Advertisement

ಮಾನಸಿಕ ಕಾಯಿಲೆಯಿದ್ದರೆ ಮರಣ ದಂಡನೆಯಿಂದ ಮುಕ್ತಿ

06:23 AM Apr 19, 2019 | mahesh |

ಹೊಸದಿಲ್ಲಿ: ಐತಿಹಾಸಿಕ ತೀರ್ಪೊಂದರಲ್ಲಿ, ಸುಪ್ರೀಂ ಕೋರ್ಟ್‌, ನ್ಯಾಯಾಲಯಗಳಿಂದ ಮರಣ ದಂಡನೆ ಶಿಕ್ಷೆ ಜಾರಿಗೊಂಡ ಅನಂತರ ಚಿತ್ತಕ್ಷೋಭೆಗೆ ತುತ್ತಾಗುವ ಕೈದಿಗಳನ್ನು ಶಿಕ್ಷೆಯಿಂದ ದೂರವಿಡುವ ಮನವಿಗೆ ಸಮ್ಮತಿ ಸೂಚಿಸಿದೆ.

Advertisement

ಜತೆಗೆ, ತೀರ್ಪು ಪ್ರಕಟಗೊಂಡ ನಂತರ ಅಪರಾಧಿಯಲ್ಲಿ ಮಾನಸಿಕ ಖನ್ನತೆ ಅಥವಾ ಇತ್ಯಾದಿ ಮಾನಸಿಕ ಕಾಯಿಲೆ ಗಳು ಕಾಣಿಸಿಕೊಂಡಿರುವುದನ್ನು “ಶಿಕ್ಷೆಗೊಳಪಟ್ಟ ಕೈದಿಗಳ ಮನಸ್ಥಿತಿಗಳನ್ನು ಆಳವಾಗಿ ಅಧ್ಯಯನ ಮಾಡಿರುವಂಥ ತಜ್ಞರುಳ್ಳ ಸಮಿತಿ’ಗಳೇ ನಿರ್ಧರಿಸ ಬೇಕೆಂದು ನ್ಯಾ. ಎನ್‌.ವಿ. ರಮಣ ನೇತೃತ್ವದ ನ್ಯಾ. ಎಂ.ಎಂ. ಶಾತನಗೌಡರ್‌ ಅವರುಳ್ಳ ನ್ಯಾಯಪೀಠ ತಾಕೀತು ಮಾಡಿದೆ. ಜತೆಗೆ, ಇಂಥ ಪ್ರಕರಣಗಳಲ್ಲಿ ಅಪರಾಧಿಗಳ ಮಾನಸಿಕ ಕಾಯಿಲೆಯನ್ನು ಸಾಬೀತುಗೊಳಿಸುವ ಸ್ವಾತಂತ್ರ್ಯವನ್ನು ಸಂಬಂಧಪಟ್ಟ ರಾಜ್ಯ ಸರಕಾರಗಳಿಗೆ ನ್ಯಾಯಪೀಠ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next