Advertisement
1. ವಿಷಯಜ್ಞಾನ ಬೆಳೆಸಿಕೊಳ್ಳಿ…ಪರೀಕ್ಷೆ ಮುಗಿದ ಮೇಲೆ, ವಿದ್ಯಾರ್ಥಿಗಳು ಪುಸ್ತಕದ ಕಡೆ ತಲೆ ಹಾಕಿಯೂ ಮಲಗುವುದಿಲ್ಲ. ಹೀಗಾಗಿ, ಕಲಿತ ವಿಷಯಗಳೆಲ್ಲ ಕಾಲಕ್ರಮೇಣ ಮರೆತುಹೋಗುವ ಸಾಧ್ಯತೆಗಳಿರುತ್ತವೆ. ಆದ ಕಾರಣ, ವಿಷಯಗಳ ಮರುಜ್ಞಾನವನ್ನು ಸದಾ ಕಾಪಿಟ್ಟುಕೊಂಡಿರಬೇಕು. ನೆನಪಿರಲಿ, ಸಂದರ್ಶನದ ವೇಳೆ ನಿಮ್ಮನ್ನು ಕೈಹಿಡಿಯುವುದೇ ಈ ಸಂಗತಿ.
ಪದವಿ ನಂತರ ಕೆಲವು ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯುವ ಹಂಬಲದಲ್ಲಿರುತ್ತಾರೆ. ಅಂಥ ವಿದ್ಯಾರ್ಥಿಗಳು, ಮುಂದಿನ ಪರೀಕ್ಷೆಗಾಗಿ ತಮಗೆ ಸಿಕ್ಕ ಅವಕಾಶಗಳನ್ನು ಪೂರ್ಣವಾಗಿ ಬಳಸಿಕೊಳ್ಳಬಹುದು. ಈ ರೀತಿಯ ತಯಾರಿಯಿಂದ ನಿಮಗೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಬರುವ ಸಾಧ್ಯತೆಗಳಿರುತ್ತವೆ. ಸೀನಿಯರ್ಗಳ ಮಾರ್ಗದರ್ಶನ ಪಡೆದು, ಪರೀಕ್ಷೆಯಲ್ಲಿ ಯಾವ ರೀತಿಯ ಪ್ರಶ್ನೆಗಳು ಎದುರಾಗುತ್ತವೆ ಎಂಬ ಮಾಹಿತಿ ಕಲೆಹಾಕಿ. 3. ಸ್ಪರ್ಧಾತ್ಮಕ ಪರೀಕ್ಷೆ ಮೇಲೆ ಕಣ್ಣಿಡಿ
ಪದವಿ ನಂತರ ಅನೇಕ ವಿದ್ಯಾರ್ಥಿಗಳು ಕೆಎಎಸ್, ಐಎಎಸ್ ಬ್ಯಾಂಕಿಂಗ್ ಸೇರಿದಂತೆ, ಇನ್ನೂ ಅನೇಕ ರೀತಿಯ ಉದ್ಯಮಗಳಲ್ಲಿ ಕೆಲಸಪಡೆಯಲು ಇಚ್ಛಿಸುತ್ತಾರೆ. ಆದರೆ, ಇದು ಸ್ಪರ್ಧಾತ್ಮಕ ಜಗತ್ತು. ಜವಾನನಿಂದ ಹಿಡಿದು ದಿವಾನನ ಪೋಸ್ಟ್‌ವರೆಗೂ “ಪರೀಕ್ಷೆ’ ಎಂಬ ಹರ್ಡಲ್ಸ್ ಅನ್ನು ಜಿಗಿಯಲೇಬೇಕು. ಹಾಗಾಗಿ, ಸ್ಪರ್ಧಾತ್ಮಕ ಪರೀಕ್ಷೆಗಳತ್ತ ಒಂದು ಕಣ್ಣಿಡಿ. ಅದಕ್ಕೆ ಸಂಬಂಧಿಸಿದ ಸಾಕಷ್ಟು ಪುಸ್ತಕಗಳನ್ನು ಓದಿ. ಕೋಚಿಂಗ್ ಪಡೆದು, ಉತ್ತಮ ಅಭ್ಯಾಸ ನಡೆಸಿದರೆ, ಯಶಸ್ಸು ನಿಮ್ಮ ಕೈಯಲ್ಲಿ.
