌ಗೆ ಪಾಸಿಟಿವ್‌ ಬಂದಿತ್ತು. ಈ ಹಿನ್ನೆಲೆಯಲ್ಲಿ ಆಟಗಾರರನ್ನು ಹೊಟೇಲ್‌ ರೂಂನಲ್ಲಿ ಇರುವಂತೆ ಕೇಳಿಕೊಳ್ಳಲಾಯಿತು
ಎಂದು ಐಪಿಎಲ್‌ ಮೂಲಗಳು ಹೇಳಿವೆ.

ಈ ಐಪಿಎಲ್‌ ವೇಳೆ ಡೆಲ್ಲಿ ತಂಡವು ಎರಡನೇ ಬಾರಿ ಐಸೊಲೇಶನ್‌ನಲ್ಲಿ ಇರುವಂತಾಗಿದೆ. ಈ ಮೊದಲು ಫ್ರಾಂಚೈಸಿಯ ಆರು ಸದಸ್ಯರಿಗೆ ಪಾಸಿಟಿವ್‌ ಬಂದ ವೇಳೆ ತಂಡವನ್ನು ಐಸೊಲೇಶನ್‌ನಲ್ಲಿ ಇಡಲಾಗಿತ್ತು.

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next