ಹೊಸದಿಲ್ಲಿ: ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆ ಒಡ್ಡುತ್ತಿರುವ ಪ್ರಕರಣಗಳು 275ಕ್ಕೆ ಏರಿದ ಬೆನ್ನಲ್ಲೇ ವದಂತಿಗಳು ಹಬ್ಬ ದಂತೆ ತಡೆ ಯುವ ನಿಟ್ಟಿ ನಲ್ಲಿ ಸಾಮಾಜಿಕ ಜಾಲತಾಣಗಳ ಮೇಲೆ ನಿಯಂತ್ರಣವನ್ನು ಬಿಗಿಗೊಳಿಸಲು ಕೇಂದ್ರ ಸರಕಾರ ಮುಂದಾ ಗಿದೆ. ಹುಸಿ ಬಾಂಬ್ ಬೆದರಿಕೆ ಸಂಬಂಧಿ ಪೋಸ್ಟ್‌ಗಳನ್ನು ನಿಗದಿತ ಕಾಲ ಮಿತಿಯೊಳಗೆ ತೆಗೆದುಹಾಕುವಂತೆ ಸಾಮಾಜಿಕ ಜಾಲತಾಣ ಗಳಿಗೆ ಸರಕಾರ ತಾಕೀತು ಮಾಡಿದೆ.
ಈ ಸಂಬಂಧ ಶನಿವಾರ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯವು ಸಾಮಾಜಿಕ ಜಾಲತಾಣಗಳಿಗೆ ಸೂಚನೆ ನೀಡಿದೆ. ಆ ಪ್ರಕಾರ ತನ್ನ ಬಳಕೆದಾರರು ಯಾವುದೇ ಹುಸಿ ಬೆದರಿಕೆ ಸಂಬಂಧಿ ಪೋಸ್ಟ್‌ಗಳನ್ನು ಮಾಡದಂತೆ ಜಾಲತಾಣ ಸಂಸ್ಥೆಗಳು ಎಚ್ಚರ ವಹಿಸಬೇಕಿದೆ. ಒಂದು ವೇಳೆ ಪೋಸ್ಟ್ ಮಾಡಿದರೂ ಅವುಗಳನ್ನು ಕೂಡಲೇ ಅಳಿಸಿ, 72 ತಾಸುಗಳ ಒಳಗೆ ಆ ಪೋಸ್ಟ್‌ಗೆ ಸಂಬಂಧಿಸಿದ ಎಲ್ಲ ಮಾಹಿತಿ ಗಳನ್ನು ಸರಕಾರದ ತನಿಖಾ ಸಂಸ್ಥೆಗಳಿಗೆ ಒದಗಿಸಬೇಕಿದೆ.
ಜಾಲತಾಣ ಸಂಸ್ಥೆಗಳು ಈ ನಿಯಮಗಳನ್ನು ಅನುಸರಿಸದೆ ಇದ್ದಲ್ಲಿ ಐಟಿ ಕಾಯ್ದೆಯ ಸೆಕ್ಷನ್ 79 ಹಾಗೂ ಬಿಎನ್‌ಎಸ್ ಅನ್ವಯ ಜಾಲತಾಣ ಸಂಸ್ಥೆಗಳ ವಿರುದ್ಧ ಕ್ರಮ ಜರುಗಿಸುವುದಾಗಿ ಎಚ್ಚರಿಸಿದೆ. ಐಟಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸಂಕೇತ್ ಎಸ್ ಬೋಂಡ್ವೇ ಮತ್ತು ವಿಮಾನಯಾನ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಟ್ವೀಟರ್, ಫೇಸ್‌ಬುಕ್ ಮತ್ತಿತರ ಸಾಮಾಜಿಕ ಜಾಲತಾಣ ಸಂಸ್ಥೆಗಳ ಪ್ರತಿನಿಧಿಗಳ ನಡುವೆ ನಡೆದ ವರ್ಚುವಲ್ ಸಭೆಯಲ್ಲಿ ಈ ಸೂಚನೆ ನೀಡಲಾಗಿದೆ.
ಹುಸಿ ಬೆದರಿಕೆ ಕುರಿತ ಎಲ್ಲ ಪೋಸ್ಟ್ ಅಳಿಸಲು ಸೂಚನೆ
ವದಂತಿ ಪೋಸ್ಟ್‌ಗಳ ಬಗ್ಗೆ ಸರಕಾರಕ್ಕೆ 72 ತಾಸುಗಳಲ್ಲಿ ಮಾಹಿತಿ ನೀಡಿ ತಪ್ಪಿದರೆ ಐಟಿ ಕಾಯ್ದೆಯ ಸೆಕ್ಷನ್ 79, ಬಿಎನ್‌ಎಸ್ ಅನ್ವಯ ಶಿಕ್ಷೆ ಕಟ್ಟಿಟ್ಟ ಬುತ್ತಿ
ನಿರ್ದಿಷ್ಟಕಾಲ ಮಿತಿಯೊಳಗೆ ಪೋಸ್ಟ್ ಅಳಿಸಲು ಸೂಚನೆ
ಹುಸಿ ಬಾಂಬ್ ಬೆದರಿಕೆ ಪ್ರಕರಣ ಹೆಚ್ಚಳ ಹಿನ್ನೆಲೆಯಲ್ಲಿ ಕ್ರಮ