Advertisement

ದೆಹಲಿ ಶಾಸಕರ ವೇತನ ಶೇ.66ಕ್ಕೆ ಏರಿಕೆ: ವಿಧಾನಸಭೆಯಲ್ಲಿ ವಿಧೇಯಕ ಅಂಗೀಕಾರ

08:24 PM Jul 04, 2022 | Team Udayavani |

ನವದೆಹಲಿ: ಶಾಸಕರ ವೇತನ ಹೆಚ್ಚಿಸುವ ವಿಚಾರ ಕುರಿತ ವಿಧೇಯಕಕ್ಕೆ ದೆಹಲಿ ವಿಧಾನಸಭೆಯಲ್ಲಿ ಅಂಗೀಕಾರ ದೊರೆತಿದೆ.

Advertisement

ಅದರ ಅನ್ವಯ ದೆಹಲಿಯ ಶಾಸಕರ ವೇತನ ಮತ್ತು ಇತರೆ ಭತ್ಯೆಗಳು ಶೇ.66ರಷ್ಟು ಹೆಚ್ಚಳವಾಗಲಿದೆ.

ಈ ಉದ್ದೇಶಕ್ಕಾಗಿ ಐದು ಭಿನ್ನ ವಿಧೇಯಕಗಳನ್ನು ಮಂಡಿಸಲಾಗಿತ್ತು.

ಸಚಿವರ ವೇತನ, ಶಾಸಕರು, ಮುಖ್ಯ ಸಚೇತಕರು, ಸ್ಪೀಕರ್‌, ಡೆಪ್ಯುಟಿ ಸ್ಪೀಕರ್‌, ಪ್ರತಿಪಕ್ಷ ನಾಯಕರ ವೇತನ ಪರಿಷ್ಕರಣೆ ಬಗ್ಗೆ ವಿಧೇಯಕಗಳನ್ನು ಮಂಡಿಸಿ ಅಂಗೀಕರಿಸಲಾಗಿದೆ.

ಬಿಜೆಪಿ ಶಾಸಕ ಮತ್ತು ಪ್ರತಿಪಕ್ಷ ನಾಯಕ ರಾಮ್‌ವೀರ್‌ ಸಿಂಗ್‌ ಬಿಧೂರಿ ಕೂಡ ವಿಧೇಯಕಗಳಿಗೆ ಬೆಂಬಲ ವ್ಯಕ್ತಪಡಿಸಿ, ಅದು ಅಂಗೀಕಾರವಾಗುವಂತೆ ಮತ ಚಲಾಯಿಸಿದ್ದಾರೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next