Related Articles
ನೀವು ಸ್ನಾತಕೋತ್ತರ ಪದವಿಯನ್ನು ಮಾಡಲು ಇಚ್ಛಿಸಿದರೆ, ಆ ಕೋರ್ಸ್‌ಗೆ ತಗಲುವ ವೆಚ್ಚ, ಕೋರ್ಸ್‌ನ ಅವಧಿ, ಕಾಲೇಜಿನಲ್ಲಿ ಲಭ್ಯವಿರುವ ಸೌಕರ್ಯಗಳು, ಕೋರ್ಸ್‌ನ ಲಭ್ಯತೆ, ಭವಿಷ್ಯದ ದಿನಗಳಲ್ಲಿ ಕೋರ್ಸ್‌ನಿಂದ ದೊರೆಯಬಹುದಾದ ಉದ್ಯೋಗದ ಬಗ್ಗೆ ಗೊತ್ತಿದ್ದವರ ಬಳಿ ಮಾಹಿತಿಯನ್ನು ಕಲೆಹಾಕಿರಿ. ಈ ವಿಚಾರದಲ್ಲಿ ಕೆಲವು ವೆಬ್‌ಸೈಟ್‌ಗಳು ನಿಮಗೆ ನೆರವಾಗುತ್ತವೆ.
Advertisement
5. ಕೌಶಲ್ಯ ಬೆಳೆಸಿಕೊಳ್ಳಿರಿ…ಭಾಷೆಯ ಮೇಲಿನ ಹಿಡಿತ, ಭಾಷಾ ಜ್ಞಾನದ ಕೊರತೆ, ಸಂವಹನ ಕೌಶಲ್ಯದ ಕೊರತೆ, ವಿಷಯ ಜ್ಞಾನದ ಅಪೂರ್ಣ ಮಾಹಿತಿ ಸೇರಿದಂತೆ ಇನ್ನೂ ಹಲವಾರು ಕೊರತೆಗಳ ಕಾರಣದಿಂದ ಅನೇಕ ವಿದ್ಯಾರ್ಥಿಗಳು ಕೆಲಸ ಪಡೆಯುವಲ್ಲಿ ವಿಫಲರಾಗಿರುತ್ತಾರೆ. ಇಂಥ ಸ್ಕಿಲ್ಸ್‌ಗಳನ್ನು ಬೆಳೆಸಲೆಂದೇ ನಾನಾ ಕೇಂದ್ರಗಳಿವೆ. ಅಲ್ಲಿಗೆ ಸೇರಿಕೊಂಡು, ಪಫೆìಕ್ಟ್ ಆಗಿ. 6. ಜಾಲತಾಣ ಸದುಪಯೋಗ
ಸಾಮಾಜಿಕ ಜಾಲತಾಣಗಳನ್ನು ಯೋಗ್ಯ ಉದ್ದೇಶಕ್ಕೆ ಬಳಸಿಕೊಳ್ಳಿ. ಒಂದೇ ಪರೀಕ್ಷೆಗೆ ಅಣಿಗೊಳ್ಳುತ್ತಿರುವ ಗೆಳೆಯರ ಗ್ರೂಪ್‌ಗ್ಳನ್ನು ಸೋಷಿಯಲ್ ಮೀಡಿಯಾಗಳಲ್ಲಿ ನಿರ್ಮಿಸಿಕೊಳ್ಳಿ. ಇದರಿಂದ ವಿಚಾರ ಹಂಚಿಕೆಯಾಗುತ್ತದೆ. ಅಲ್ಲದೆ, ನಿಮ್ಮ ಪರೀಕ್ಷಾ ತಯಾರಿಗೆ ಇನ್ನಷ್ಟು ಜ್ಞಾನ ಬಲ ಬರುತ್ತದೆ. 7. ಉತ್ತಮ ರೆಸ್ಯೂಮ್ ಸಿದ್ಧಪಡಿಸಿಕೊಳ್ಳಿ…
ನೀವು ಎಲ್ಲಿಗೇ ಉದ್ಯೋಗ ಬಯಸಿ ಹೋದರೂ, ಅಲ್ಲಿನ ಬಾಸ್ ಮೊದಲು ನಿಮ್ಮನ್ನು ಕೇಳುವುದು ರೆಸ್ಯೂಮ್. ಹಾಗಾಗಿ, ಒಳ್ಳೆಯ ರೆಸ್ಯೂಮ್ ಅನ್ನು ಸಿದ್ಧಪಡಿಸಿಕೊಳ್ಳಿ. ಅದರಲ್ಲಿ ನಿಮ್ಮ ಕುರಿತು ಎಲ್ಲ ಮಾಹಿತಿಗಳು ಇರಲಿ. ನಿಮ್ಮ ರೆಸ್ಯೂಮ್, ಸಂದರ್ಶಕರನ್ನು ಇಂಪ್ರಸ್ ಮಾಡುವ ಹಾಗಿರಲಿ.