Advertisement

ಬಗರ್‌ಹುಕುಂ ಅರ್ಜಿ ವರ್ಗಾವಣೆ ವಿಳಂಬ

03:36 PM Sep 21, 2021 | Team Udayavani |

ಕೋಲಾರ: ಕೆಜಿಎಫ್‌ ಹೊಸ ತಾಲೂಕಾಗಿ 3 ವರ್ಷ ಕಳೆದರೂ ಬಗರ್‌ಹುಕುಂ ಸಾಗುವಳಿ ಅರ್ಜಿ ವರ್ಗಾವಣೆ ಮಾಡದೇ ಬಡವರಿಗೆ, ಭೂಹೀನರಿಗೆ ತೊಂದರೆಯುಂಟು ಮಾಡುತ್ತಿ ರುವ ಕುರಿತು ಸದನದಲ್ಲಿ ಶಾಸಕಿ ರೂಪಕಲಾ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ಸಚಿವ ಅಶೋಕ್‌ ಶೀಘ್ರ ಕ್ರಮದ ಭರವಸೆ ನೀಡಿದರು.

Advertisement

ಹೊಸ ತಾಲೂಕಾಗಿ 3 ವರ್ಷ ಕಳೆದಿದೆ, ನಾನು ಬಗರ್‌ಹುಕುಂ ಸಾಗುವಳಿ ಸಮಿತಿ ಅಧ್ಯಕ್ಷನಾಗಿ ದ್ದೇನೆ. ಆದರೆ, ನನ್ನ ತಾಲೂಕಿಗೆ ಬಂಗಾರಪೇಟೆ ತಾಲೂಕಿನಿಂದ ಬರಬೇಕಾದ ಫಾರಂ 53 ಹಾಗೂ ಫಾರಂ 57 ರಡಿಯ ಅರ್ಜಿಗಳು ಇನ್ನೂ ವರ್ಗಾವಣೆಯಾಗಿಲ್ಲ ಎಂದು ತಿಳಿಸಿದರು.

ನಮ್ಮ ಕೆಜಿಎಫ್‌ ಕ್ಷೇತ್ರಕ್ಕೆ ಸಂಬಂಧಿ ಸಿದಂತೆ 2,277 ಅರ್ಜಿಗಳು ಬಾಕಿ ಇವೆ ಎಂದು ಸಚಿವರೇ ಉತ್ತರ ನೀಡಿದ್ದಾರೆ, ಇದರಲ್ಲಿ 177 ಅರ್ಜಿಗಳು ಬಾಕಿ ಇವೆ ಎಂದೂ ಹೇಳಿದ್ದಾರೆ. ಆದರೆ, ಹೊಸ ತಾಲೂಕು ಆದ ನಂತರ ಈವರೆಗೂ ಸಮಿತಿ ಸಭೆ ನಡೆಸಿಲ್ಲ ಎಂದರೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಪುತ್ತೂರು:ಹೋಟೆಲ್ ನಲ್ಲಿ ಭಿನ್ನಕೋಮಿನ ಯವಕ-ಯುವತಿಗೆ ಹಲ್ಲೆ ಆರೋಪ:ಹಿಂದೂಸಂಘಟನೆಯ ಇಬ್ಬರ ಬಂಧನ

ನಮ್ಮ ತಹಶೀಲ್ದಾರ್‌ರನ್ನು ಕೇಳಿದರೆ ಅರ್ಜಿಗಳನ್ನು ಇನ್ನೂ ವರ್ಗಾವಣೆ ಮಾಡಿಲ್ಲ ಅಂತಾರೆ, ಸಾವಿರಾರು ರೈತರು, ಸಾಗುವಳಿ ಭೂಮಿಗಾಗಿ ಅರ್ಜಿ ಸಲ್ಲಿಸಿದ್ದಾರೆ, ಅವರ ಸಮಸ್ಯೆಗೆ ಶಾಸಕಿ ಯಾಗಿ ಸ್ಪಂದಿಸುವ ಅಗತ್ಯವಿದೆ, ಕೂಡಲೇ ಅರ್ಜಿಗಳನ್ನು ವರ್ಗಾಯಿಸಿ ಎಂದು ಆಗ್ರಹಿಸಿದರು. ಫಾರಂ 53 ರಡಿ 3,134 ಹಾಗೂ ಫಾರಂ 57 ರಡಿ 4,923 ಅರ್ಜಿಗಳು ಬಂದಿವೆ, ಈ ಸಂಬಂಧ ಜಿಲ್ಲಾಧಿ ಕಾರಿಗಳ ಗಮನಕ್ಕೂ ತಂದಿದ್ದೇನೆ, ಸಚಿವ ಅಶೋಕ್‌ ಅವರ ಬಗ್ಗೆ ಗೌರವವಿದೆ, ಅವರು 166 ಅರ್ಜಿಗಳು ಕಳೆದು ಹೋಗಿವೆ ಎಂದಿದ್ದಾರೆ. ಆದರೆ, ಉಳಿದ ಅರ್ಜಿಗಳು ಎಲ್ಲಿ ಎಂದು ಪ್ರಶ್ನಿಸಿ ದರು. ಕಂದಾಯ ಸಚಿವ ಅಶೋಕ್‌ ಶಾಸಕಿ ರೂಪಕಲಾ ಅವರಿಗೆ ಉತ್ತರ ನೀಡಿ, ಹೊಸದಾಗಿ ಆಗಿರುವ 50 ತಾಲೂಕುಗಳಲ್ಲೂ ಈ ಸಮಸ್ಯೆ ಇದೆ, ಈಗಾಗಲೇ ಬಗರ್‌ಹುಕುಂ ಸಾಗುವಳಿ ಅರ್ಜಿಗಳನ್ನು ಆಯಾ ತಾಲೂಕಿಗೆ ವರ್ಗಾಯಿಸಲು ಆದೇಶ ನೀಡಿದ್ದೇನೆ ಎಂದರು.

Advertisement

ಕೆಜಿಎಫ್‌ ತಾಲೂಕಿನಲ್ಲಿ 166 ಅರ್ಜಿಗಳು ಕಳೆದುಹೋಗಿವೆ ಎಂಬ ಮಾಹಿತಿ ಇದ್ದು, ಇವುಗಳನ್ನು ಪಡೆಯುವಾಗ ದಾಖಲಾತಿ ಪುಸ್ತಕದಲ್ಲಿ ನೋಂದಾಯಿಸಿದ್ದು, ಆ ಸಂಖ್ಯೆಗಳ ಆಧಾರದ ಮೇಲೆಯೇ ಅರ್ಜಿ ಪರಿಗಣಿಸಿ ನಂತರ ದಾಖಲೆಗಳನ್ನು ಪಡೆದುಕೊಳ್ಳಲು ಸೂಚಿಸಲಾಗಿದೆ ಎಂದು ಉತ್ತರ ನೀಡಿದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next