Advertisement

ಅವ್ಯವಸ್ಥೆಯ ಕುರಿತು ದೂರು : ದೆಹಲಿ ವಿಮಾನ ನಿಲ್ದಾಣದಲ್ಲಿ 20 ಪರೀಕ್ಷಾ ಕೌಂಟರ್‌

06:53 PM Dec 04, 2021 | Team Udayavani |

ನವದೆಹಲಿ : ಹೊಸ ಪ್ರಯಾಣ ಮಾರ್ಗಸೂಚಿಗಳ ಅನುಷ್ಠಾನದ ನಂತರ ಟರ್ಮಿನಲ್‌ನಲ್ಲಿ ಅವ್ಯವಸ್ಥೆ ಮತ್ತು ಜನಸಂದಣಿಯ ಕುರಿತು ಅನೇಕ ವಿಮಾನ ಪ್ರಯಾಣಿಕರು ದೂರಿದ ನಂತರ ದೆಹಲಿ ವಿಮಾನ ನಿಲ್ದಾಣದಲ್ಲಿ 20 ಕೋವಿಡ್ ಪರೀಕ್ಷಾ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.

Advertisement

ಒಮಿಕ್ರಾನ್ ಹಬ್ಬುತ್ತಿರುವ “ ಅಪಾಯಕಾರಿ ಎನಿಸಿರುವ” ದೇಶಗಳಿಂದ ಆಗಮಿಸುವ ಪ್ರಯಾಣಿಕರ ಕಡ್ಡಾಯ ಕೋವಿಡ್-19 ಪರೀಕ್ಷೆಯನ್ನು ಮೊದಲೇ ಕಾಯ್ದಿರಿಸಿದ ಪ್ರಯಾಣಿಕರಿಗಾಗಿ 20 ಮೀಸಲಾದ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ ಎಂದು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ದೆಹಲಿ ವಿಮಾನ ನಿಲ್ದಾಣದಲ್ಲಿ ಅವ್ಯವಸ್ಥೆಯಾಗದಂತೆ ನೋಡಿಕೊಳ್ಳಲು ಈ ಕೌಂಟರ್‌ಗಳನ್ನು ಸ್ಥಾಪಿಸಲಾಗಿದೆ.

ಈ ವಾರದ ಆರಂಭದಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿದ ಹೊಸ ಮಾರ್ಗಸೂಚಿಗಳ ಪ್ರಕಾರ, “ಅಪಾಯಕಾರಿ ಎನಿಸಿಕೊಂಡಿರುವ ದೇಶಗಳಿಂದ ಬರುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಆರ್ ಟಿಪಿಸಿಆರ್ ಪರೀಕ್ಷೆಗೆ ಒಳಗಾಗಬೇಕಾಗುತ್ತದೆ ಮತ್ತು ಇತರ ದೇಶಗಳಿಂದ ಬರುವ ಶೇಕಡಾ ಐದು ಪ್ರಯಾಣಿಕರು ಸಹ ರಾಂಡಮ್ ಆಧಾರದ ಮೇಲೆ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next