Advertisement
2017ರ ಜುಲೈಯಿಂದ 2020ರ ಜನವರಿ ವರೆಗಿನ ಅವಧಿಯಲ್ಲಿ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸದವರು ಇದೇ ಜು.1ರಿಂದ ಆ.30ರ ವರೆಗೆ ಸಲ್ಲಿಸಬಹುದು. ಇವರಿಗೆ ಲೇಟ್ ರಿಟರ್ನ್ಸ್ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ. ಬಾಕಿ ತೆರಿಗೆ ಮೇಲಿನ ಬಡ್ಡಿಯನ್ನೂ ಮನ್ನಾ ಮಾಡಲಾಗುತ್ತದೆ ಎಂದು ಘೋಷಿಸಿದ್ದಾರೆ.
Related Articles
ತೆರಿಗೆ ಸಲ್ಲಿಸದಿರುವ ವಾರ್ಷಿಕ 5 ಕೋಟಿ ರೂ. ವಹಿವಾಟಿನ ಕಂಪೆನಿಗಳಿಗೂ ಹೊಸ ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ, ಮಾರ್ಚ್, ಎಪ್ರಿಲ್‌ನಲ್ಲಿ ರಿಟರ್ನ್ಸ್ ಸಲ್ಲಿಸದ ಇಂಥ ಕಂಪೆನಿಗಳು ಸೆ. 30ರೊಳಗೆ ರಿಟರ್ನ್ಸ್ ಸಲ್ಲಿಸಿದರೆ ವಿಧಿಸುವ “ಲೇಟ್ ರಿಟರ್ನ್ಸ್’ ದಂಡವನ್ನು ಶೇ. 18ರಿಂದ ಶೇ. 9ಕ್ಕೆ ಇಳಿಸಲಾಗಿದೆ. ಜು. 31ರ ವರೆಗೆ ರದ್ದಾಗಿದ್ದ ಜಿಎಸ್‌ಟಿ ನೋಂದಣಿ ರೆಸ್ಟೋರೇಶನ್‌ಗೆಮರು ಚಾಲನೆ ನೀಡಲಾಗಿದ್ದು, ಅರ್ಜಿ ಸಲ್ಲಿಕೆಗೆ ಸೆ. 30ರ ವರೆಗೆ ಅವಕಾಶ ಇದೆ.
Advertisement
ಜಿಎಸ್‌ಟಿ ಪರಿಹಾರ: ಪ್ರತ್ಯೇಕ ಸಭೆಕೇಂದ್ರದಿಂದ ರಾಜ್ಯಗಳಿಗೆ ಮರು ವಿತರಣೆ ಯಾಗಬೇಕಿರುವ ಜಿಎಸ್‌ಟಿ ಪರಿಹಾರ ಧನ ಬಗ್ಗೆ ತೀರ್ಮಾನಿಸಲು ಜುಲೈಯಲ್ಲಿ ಪ್ರತ್ಯೇಕ ಸಭೆ ನಡೆಯಲಿದೆ ಎಂದು ಸಚಿವೆ ಹೇಳಿದ್ದಾರೆ.