Advertisement

ಈಕೆ ಹೆಸರೇ “ಬೇಡದವಳು’!

07:30 AM Mar 27, 2018 | Team Udayavani |

ಮಾಂಡ್‌ಸರ್‌: ಹೆಸರಿನ ಬಗ್ಗೆ ಯಾಕೆ ತಲೆಕೆಡಿಸಿಕೊಳ್ಳುವುದು? ಹೆಸರಲ್ಲೇನಿದೆ? ಎಂದು ನಾವು ಸುಲಭವಾಗಿ ಹೇಳಿಬಿಡುತ್ತೇವೆ. ಇದೇ ಮಾತನ್ನು ಮಧ್ಯಪ್ರದೇಶದ ಯುವತಿ “ಅನ್‌ಚಾಹೀ’ಗೆ ಹೇಳಿ ನೋಡಿ. ಉತ್ತಮ ವಲ್ಲದ ಹೆಸರು ನೀಡುವ ಯಾತನೆಗಳ ಬಗ್ಗೆ ಆಕೆ ವಿವರಿಸುತ್ತಾಳೆ. 

Advertisement

ಮಧ್ಯಪ್ರದೇಶದ ಮಾಂಡ್‌ಸರ್‌ನ ಬಿಲೌಡ್‌ ಗ್ರಾಮದಲ್ಲಿ ಅನ್‌ಚಾಹೀ(ಬೇಡದವಳು) ಎಂಬ ವಿಲಕ್ಷಣ ಹೆಸರು ಹೊಂದಿರುವ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಮೊದಲನೇ ಅನ್‌ಚಾಹೀ ಪ್ರಥಮ ವರ್ಷದ ಬಿಎಸ್‌ಸಿ ಓದುತ್ತಿದ್ದರೆ, ಮತ್ತೂಬ್ಬ ಅನ್‌ಚಾಹೀ 6ನೇ ತರಗತಿಯಲ್ಲಿದ್ದಾಳೆ. ಈ ಹೆಣ್ಣು ಮಕ್ಕಳಿಗೆ ಈ ರೀತಿ ಹೆಸರಿಡುವ ಹಿಂದಿರುವ ಕಾರಣ, ಜನತೆಯಲ್ಲಿ ಇನ್ನೂ ಮನೆಮಾಡಿರುವ ಪುತ್ರ ವ್ಯಾಮೋಹ.  ಪದವಿ ಓದುತ್ತಿರುವ ಅನ್‌ಚಾಹೀ ಆಕೆಯ ಪೋಷಕರ 5ನೇ ಹೆಣ್ಣು ಮಗಳು. ಹೆಣ್ಣು ಮಗು ಜನಿಸಿದ ನಿರಾಶೆಗೆ ಆಕೆಗೆ ಅನ್‌ಚಾಹೀ(ಬೇಡದವಳು) ಎಂದು ಹೆಸರಿಟ್ಟರು. ಈ ಹೆಸರಿನಿಂದ ದುರದೃಷ್ಟ ಇಲ್ಲಿಗೇ ಕೊನೆಯಾಗಿ ನಂತರ ಗಂಡು ಮಗುವೇ ಜನಿಸುತ್ತದೆ ಎಂಬ ಮೂಢನಂಬಿಕೆ ಅವರದ್ದಾಗಿತ್ತು. ಆದರೂ, ನಂತರ ಹುಟ್ಟಿದ 6ನೇ ಮಗು ಕೂಡ ಹೆಣ್ಣೇ ಆಗಿತ್ತು. ಈಗ ಅನ್‌ಚಾಹೀ ತನ್ನ ಹೆಸರಿನಿಂದಾಗಿ ಪ್ರತಿದಿನ ಮುಜು ಗರಕ್ಕೀಡಾಗುತ್ತಿದ್ದಾಳೆ. ಜಿಗುಪ್ಸೆಗೊಳಗಾಗಿರುವ ಈಕೆ ಹೆಸರು ಬದಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಅರ್ಜಿ ನೀಡಿದ್ದಳು. ಆದರೂ, ಈ ಕುರಿತು ಅವಳಿಗೆ ಯಾವುದೇ ಸಹಕಾರ ಸಿಕ್ಕಿಲ್ಲ.  6ನೇ ತರಗತಿಯಲ್ಲಿ ಓದುತ್ತಿರುವ ಅನ್‌ಚಾಹೀಯದ್ದೂ ಇದೇ ಕಥೆ. ಆಕೆ ಪೋಷಕರ ಸತತ 3ನೇ ಹೆಣ್ಣು ಮಗು. ವಿಲಕ್ಷಣ ಹೆಸರಿಡುವ ಕ್ರಮ ಮಧ್ಯಪ್ರದೇಶದಲ್ಲಿ ಮಾತ್ರವಲ್ಲ, ಮಹಾರಾಷ್ಟ್ರದಲ್ಲೂ ಕಂಡುಬಂದಿದೆ. ಗಂಡು ಮಗುವಿವಾಗಿ ಹಂಬಲಿಸಿದ್ದ ಪೋಷಕರು ತಮ್ಮ ಮಗಳಿಗೆ “ನಾಖುಷಿ’ ಎಂದು ಹೆಸರಿಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next