ಹೊಸದಿಲ್ಲಿ: ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಸರಕಾರದ ವಿರುದ್ಧ ದಿಲ್ಲಿಯಲ್ಲಿ ಬೃಹತ್ ಆಂದೋಲನ ಹಮ್ಮಿಕೊಂಡಿದ್ದು, ಇದರಲ್ಲಿ ಪಾಲ್ಗೊಳ್ಳುವಂತೆ ಸಾಮಾಜಿಕ ಹೋರಾಟಗಾರ, ಗಾಂಧಿವಾದಿ ಅಣ್ಣಾ ಹಜಾರೆಗೆ ಬಿಜೆಪಿ ಆಹ್ವಾನ ನೀಡಿದೆ. ಅಣ್ಣಾ ಹಜಾರೆಗೆ ದೆಹಲಿ ಬಿಜೆಪಿ ಘಟಕದ ಅಧ್ಯಕ್ಷ ಆದೇಶ ಗುಪ್ತಾ ಪತ್ರ ಬರೆದಿದ್ದು, “ಸಾಮಾಜಿಕ, ರಾಜಕೀಯ ಹಾಗೂ ಆರ್ಥಿಕ ಭ್ರಷ್ಟಾಚಾರಕ್ಕೆ ಮತ್ತೂಂದು ಹೆಸರು ಆಮ್ ಆದ್ಮಿ ಪಾರ್ಟಿ. ಪಾರದರ್ಶಕ ಹಾಗೂ ನ್ಯಾಯಸಮ್ಮತ ರಾಜಕಾರಣ ಮಾಡುವುದಾಗಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಈ ಪಕ್ಷವು ರಾಜಕೀಯ ಪರಿಶುದ್ಧತೆಯನ್ನು ಹಾಳು ಮಾಡಿದೆ. ಆಮ್ ಆದ್ಮಿ ನಡೆಸಿದ ಕೋಮುಗಲಭೆಯಿಂದ ದಿಲ್ಲಿಯ ಜನರು ರೋಸಿ ಹೋಗಿದ್ದಾರೆ. ಈ ಹಿನ್ನೆಲೆಯಲ್ಲಿ ಆಪ್ ವಿರುದ್ದ ಬಿಜೆಪಿ ಹಮ್ಮಿಕೊಂಡಿರುವ ಬೃಹತ್ ಆಂದೋಲನದಲ್ಲಿ ನೀವು ಪಾಲ್ಗೊಳ್ಳಿ’ ಎಂದು ಮನವಿ ಮಾಡಲಾಗಿದೆ. ಬಿಜೆಪಿ ಬರೆದಿರುವ ಪತ್ರಕ್ಕೆ ಅಣ್ಣಾ ಹಜಾರೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.