Advertisement
ಇಷ್ಟರವರೆಗಿನ ಪಂದ್ಯಗಳಲ್ಲಿ ಡೆಲ್ಲಿಯ ನಿರ್ವಹಣೆ ಸ್ಥಿರವಾಗಿರಲಿಲ್ಲ. ಆಡಿದ 11 ಪಂದ್ಯಗಳಲ್ಲಿ ಐದರಲ್ಲಿ ಗೆದ್ದಿರುವ ಡೆಲ್ಲಿ 10 ಅಂಕ ಗಳೊಂದಿಗೆ ಆರನೇ ಸ್ಥಾನದಲ್ಲಿದೆ. ಇನ್ನುಳಿದ ಮೂರು ಪಂದ್ಯಗಳಲ್ಲಿ ಗೆದ್ದರೆ ಮಾತ್ರ ಪ್ಲೇ ಆಫ್ಗೆ ತೇರ್ಗಡೆಯಾಗುವ ಅವಕಾಶವಿದೆ. ಸದ್ಯ 16 ಅಂಕ ಹೊಂದಿರುವ ಕೆಕೆಆರ್ ಮತ್ತು ರಾಜಸ್ಥಾನ್ ಪ್ಲೇ ಆಫ್ಗೆ ತೇರ್ಗಡೆಯಾಗುವುದು ಬಹುತೇಕ ಖಚಿತವಾಗಿದೆ. ಇನ್ನು ಳಿದ ಎರಡು ಸ್ಥಾನಗಳಿಗಾಗಿ ಸದ್ಯ 12 ಅಂಕ ಹೊಂದಿರುವ ಚೆನ್ನೈ, ಹೈದರಾಬಾದ್, ಲಕ್ನೋ ತೀವ್ರ ಪೈಪೋಟಿ ನಡೆಸುವ ಸಾಧ್ಯತೆ ಯಿದೆ. ಇದರ ನಡುವೆ ಡೆಲ್ಲಿ ಮತ್ತು ಆರ್‌ಸಿಬಿ ಕೂಡ ಪ್ಲೇ ಆಫ್ಗೆ ತೇರ್ಗಡೆಯಾಗುವ ನಿರೀಕ್ಷೆ ಇಟ್ಟು ಕೊಂಡಿದೆ. ಹೀಗಾಗಿ ಮುಂದಿನ ಎಲ್ಲ ಪಂದ್ಯಗಳು ತೀವ್ರ ಪೈಪೋಟಿಯಿಂದ ಸಾಗುವ ಸಾಧ್ಯತೆಯಿದೆ.
ಈ ಪಂದ್ಯದಲ್ಲಿ ರಾಜಸ್ಥಾನ್ ತಂಡದ ನಾಗಲೋಟಕ್ಕೆ ಕಡಿವಾಣ ಹಾಕಬೇಕಾದರೆ ಡೆಲ್ಲಿ ತಂಡ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಶ್ರೇಷ್ಠ ನಿರ್ವಹಣೆ ನೀಡುವುದು ಅತ್ಯಗತ್ಯವಾಗಿದೆ. ಉತ್ತಮ ಫಾರ್ಮ್ನಲ್ಲಿರುವ ರಿಷಭ್ ಪಂತ್, ಆಸ್ಟ್ರೇಲಿಯದ ಸ್ಫೋಟಕ ಆಟಗಾರ ಜೇಕ್ ಫ್ರೆàಸರ್ ಮೆಕ್‌ಗರ್ಕ್, ಡೇವಿಡ್ ವಾರ್ನರ್, ಶೈ ಹೋಪ್, ಪೃಥ್ವಿ ಶಾ ಮತ್ತೆ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಬೇಕಾಗಿದೆ. ಬೌಲರ್‌ಗಳು ಎದುರಾಳಿ ತಂಡದ ಯಶಸ್ವಿ ಜೈಸ್ವಾಲ್, ಸ್ಯಾಮ್ಸನ್, ರಿಯಾನ್ ಪರಾಗ್ ಅವರ ಬಿರುಸಿನ ಆಟಕ್ಕೆ ಕಡಿವಾಣ ಹಾಕಲು ಯೋಜನೆ ರೂಪಿಸಬೇಕಾಗಿದೆ. ಅಕ್ಷರ್ ಪಟೇಲ್ ಅವರನ್ನು ಹೊರತುಪಡಿಸಿ ಡೆಲ್ಲಿಯ ಇನ್ನುಳಿದ ಬೌಲರ್‌ಗಳು ಪರಿಣಾಮಕಾರಿ ದಾಳಿ ಸಂಘಟಿಸಲು ವಿಫಲರಾಗಿದ್ದಾರೆ. ಖಲೀಲ್, ಮುಕೇಶ್ ಕಮಾರ್ ಇನ್ನಷ್ಟು ಸ್ಥಿರ ನಿರ್ವಹಣೆ ನೀಡಲು ಪ್ರಯತ್ನಿಸಬೇಕಾಗಿದೆ. ರಾಜಸ್ಥಾನ್ ಬಲಿಷ್ಠ
ರಾಜಸ್ಥಾನ್ ರಾಯಲ್ಸ್ ಬ್ಯಾಟಿಂಗ್ ಮತ್ತು ಬೌಲಿಂಗ್‌ನಲ್ಲಿ ಬಲಿಷ್ಠವಾಗಿದೆ. ನಾಯಕ ಸಂಜು ಸ್ಯಾಮ್ಸನ್, ಬಟ್ಲರ್, ಜೈಸ್ವಾಲ್, ರಿಯಾನ್ ಪರಾಗ್ ಅದ್ಭುತ ನಿರ್ವಹಣೆ ನೀಡುತ್ತ ಬಂದಿದ್ದಾರೆ. ತಂಡದ ಬೌಲಿಂಗ್ ಕೂಡ ತೀಕ್ಷ್ಣವಾಗಿದೆ. ಸಂದೀಪ್ ಶರ್ಮ, ಯಜುವೇಂದ್ರ ಚಹಲ್, ಆವೇಶ್ ಖಾನ್, ಆರ್. ಅಶ್ವಿನ್ ಅಮೋಘ ದಾಳಿ ಸಂಘಟಿಸಿ ಎದು ರಾಳಿಗೆ ರನ್‌ವೇಗಕ್ಕೆ ಕಡಿವಾಣ ಹಾಕಿದ್ದಾರೆ.
Related Articles
Advertisement