Advertisement

ನವದೆಹಲಿ ನಿವಾಸಿ ವಿರಾಟ್‌ ಕೊಹ್ಲಿ ಉ.ಪ್ರದೇಶ ಮತದಾರನಾಗಿದ್ದು ಹೇಗೆ?

08:15 AM Mar 10, 2018 | |

ಲಕ್ನೋ: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಈಗ ಬರೀ ಭಾರತವಲ್ಲ ವಿಶ್ವದ ಹಲವು ರಾಷ್ಟ್ರಗಳಲ್ಲಿ ಜನಪ್ರಿಯ ವ್ಯಕ್ತಿ. ಪಾಕಿಸ್ತಾನ, ಆಸ್ಟ್ರೇಲಿಯಾ, ಇಂಗ್ಲೆಂಡ್‌ನ‌ಲ್ಲೂ ಅಸಂಖ್ಯಾತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಅಂತಹ ಕೊಹ್ಲಿಯ ಮತದಾರ ಪತ್ರವೇ ವ್ಯತ್ಯಾಸವಾಗುತ್ತದೆಂದರೆ? ಹೌದು, ಇಂತಹದೊಂದು ವಿಚಿತ್ರ, ಬೇಜವಾಬ್ದಾರಿ ಘಟನೆ ಸಂಭವಿಸಿದೆ. ವಾಸ್ತವವಾಗಿ ಕೊಹ್ಲಿ ದೆಹಲಿ ನಿವಾಸಿ. ಅವರೀಗ ದಿಢೀರೆಂದು ಉತ್ತರಪ್ರದೇಶದ ಗೋರಖಪುರದ ಸಹಜನ್ವಾ
ವಿಧಾನಸಭಾ ಕ್ಷೇತ್ರದ ಮತದಾರರಾಗಿದ್ದಾರೆ! 

Advertisement

ಇದು ಗೊತ್ತಾಗಲು ಕಾರಣ ಉತ್ತರಪ್ರದೇಶ ಎರಡು ಲೋಕಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆ. ಉತ್ತರಪ್ರದೇಶದ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾದ ಕಾರಣ ಯೋಗಿ ಆದಿತ್ಯನಾಥ್‌ ಮತ್ತು ಕೇಶವ ಪ್ರಸಾದ್‌ ಮೌರ್ಯ ತಮ್ಮ ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರು. ಮಾ.11ರಂದು ಚುನಾವಣೆ ನಡೆಯಲಿದ್ದರೆ ಮಾ.14ಕ್ಕೆ ಮತಎಣಿಕೆ ನಡೆಯಲಿದೆ. ಆ ಕಾರಣಕ್ಕೆ ಸಹಜನ್ವಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಪರಿಶೀಲಿಸುತ್ತಿದ್ದಾಗ ಬೂತ್‌ ಅಧಿಕಾರಿ ಸುನೀತಾ ಚೌಬೆಗೆ 5 ದಿನಗಳ ಹಿಂದೆ ವಿಷಯ ಗೊತ್ತಾಗಿದೆ. ಅಲ್ಲಿ ಕೊಹ್ಲಿಯ ಮತದಾರ ಸಂಖ್ಯೆ 822 ಎಂದು ಚಿತ್ರ ಸಹಿತ ಲಗತ್ತಾಗಿದೆ! ಕೊಹ್ಲಿಯ ಹೆಸರು ಇಲ್ಲಿ ಹೇಗೆ ಬರಲು ಸಾಧ್ಯ ಎಂದು ಕೂಲಂಕುಶವಾಗಿ ಪರಿಶೀಲಿಸಿದ ನಂತರ ಇದು ಎಡವಟ್ಟು ಎಂದು ಗೊತ್ತಾಗಿದೆ. ಆದ್ದರಿಂದ
ಪ್ರಕರಣದ ತನಿಖೆಗೆ ಆದೇಶಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next