Advertisement

ದೆಹಲಿ ಏರ್‌ಪೋರ್ಟ್‌ನಲ್ಲಿ 5ಜಿ ಸೇವೆ?

11:37 AM Sep 30, 2022 | Team Udayavani |

ನವದೆಹಲಿ: ಅ.1ರಂದು ದೇಶದಲ್ಲಿ 5ಜಿ ಸೇವೆಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡುತ್ತಿರುವ ನಡುವೆಯೇ ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್‌ 3ರಲ್ಲಿ ಪ್ರಯಾಣಿಕರು 5ಜಿ ಸೌಲಭ್ಯ ಪಡೆಯಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದೆ.

Advertisement

ಈ ಮೂಲಕ 5ಜಿ ಸೇವೆಗಳು ಲಭ್ಯವಿರುದ ದೇಶದ ಮೊದಲ ವಿಮಾನ ನಿಲ್ದಾಣದ ಎಂಬ ಖ್ಯಾತಿಗೆ ದೆಹಲಿ ವಿಮಾನ ನಿಲ್ದಾಣ ಪಾತ್ರವಾಗಿದೆ. “ದೇಶದಲ್ಲಿ 5ಜಿ ಸೇವೆಗಳು ಆರಂಭವಾಗುತ್ತಿದ್ದಂತೆ 5ಜಿ ಮೊಬೈಲ್‌ ಸೆಟ್‌ ಹೊಂದಿರುವ ಯಾರು ಬೇಕಾದರು ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್‌ 3ರಲ್ಲಿ ಅತ್ಯಂತ ವೇಗದ ನೆಟ್‌ವರ್ಕ್‌ ಸೌಲಭ್ಯ ಹೊಂದಬಹುದಾಗಿದೆ,’ ಎಂದು ದೆಹಲಿ ವಿಮಾನ ನಿಲ್ದಾಣದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next